ಭಾರತೀಯನಿಂದ ಗಿನ್ನೆಸ್ ದಾಖಲೆ: ಅತೀ ಹೆಚ್ಚು ಹೊತ್ತು ‘ಹರ್ಕ್ಯುಲಸ್ ಪಿಲ್ಲರ್’ ಹಿಡಿದುಟ್ಟುಕೊಂಡ ಖರಡಿ

ಭಾರತೀಯ ಅಥ್ಲೀಟ್ ವಿಸ್ಪಿ ಖರಡಿ ಅವರು ವಿಶ್ವದ ಅತೀ ದೊಡ್ಡ ‘ಹರ್ಕ್ಯುಲಸ್ ಪಿಲ್ಲರ್ ಹೋಲ್ಡ್’ ಅನ್ನು ಅತೀ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

   ಗುಜರಾತ್‌ನ ಸೂರತ್‌ನಲ್ಲಿ ಹೊಸ ದಾಖಲೆಯ ಸನ್ನಿವೇಶ ನಡೆದಿದೆ. ಖರಡಿ ಅವರು 2 ನಿಮಿಷ 10.75 ಸೆಕೆಂಡುಗಳ ಕಾಲ ಬೃಹತ್ ಕಂಬಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ತಮ್ಮ ಅಸಾಧಾರಣ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

ಗ್ರೀಕ್ ವಾಸ್ತುಶಿಲ್ಪದಿಂದ ಪ್ರೇರಿತವಾದ ಈ ಕಂಬಗಳು 123 ಇಂಚು ಎತ್ತರ ಮತ್ತು 20.5 ಇಂಚು ವ್ಯಾಸವನ್ನು ಹೊಂದಿವೆ. ಇದು ಸುಮಾರು166.7 – 168.9 ಕೆಜಿ ತೂಕವಿದ್ದು, ಅವು ಮಾನವ ಸಹಿಷ್ಣುತೆ ಮತ್ತು ಕಚ್ಚಾ ಶಕ್ತಿಯ ಮಿತಿಗಳನ್ನು ಮೀರಿವೆ ಎಂದು ಹೇಳಲಾಗುತ್ತಿದೆ.

Related posts