ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

ಮಿಲನ್ : ಪ್ರಸಿದ್ಧ ಮೋಟಾರ್‌ಸೈಕಲ್ ತಯಾರಕ ರಾಯಲ್ ಎನ್‌ಫೀಲ್ಡ್, ತನ್ನ ಹೊಸ ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ ಮಾದರಿ ಫ್ಲೈಯಿಂಗ್ ಫ್ಲೀ S6 ಅನ್ನು ಇಟಲಿಯ ಮಿಲನ್‌ನಲ್ಲಿ ನಡೆದ EICMA 2025 ಪ್ರದರ್ಶನದಲ್ಲಿ ಅನಾವರಣಗೊಳಿಸಿದೆ. ಕಂಪನಿಯ ‘ಸಿಟಿ-ಪ್ಲಸ್’ ಪ್ಲಾಟ್‌ಫಾರ್ಮ್ ಆಧಾರಿತ ಈ ನೂತನ ಮಾದರಿ, ರಾಯಲ್ ಎನ್‌ಫೀಲ್ಡ್‌ನ ಎಲೆಕ್ಟ್ರಿಕ್ ವಿಭಾಗದಲ್ಲಿ ಕಾಂಪ್ಯಾಕ್ಟ್, ಆದರೆ ಶಕ್ತಿಶಾಲಿ ಮೋಟಾರ್‌ಸೈಕಲ್ ಆಗಿ ಗುರುತಿಸಿಕೊಳ್ಳಲಿದೆ.

VIDEO | Motorcycle maker Royal Enfield, part of Eicher Motors Group, will start the global commercial roll-out of its electric bikes under the Flying Flea brand from next year, a top company official said.

Managing Director and Royal Enfield CEO B Govindarajan said: “We will be… pic.twitter.com/ffqNwnigm2

— Press Trust of India (@PTI_News) November 5, 2025

‘ಫ್ಲೈಯಿಂಗ್ ಫ್ಲೀ’ ಶ್ರೇಣಿಯ ಮೋಟಾರ್‌ಸೈಕಲ್‌ಗಳು ದ್ವಿತೀಯ ವಿಶ್ವಯುದ್ಧದ ಕಾಲದಲ್ಲಿ ಸೇನೆಯ ಏರ್-ಪೋರ್ಟಬಲ್ ಮೊಬೈಲಿಟಿ ಯೋಜನೆಗಾಗಿ ಬಳಸಲ್ಪಟ್ಟಿದ್ದವು. ಅದೇ ಪರಂಪರೆಯನ್ನು ಆಧುನಿಕ ತಂತ್ರಜ್ಞಾನದಲ್ಲಿ ಮರುರೂಪಿಸಿದಂತಾಗಿದೆ ಹೊಸ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್.

ವೈಶಿಷ್ಟ್ಯಗಳು:

ಹೊಸ ಮಾದರಿಯಲ್ಲಿ ಸುತ್ತಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ನೀಡಲಾಗಿದ್ದು, ಅದರ ಪ್ರಮುಖ ತಂತ್ರಾಂಶವನ್ನು ಕಂಪನಿಯೇ ಆಂತರಿಕವಾಗಿ ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆ ಕ್ವಾಲ್ಕಾಮ್ QWM2290 ಪ್ಲಾಟ್‌ಫಾರ್ಮ್ ಮೇಲೆ ಆಧಾರಿತವಾಗಿದೆ. ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್‌ವಾಚ್ ಏಕೀಕರಣ, ನ್ಯಾವಿಗೇಷನ್, ಧ್ವನಿ ಸಹಾಯಕ, ಬಹು ಸವಾರಿ ಮೋಡ್‌ಗಳು, ಲೀನ್-ಸೆನ್ಸಿಟಿವ್ ABS, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಮತ್ತು ಓಟಿಎ (OTA) ನವೀಕರಣಗಳು ಈ ಮಾದರಿಯ ತಾಂತ್ರಿಕ ಆಕರ್ಷಣೆಗಳಾಗಿವೆ.

ಕ್ಲಾಸಿಕ್ ಶೈಲಿಯನ್ನು ಉಳಿಸಿಕೊಂಡಿರುವ ಫ್ಲೈಯಿಂಗ್ ಫ್ಲೀ S6 ಸ್ಕ್ರ್ಯಾಂಬ್ಲರ್‌ನಲ್ಲಿ ಮುಂಭಾಗದಲ್ಲಿ USD ಫೋರ್ಕ್ ಸಸ್ಪೆನ್ಷನ್, ಚೈನ್ ಡ್ರೈವ್ ವ್ಯವಸ್ಥೆ, ಉದ್ದವಾದ ಸೀಟ್ ಹಾಗೂ 19 ಇಂಚಿನ ಮುಂಭಾಗದ, 18 ಇಂಚಿನ ಹಿಂಭಾಗದ ಚಕ್ರಗಳು ಅಳವಡಿಸಲಾಗಿದೆ. ಬ್ಯಾಟರಿಯನ್ನು ಮೆಗ್ನೀಸಿಯಮ್ ಕೇಸಿಂಗ್ ಒಳಗಡೆ ಪ್ಯಾಕ್ ಮಾಡಲಾಗಿದ್ದು, ಇದು ಶೀತೀಕರಣ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಬಾಳಿಕೆದಾಯಕತೆಯನ್ನು ಒದಗಿಸುತ್ತದೆ.

ಬಿಡುಗಡೆ ಮತ್ತು ಬೆಲೆ:

ರಾಯಲ್ ಎನ್‌ಫೀಲ್ಡ್ 2026ರ ಆರಂಭದಲ್ಲಿ ತನ್ನ ಕ್ಲಾಸಿಕ್ ಶೈಲಿಯ C6 ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ ಅನ್ನು 2026ರ ಕೊನೆಯಲ್ಲಿ ಮಾರುಕಟ್ಟೆಗೆ ತರಲಾಗುವ ನಿರೀಕ್ಷೆಯಿದೆ. ಭಾರತದಲ್ಲಿ ಈ ಮಾದರಿಯ ಬೆಲೆ ಸುಮಾರು ₹2 ಲಕ್ಷದೊಳಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಸಾಂಪ್ರದಾಯಿಕ ವಿನ್ಯಾಸಕ್ಕೆ ಆಧುನಿಕ ತಂತ್ರಜ್ಞಾನವನ್ನು ಬೆರೆಸಿದ ಈ ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್, ರಾಯಲ್ ಎನ್‌ಫೀಲ್ಡ್‌ನ ಹೊಸ ಯುಗದ ಪಾದಾರ್ಪಣೆಯಾಗಿ ಪರಿಗಣಿಸಲಾಗಿದೆ.

Related posts