ಕೊರೋನಾ ಎಂಬ ಅಗೋಚರ ವೈರಾಣು ಜನರ ಕನಸುಗಳನ್ನೇ ನುಚ್ಚು ನೂರು ಮಾಡಿದೆ. ಇತ್ತೀಚಿನ ದಶಕಗಳಲ್ಲಿ ಜನ ಹಿಂದೆಂದೂ ಕಂಡರಿಯದ ಸಂಕಷ್ಟ ಎದುರಿಸುತ್ತಿದ್ದಾರೆ. ಒಂದೊಮ್ಮೆ ಈ ಕರಾಳತೆಯ ವ್ಯಥೆಯಲ್ಲಿದ್ದ ಇಡೀ ತಾಲೂಕು ಈಗ ನಿರಾಳವಾಗಿದೆ.
ಮಂಗಳೂರು: ಕೊರೋನಾ ಸಂದರ್ಭದಲ್ಲಿ ಇಡೀ ನಾಡು ಆತಂಕಕ್ಕೊಳಗಾಗಿದೆ. ಅನೇಕ ಜಿಲ್ಲೆಗಳು ರೆಡ್ ಝೋನ್ ಎಂದು ಗುರುತಿಸಲ್ಪಟ್ಟಿದೆ. ಈ ವಿಚಾರದಲ್ಲಿ ಕರಾವಳಿ ಜಿಲ್ಲೆಗಳೂ ಹೊರತಾಗಿಲ್ಲ.
ಕೊರೋನಾ ಕಾಂಡದ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿತ್ತು. ಒಂದೆಡೆ ಭಟ್ಕಳಕ್ಕೆ ನಂಟು, ಇನ್ನೊಂದೆಡೆ ಕಾಸರಗೋಡಿಗೆ ಅಂಟುಕೊಂಡಿದ್ದ ದಕ್ಷಿಣಕನ್ನಡ ಅತ್ಯಂತ ಸಂದಿಗ್ಧ ಸ್ಥಿತಿಯಲ್ಲಿತ್ತು. ಅದರಲ್ಲೂ ಕಾಸರಗೋಡಿನಲ್ಲಿ ಹಬ್ಬುತ್ತಿದ್ದ ಮಾರಣಾಂತಿಕ ಸೋಂಕು, ಬಂಟ್ವಾಳ ತಾಲೂಕಿನ ಮಗುವಿಗೆ ಹರಡಿದ ನಂತರವಂತೂ ಇಡೀ ತಾಲೂಕಿನಲ್ಲಿ ತಲ್ಲಣದ ತರಂಗ ಎದ್ದಿತು. ಆದರೆ ಅಲ್ಲಿನ ಜನರು ತಮಗೆ ತಾವೇ ಹಾಕಿದ ನಿರ್ಬಂಧದಿಂದಾಗಿ ಇಂದು ಕೊರೋನಾ ಮುಕ್ತ ನಾಡಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇಡೀ ದೇಶದ ಗಮನಸೆಳೆದಿದೆ.
ಶಾಸಕರೇ ಹೀರೊ
ಕಾಸರಗೋಡು ಕೇರಳ ರಾಜ್ಯದ ಜಿಲ್ಲೆಯಾಗಿದ್ದರೂ ಅಲ್ಲಿನ ಜನರಿಗೆ ಹತ್ತಿರದ ನಂಟು ಇರುವುದು ದಕ್ಷಿಣಕನ್ನಡದ ಜನರ ಜೊತೆ. ಆರಂಭದಲ್ಲಿ ಕಾಸರಗೋಡು ದೇಶದಲ್ಲೇ ಅತೀ ಹೆಚ್ಚು ಸೋಂಕಿತರನ್ನು ಹೊಂದಿದ ಜಿಲ್ಲೆ ಎಂದು ಕುಖ್ಯಾತಿ ಹೊಂದಿತು. ಅಲ್ಲಿ ಶರವೇಗದಲ್ಲಿ ಕೊರೋನಾ ಹರಡುತ್ತಿದ್ದಾಗ ನಾವು ಎಚ್ಚರದಿಂದ ಇರಬೇಕೆಂದು ಬಂಟ್ವಾಳ ತಾಲೂಕಿನ ಜನರಿಗೆ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಕರೆ ಕೊಟ್ಟರು. ಕೇರಳದಿಂದ ಬಂಟ್ವಾಳಕ್ಕೆ ಪ್ರವೇಶಿಸುವ ಊರುಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದರು. ರಾಜ್ಯ ಸರ್ಕಾರದ ಆದೇಶಕ್ಕೆ ಮುನ್ನವೇ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಮಟ್ಟದಲ್ಲಿ ಯುವಕರ ಪಡೆಯನ್ನು ಕಟ್ಟಿ ಜಾಗೃತಗೊಳಿಸಿದರು. ಈ ಯುವಕರ ಸೈನ್ಯ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ಇಡೀ ರಾಜ್ಯಕ್ಕೆ ಸೂತ್ರವೊಂದನ್ನು ಹೇಳಿಕೊಟ್ಟಿತು.
