ವಾಷಿಂಗ್ಟನ್: ವಿಶ್ವದ ಪ್ರಭಾವಿ ತನಿಖಾ ಸಂಸ್ಥೆಯಾಗಿರುವ ಅಮೇರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI), ಮುಖ್ಯಸ್ಥರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕ ಗೊಂಡಿದ್ದಾರೆ. ಕಶ್ಯಪ್ ಪಟೇಲ್ ಎಂದೂ ಗುರುತಾಗಿರುವ ಕಾಶ್ ಪಟೇಲ್ ಅವರನ್ನು ಸೆನೆಟ್ ಆಯ್ಕೆ ಮಾಡಿದೆ.
BREAKING VIDEO: Kash Patel CONFIRMED 51 To 47 As FBI Director!
Now The Veteran Intelligence Officer Can Go On The Offensive & Defend Trump From The Deep State's Criminal Agenda
» WATCH/SHARE THE LIVE X STREAM HERE:https://t.co/7NYWKPuERO pic.twitter.com/zCeJ2VYT7Q
— Alex Jones (@RealAlexJones) February 20, 2025
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರಾಗಿ ಗುರುತಿಸಿಕೊಂಡಿರುವ ಕಾಶ್ ಪಟೇಲ್(ಕಶ್ಯಪ್ ಪಟೇಲ್) ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಶ್ವೇತ ಭವನ ಮೂಲಗಳು ತಿಳಿಸಿವೆ.
ಕಾಶ್ ಪಟೇಲ್ ಅವರ ನೇಮಕವನ್ನು ಅಮೆರಿಕ ಸೆನೆಟ್ 51-49 ಮತಗಳಿಂದ ಅನುಮೋದಿಸಿದೆ. ಈ ನೇಮಕ ಪ್ರಕ್ರಿಯೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ಕಾಶ್ ಪಟೇಲ್ ‘ನನ್ನ ಮೇಲಿಟ್ಟಿರುವ ನಿಮ್ಮ ನಂಬಿಕೆಗೆ ಧನ್ಯವಾದಗಳು. ಅಮೆರಿಕದ ಜನರಿಗೆ ಪಾರದರ್ಶಕ, ಜವಾಬ್ದಾರಿಯುತ ಮತ್ತು ನ್ಯಾಯಕ್ಕೆ ಬದ್ಧವಾಗಿರುವ ಎಫ್ಬಿಐ ಅಗತ್ಯವಿದೆ’ ಎಂದು ಅವರು ಬರೆದುಕೊಂಡಿದ್ದಾರೆ.