ಬಿಹಾರದಲ್ಲಿ NDA ಜಯಭೇರಿ ಸಾಧ್ಯತೆ; ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಹೀಗಿದೆ

ನವದೆಹಲಿ: ಬಿಹಾರದಲ್ಲಿ ನಡೆದ ಚುನಾವಣಾ ಆಡಳಿತಾರೂಢ NDA ಹಾಗೂ ಪ್ರತಿಪಕ್ಷಗಳ ಒಕ್ಕೂಟ ಮಹಾಘಟಬಂಧನ್ ನಡುವೆ ನೇರ ಹಣಾಹಣಿ ನಡೆದಿದೆ. ಮತದಾನ ಮುಗಿದಿದ್ದು ಸೋಲು ಗೆಲುವಿನ ಲೆಕ್ಕಾಚಾರ ಸಾಗಿದೆ.

ನವೆಂಬರ್ 14ರಂದು ಮತ ಎಣಿಕೆ ನಡೆಯಲಿದ್ದು, ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಆದರೆ ಅಷ್ಟರಲ್ಲೇ ಮತದಾನೋತ್ತರ ಸಮೀಕ್ಷೆ ಫಲಿತಾಂಶ ಹೊರಬಿದ್ದಿದೆ. ಬಹುತೇಕ ಸಂಸ್ಥೆಗಳ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ NDA ಭಾರೀ ಬಹುಮತದೊಂದಿಗೆ ಈ ಬಾರಿಯೂ ಸರ್ಕಾರ ರಚಿಸುವ ಸಾಧ್ಯತೆಗಳಿವೆ ಎಂದು ಹೇಳಿವೆ. ಆದರೆ, ಕೆಲವು ಸಂಸ್ಥೆಗಳು ಮಹಾಘಟಬಂಧನ್ ಮುನ್ನಡೆ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದೂ ಹೇಳಿವೆ.

ಪೀಪಲ್ಸ್ ಪಲ್ಸ್, ಪೀಪಲ್ಸ್ ಇನ್‌ಸೈಟ್, ಮ್ಯಾಟ್ರಿಜ್, ಜೆವಿಸಿ, ಭಾಸ್ಕರ್ ಬಿಹಾರ, ಚಾಣಕ್ಯ ಸ್ಟ್ರಾಟಜೀಸ್ ಸಂಸ್ಥೆಗಳು NDA ಗೆಲುವಿನ ಸಾಧ್ಯತೆಗಳತ್ತ ಬೆಳಕುಚೆಲ್ಲಿವೆ.

ಒಟ್ಟಾರೆ ಫಲಿತಾಂಶ ಹೀಗಿದೆ:

  • ಪೀಪಲ್ಸ್ ಪಲ್ಸ್: NDA – 133-159 | ಮಹಾಘಟಬಂಧನ್ – 75-101 | ಜನ ಸುರಾಜ್ – 0-5 | ಇತರರು – 2-8
  • ಪೀಪಲ್ಸ್ ಇನ್‌ಸೈಟ್: NDA – 133-148 | ಮಹಾಘಟಬಂಧನ್ – 87-102
  • ಮ್ಯಾಟ್ರಿಜ್: NDA – 147-167 | ಮಹಾಘಟಬಂಧನ್ – 70-90
  • ಜೆವಿಸಿ: NDA – 135-140 | ಮಹಾಘಟಬಂಧನ್ – 88-103
  • ಭಾಸ್ಕರ್ ಬಿಹಾರ: NDA – 145-160 | ಮಹಾಘಟಬಂಧನ್ – 73-91
  • ಚಾಣಕ್ಯ ಸ್ಟ್ರಾಟಜೀಸ್: NDA – 130-138 | ಮಹಾಘಟಬಂಧನ್ – 100-108 | ಇತರರು – 3-5

ಒಟ್ಟಾರೆ, ಬಹುತೇಕ ಸಮೀಕ್ಷೆಗಳು ಬಿಹಾರದಲ್ಲಿ NDAಗೆ ಮತ್ತೊಮ್ಮೆ ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ತೋರಿಸುತ್ತಿವೆ. ಆದರೆ ಅಂತಿಮ ನಿರ್ಧಾರಕ್ಕೆ ನವೆಂಬರ್ 14ರ ಮತ ಎಣಿಕೆಯವರೆಗೂ ಕಾಯಬೇಕಿದೆ.

Related posts