KSRTCಗೆ ‘ಶಕ್ತಿ’ ತುಂಬಿದ ಸರ್ಕಾರ.. ಸಂಸ್ಥಾಪನಾ ದಿನಾಚರಣೆಯಲ್ಲೂ ಹಲವು ಯೋಜನೆಗಳು ಸಾಕಾರ..

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಂಸ್ಥಾಪನಾ ದಿನಾಚರಣೆ ಬುಧವಾರ (ಅಕ್ಟೋಬರ್16) ನಡೆಯಲಿದೆ. ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯ ಯಶೋಗಾಥೆ ನಂತರ ನಡೆಯುತ್ತಿರುವ ಸಂಸ್ಥಾಪನಾ ದಿನಾಚರಣೆಯು ಹಲವು ಜನಪ್ರಿಯ ಯೋಜನೆಗಳ ಜಾರಿಗೂ ಮುನ್ನುಡಿ ಬರೆಯಲಿದೆ.

ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-2ರ ಆವರಣದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಕೆಎಸ್ಸಾರ್ಟಿಸಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ (ವಾಸು) ಉಪಸ್ಥಿತಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಕೆಎಸ್ಸಾರ್ಟಿಸಿ ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ನಿಗಮದ ನಿರ್ದೇಶಕರಾದ ಡಾ. ನಂದಿನಿದೇವಿ ಕೆ., ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಸುಕುಮಾ‌ರ್ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಅನೇಕ ಯೋಜನೆಗಳನ್ನು ಅನಾವಣ ಮಾಡಲಾಗುವುದು ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮಗಳು:

  • ಮೊದಲ ಬಾರಿಗೆ ಪುನಶ್ವೇತನಗೊಂಡ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಚಾಲನೆ,

  • ಅಪಘಾತದಲ್ಲಿ ಮೃತರ ಅವಲಂಬಿತರಿಗೆ (3 ಮೃತ ಅವಲಂಬಿತರಿಗೆ) ಸಾರಿಗೆ ಸುರಕ್ಷಾ ವಿಮಾ ಯೋಜನೆಯ ತಲಾ 1 ಕೋಟಿ ರೂ.ಚೆಕ್ ವಿತರಣೆ,

  • ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಮೃತರ ಅವಲಂಬಿತರಿಗೆ ತಲಾ 10 ರೂ.ಲಕ್ಷ ಚೆಕ್ ವಿತರಣೆ

  • ಮೊದಲ ಬಾರಿಗೆ ಪುನಶ್ಚತನಗೊಂಡ ಐರಾವತ ಕ್ಲಬ್‌ ಕ್ಲಾಸ್ ಬಸ್ಸುಗಳಿಗೆ ಚಾಲನೆ

  • ಅಪಘಾತದಲ್ಲಿ ಮೃತರ ಅವಲಂಬಿತರಿಗೆ (3 ಮೃತ ಅವಲಂಬಿತರಿಗೆ) ಸಾರಿಗೆ ಸುರಕ್ಷಾ ವಿಮಾ ಯೋಜನೆಯ ತಲಾ ರೂ.1 ಕೋಟಿ ಚೆಕ್ ವಿತರಣೆ

  • ಅಪಘಾತ ಹೊರತುಪಡಿಸಿ ಇತರೆ ಕಾರಣಗಳಿಂದಾಗಿ ಮೃತರ ಅವಲಂಬಿತರಿಗೆ ತಲಾ ರೂ. 10 ಲಕ್ಷ ಚೆಕ್ ವಿತರಣೆ (37 ಮೃತ ಅವಲಂಬಿತರಿಗೆ)

  • ನಿಗಮದ ಆಂತರಿಕ ನಿಯತಕಾಲಿಕ ಸಾರಿಗೆ ಸಂಪದ ಹಾಗೂ ವಾಹನಗಳ ಪುನಶ್ಚತನ ಕೈಪಿಡಿ ಬಿಡುಗಡೆ

  • ಬಸ್ಸುಗಳ ಪುನಶ್ವೇತನ ಕಾರ್ಯಕ್ಕೆ ವಿಭಾಗ ಹಾಗೂ ಕಾರ್ಯಾಗಾರಗಳಿಗೆ ‘ಪ್ರಶಸ್ತಿ ಪ್ರದಾನ’,

  • ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಮೃತರ ಅವಲಂಬಿತರಿಗೆ (45 ಮೃತ ಅವಲಂಬಿತರಿಗೆ) ಸ್ವಚ್ಚತಾಗಾರ ಹುದ್ದೆಗೆ ನೇಮಕಾತಿ ಆದೇಶ ವಿತರಣೆ,

  • ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಮೃತರ ಅವಲಂಬಿತರಿಗೆ (103 ಮೃತ ಅವಲಂಬಿತರಿಗೆ) KST ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಾತಿ ಆದೇಶ ವಿತರಣೆ,

  • ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಮೃತ ಅವಲಂಬಿತರಿಗೆ ತಾಂತ್ರಿಕ ಸಹಾಯಕ ಹಾಗೂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಆದೇಶ ವಿತರಣೆ,

  • ಪ್ರಾದೇಶಿಕ ಕಾರ್ಯಾಗಾರಗಳಲ್ಲಿನ ಕ್ಯಾಂಟೀನ್ ನವೀಕರಣಕ್ಕೆ ನಗದು ಘೋಷಣೆ,

  • ಕಳೆದ 22 ತಿಂಗಳುಗಳಲ್ಲಿ ಶೂನ್ಯ ಅಪಘಾತ ದಾಖಲಿಸಿದ ಪಾವಗಡ ಘಟಕ ಹಾಗೂ ಘಟಕ ವ್ಯವಸ್ಥಾಪಕರಿಗೆ ನಗದು ಪುರಸ್ಕಾರ.

Related posts