ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಸಾಂಸ್ಕೃತಿಕ ದಾಖಲೆ; ಒಂದೇ ವೇದಿಕೆಯಲ್ಲಿ 40ಕ್ಕೂ ಹೆಚ್ಚು ಗಾಯಕರ ಸಂಗೀತ ರಸದೌತಣ

ಉಡುಪಿ: ಆಧ್ಯಾತ್ಮಿಕ ಪರಂಪರೆಯಲ್ಲಿ ದೇವರ ನಾಡು ಎಂದೇ ಪ್ರಸಿದ್ಧಿಯಾಗಿರುವ ಉಡುಪಿ ಪರ್ಯಾಯ ಮಹೋತ್ಸವ ದೇಶದ ಗಮನಸೆಳೆಯಿತು. ಶಿರೂರು ಪರ್ಯಾಯ 2026ರ ಶುಭ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ವೈಭವವು ಈ ಮಹಾಕೈಂಕರ್ಯಕ್ಕೆ ಆಕರ್ಷಣೆ ತುಂಬಿತು.

ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ತಂಡ ಆಯೋಜಿಸಿದ ವಿಶಿಷ್ಟ ಸಂಗೀತ ರಸಮಂಜರಿ ಕಾರ್ಯಕ್ರಮ ಪರ್ಯಾಯ ಇತಿಹಾಸದಲ್ಲೇ ವಿಶಿಷ್ಟ ಎನಿಸಿತು. ಉಡುಪಿ ಪರ್ಯಾಯದ ಇತಿಹಾಸದಲ್ಲೇ ಮೊದಲ ಬಾರಿಗೆ 40ಕ್ಕೂ ಹೆಚ್ಚು ಹವ್ಯಾಸಿ ಗಾಯಕರನ್ನು ಒಂದೇ ವೇದಿಕೆಯಲ್ಲಿ ಕರೆತರಲಾಗಿತ್ತು, 70ಕ್ಕೂ ಹೆಚ್ಚು ಹಾಡುಗಳು ಸಂಗೀತಾಸಕ್ತರ ಮನಸೂರೆಗೊಳಿಸಿತು. ಒಂದೇ ವೇದಿಕೆಯಲ್ಲಿ ಇಷ್ಟು ಸಂಖ್ಯೆಯ ಗಾಯಕರ ಸಮ್ಮಿಲನವು ಸಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.

ಶ್ರೀಕೃಷ್ಣನ ನಾಡಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆಗಳು ತಮ್ಮ ಗಾಯನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು ವಿಶೇಷ.

ಪ್ರಸಾದ್ ನೇತ್ರಾಲಯ, ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಕಂಪನಿ ಹಾಗೂ ಯೋಶಿಕಾ ಕನ್ಸಕ್ಷನ್ ಮತ್ತು ಫ್ಯಾಬ್ರಿಕೇಶನ್ಸ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ಈ ಸಂಗೀತ ರಸಸಂಜೆ ಕಾರ್ಯಕ್ರಮವು ಸುದೇಶ್ ಶೆಟ್ಟಿ ಮತ್ತು ಶರ್ಮಿಳಾ ಶೆಟ್ಟಿ ಅವರ ಪುತ್ರಿ ಕು. ಸ್ಪರ್ಶ ಶೆಟ್ಟಿ ಅವರ ಸ್ಮರಣಾರ್ಥವಾಗಿ ನೆರವೇರಿತು.

ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ಮಂಚಿ ಮತ್ತು ಅಂಬಲಪಾಡಿ ಕೇಂದ್ರವಾಗಿಸಿಕೊಂಡ ಕರೋಕೆ ಸಂಗೀತ ತಂಡ ಸಂಗೀತಾಸಕ್ತರಿಗೆ ರಸದೌತಣ ಉಣಬಡಿಸಿದೆ. ಈ ಸಂಸ್ಥೆಯನ್ನು 2024ರಲ್ಲಿ ಮಣಿಪಾಲದ ಮಂಚಿಯ ತೇಜಸ್ವಿನಿ ಅನಿಲ್‌ ರಾಜ್ ಮತ್ತು ಅನಿಲ್ ರಾಜ್ ಸ್ಥಾಪಿಸಿದ್ದಾರೆ. ಪರ್ಯಾಯ 2026ರ ಈ ವಿಶೇಷ ಸಂಗೀತ ಸಂಜೆಯನ್ನು ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಸಂಯೋಜಿಸಿದ್ದರು. ದೀಪಕ್ ಪುಟ್ಟರಾಜ್ ಅವರು ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು.

Related posts