ಕೊಲ್ಕತ್ತಾದ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ:14 ಮಂದಿ ಸಾವು

ಕೊಲ್ಕತ್ತಾ: ಪಶ್ಚಿಮ ಬಂಗಾಲ ರಾಜಧಾನಿ ಕೊಲ್ಕತ್ತಾದ ಹೋಟೆಲ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ. ಫಲಪತ್ತಿ ಮಚ್ಚುವಾ ಬಳಿ ಈ ದುರ್ಘಟನೆ ಸಂಭವಿಸಿದೆ.
ಕಳೆದ ರಾತ್ರಿ 8.15ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, 14 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿರುವ ಕೊಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ವರ್ಮಾ, ರಕ್ಷಣಾ ತಂಡಗಳು ಹಲವು ಮಂದಿಯನ್ನು ರಕ್ಷಿಸಿವೆ ಎಂದು ತಿಳಿಸಿದ್ದಾರೆ.

Related posts