ಅಂಕಾರಾ: ಟರ್ಕಿ ಸೇನೆಗೆ ಸೇರಿದ ಸರಕು ಸಾಗಾಣಿಕಾ ವಿಮಾನವೊಂದು ಭೀಕರ ದುರಂತಕ್ಕೀಡಾಗಿ, ವಿಮಾನದಲ್ಲಿದ್ದ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಟರ್ಕಿ ರಕ್ಷಣಾ ಸಚಿವಾಲಯ ದೃಢಪಡಿಸಿದೆ.
ಅಜರ್ಬೈಜಾನ್‌ನಿಂದ ಟರ್ಕಿಗೆ ವಾಪಸಾಗುತ್ತಿದ್ದ ಸಿ–130 ಮಾದರಿಯ ಸೇನಾ ಸಾರಿಗೆ ವಿಮಾನ ಮಂಗಳವಾರ ಜಾರ್ಜಿಯಾದ ವಾಯುಪ್ರದೇಶದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ ಹಾಗೂ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ವಿಮಾನವು ಅಜರ್ಬೈಜಾನ್‌ನ ಗಂಜಾ ವಿಮಾನ ನಿಲ್ದಾಣದಿಂದ ಟರ್ಕಿಯತ್ತ ಪ್ರಯಾಣ ಆರಂಭಿಸಿತ್ತು. ಜಾರ್ಜಿಯಾ ವಾಯುಪ್ರದೇಶವನ್ನು ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಕಂಟ್ರೋಲ್ ರೂಮ್‌ನೊಂದಿಗೆ ಸಂಪರ್ಕ ಕಳೆದುಕೊಂಡಿತು.
ತುರ್ತು ಸಂದರ್ಭ ಸಂದೇಶ ಕಳುಹಿಸಲು ಪೈಲಟ್‌ಗಳಿಗೆ ಅವಕಾಶವೇ ಸಿಕ್ಕಿಲ್ಲ ಎನ್ನಲಾಗಿದ್ದು, ಘಟನೆ ಅತ್ಯಂತ ಕ್ಷಿಪ್ರವಾಗಿ ಸಂಭವಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
