ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ. ಮಲ್ಲೇಶ್ ಬಾಬು ಅವರು ತಮ್ಮ ಕ್ಷೇತ್ರದ ರೈಲು ಸಂಬಂಧಿತ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನಸೆಳೆದರು.
ಕೋಲಾರದ ಕೆ.ಜಿ.ಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಿಂದ ಪ್ರತಿದಿನ 25 ರಿಂದ 30 ಸಾವಿರ ಜನರು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಪ್ರಯಾಣಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಸ್ತುತ 12 ಬೋಗಿಗಳಿರುವ ರೈಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಲು ರೈಲ್ವೆ ಸಚಿವಾಲಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಕೋಲಾರ–ವೈಟ್‌ಫೀಲ್ಡ್ ನಡುವೆ ನರಸಾಪುರ ಮತ್ತು ಹೊಸಕೋಟೆ ಮೂಲಕ 52.9 ಕಿಮೀ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ನಡೆದಿರುವ ಸಮೀಕ್ಷೆ ಪೂರ್ಣಗೊಂಡಿರುವುದನ್ನೂ ಅವರು ಗಮನಕ್ಕೆ ತಂದರು. ಸಾರ್ವಜನಿಕರಿಗೆ ಬಹಳ ಉಪಕಾರಿಯಾಗುವ ಈ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ನೀಡಬೇಕೆಂದು ಸಂಸದರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ಶೂನ್ಯ ವೇಳೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಎಂ. ಮಲ್ಲೇಶ್ ಬಾಬು ಅವರು ಕೋಲಾರ ಕ್ಷೇತ್ರ ವ್ಯಾಪ್ತಿಯಲ್ಲಿನ ರೈಲ್ವೆ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.

ಕೋಲಾರದ ಕೆ.ಜಿ.ಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಿಂದ ಪ್ರತಿ ದಿನ ಸುಮಾರು 25–30 ಸಾವಿರ ಜನರು ಕೆಲಸ ಹಾಗೂ ಕಾಲೇಜುಗಳಿಗೆ… pic.twitter.com/7emPwAy46U
— Janata Dal Secular (@JanataDal_S) December 5, 2025