ಬಿಜೆಪಿಗೆ ಪರ್ಯವಾಗಿ ಸಂಘ ‘ಕ್ರಾಂತಿ ವೀರ ಬ್ರಿಗೇಡ್’ ಹಿಂದೂ ಸಂಘಟನೆ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರು ‘ಕ್ರಾಂತಿ ವೀರ ಬ್ರಿಗೇಡ್’ ಸಂಘಟನೆ ಕಟ್ಟುವ ಘೋಷಣೆ ಮಾಡಿದ್ದಾರೆ.

‘ಕ್ರಾಂತಿವೀರ ಬ್ರಿಗೇಡ್’ ಎಲ್ಲಾ ಜಾತಿಗಳ ಮಠಾಧೀಶರನ್ನು ಒಳಗೊಂಡಿದ್ದು, ಹಿಂದೂಗಳ ಏಕೀಕರಣಕ್ಕಾಗಿ ಕೆಲಸ ಮಾಡಲಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಫೆಬ್ರವರಿ 4 ರಂದು ಬಸವನ ಬಾಗೇವಾಡಿಯಲ್ಲಿ ‘ಕ್ರಾಂತಿ ವೀರ ಬ್ರಿಗೇಡ್’ ಉದ್ಘಾಟನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಹಿಂದುತ್ವವನ್ನು ಉಳಿಸಲು ಕೆಲಸ ಮಾಡುವ ಮಠಾಧೀಶರ ವೇದಿಕೆ ರಚನೆ ‘ಕ್ರಾಂತಿ ವೀರ ಬ್ರಿಗೇಡ್’ನ ಉದ್ದೇಶವಾಗಿದೆ ಎಂದಿರುವ ಈಶ್ವರಪ್ಪ, ಉತ್ತರ ಕರ್ನಾಟಕದ ಮಠಾಧೀಶರ ಸಲಹೆಯಂತೆ ಈ ಸಂಘಟನೆಯನ್ನು ಹುಟ್ಟುಹಾಕಲಾಗುತ್ತಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

Related posts