ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ 40 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಪಡೆದು ಹೀನಾಯ ಸೋಲುಂಡಿದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಮಹಾಘಟಬಂಧನ್ ಕನಸು ಭಗ್ನವಾಗಿದ್ದು, ಈ ಬಗ್ಗೆ ಇದೀಗ ಮೈತ್ರಿಪಕ್ಷಗಳು ಆತ್ಮವಳಿಕಣಕ್ಕೆ ಮುಂದಾಗಿವೆ.
ಫಲಿತಾಂಶ ಬಹಿರಂಗವಾಗುತ್ತಿದ್ದಂತೆಯೇ, ಬಿಹಾರದ ಉಸ್ತುವಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಅಭಿಪ್ರಾಯಗಳು, ಬೂತ್ ಮಟ್ಟದ ವ್ಯತ್ಯಾಸಗಳು ಮತ್ತು ಇವಿಎಂ ಚಲನೆಯ ದಾಖಲೆಗಳ “ವಿಧಿವಿಜ್ಞಾನ ಲೆಕ್ಕಪರಿಶೋಧನೆ”ಗೆ ಸೂಚನೆ ನೀಡಿದ್ದಾರೆ.
ಇನ್ನೊಂದೆಡೆ, ಇಂಡಿಯಾ ಬ್ಲಾಕ್ನೊಳಗೆ ಚಿಂತನ-ಮಂಥನ ಸಾಗಿದೆ. ಆರ್ಜೆಡಿಯ ತೇಜಸ್ವಿ ಯಾದವ್ ಅವರ ಪಕ್ಷ 75 ರಿಂದ 31 ಸ್ಥಾನಗಳಿಗೆ ಕುಸಿದಿದೆ. ರಾಹುಲ್ ಗಾಂಧಿಯವರ “ನೈತಿಕ ಸ್ಪಷ್ಟತೆ”ಯನ್ನು ಶ್ಲಾಘಿಸಿರುವ ತೇಜಸ್ವಿ ಯಾದವ್, ಆದರೆ ಸಾಂಸ್ಥಿಕ ವಿಧ್ವಂಸಕತೆಯ ಮೇಲೆ ಮಾತ್ರ ಗಮನಹರಿಸುವ ಬದಲು “ಸಾಂಸ್ಥಿಕ ಕುಸಿತ”ದ ಮೇಲೆ ಕೇಂದ್ರೀಕರಿಸಬೇಕೆಂದು ಸಲಹೆ ಮುಂದಿಟ್ಟಿದ್ದಾರೆ.
ಸಿಪಿಐ(ಎಂಎಲ್) ಲಿಬರೇಶನ್ನ ದೀಪಂಕರ್ ಭಟ್ಟಾಚಾರ್ಯ ಅವರು “ಅನ್ಯಾಯಯುತ ಚುನಾವಣೆ” ಮಾರ್ಗ ಬಗೆಗಿನ ಆರೋಪಗಳನ್ನು ಅನುಮೋದಿಸಿದರು, 127 ಸ್ಟ್ರಾಂಗ್ ರೂಮ್ಗಳಲ್ಲಿ ಸಿಸಿಟಿವಿ ಬ್ಲಾಕೌಟ್ಗಳನ್ನು ಅವರು ಉಲ್ಲೇಖಿಸಿದ್ದಾರೆ.