ಯಾವಾಗ ಕಾಸರಗೋಡಿನ ಕೊರೋನಾ ಪೀಡಿತ ಕುಟುಂಬದಿಂದ ಬಂಟ್ವಾಳ ತಾಲೂಕಿನ ಮಗುವಿಗೆ ಸೋಂಕು ಅಂಟಿಕೊಂಡ ನಂತರವಂತೂ ರಾಜೇಶ್ ನಾಯ್ಕ್ ಸಾರಥ್ಯದ ಸ್ವಯಂಸೇವಕರ ಆರೋಗ್ಯ ತಂಡ ವಿಶೇಷ ಜಾಗೃತಿ ಕಾರ್ಯಾಚರಣೆಗಿಳಿದು ಪರಿಸ್ಥಿತಿಯನ್ನು ಕಟ್ಟಿಹಾಕುವಲ್ಲಿ ಯಶಸ್ಸಾಯಿತು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಸಕ ನಾಯ್ಕ್ ಅವರ ಸಮರ್ಥ ನಾಯಕತ್ವ
ಶಾಸಕ ರಾಜೇಶ್ ನಾಯ್ಕ್ ಅವರು ಕೊರೋನಾ ವಿಚಾರದಲ್ಲಿ ಸರ್ಕಾರಿ ಇಲಾಖಾ ಸಿಬ್ಬಂದಿಗಿಂತ ಸ್ವಯಂಸೇವಕರನ್ನೇ ನೆಚ್ಚಿಕೊಂಡು ಕೆಲಸಕ್ಕಿಳಿದಿದ್ದರು. ಅಷ್ಟೇ ಅಲ್ಲ, ಸರ್ಕಾರಿ ಇಲಾಖೆಗಳ ಸಿಬ್ಬಂದಿ ವಿರಮಿಸದ ರೀತಿ ಸೂತ್ರ ಬರೆದರು. ನಿತ್ಯ ಐದಾರು ಗ್ರಾಮ ಪಂಚಾತಾತ್ ವ್ಯಾಪ್ತಿಯಲ್ಲಿ ಅವರು ಬೀಡು ಬಿಟ್ಟಾಗ ಸೈನಿಕರಂತೆ ಕೆಲಸ ಮಾಡುವುದು ತಹಸೀಲ್ದಾರ್ ಸಹಿತ ಎಲ್ಲಾ ಅಧಿಕಾರಿಗಳೂ, ಸಿಬ್ಬಂದಿಗೂ ಅನಿವಾರ್ಯವಾಗಿತ್ತು. ಈ ಕಾರಣದಿಂದಾಗಿಯೇ ಕೊರೋನಾ ವಕ್ಕರಿಸಿದ್ದ ನಾಡಿನಲ್ಲೀಗ ಜನ ನಿರಾಳರಾಗಿರೋದು.
ಶಾಸಕರ ಈ ಕಾರ್ಯಕ್ಕೆ ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತವಾಗಿದೆ. ಈ ಕುರಿತಂತೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅಭಿಮಾನದಿಂದ ಬರೆದ ಪತ್ರ ಗಮನ ಸೆಳೆದಿದೆ.
ಕೋರೊನಾ ಮಹಾಮಾರಿಯ ಬೀತಿಯಲ್ಲಿರುವ ಜನಸಾಮಾನ್ಯರಿಗೆ ಅಗತ್ಯ ನೆರವಿನ ಜೊತೆ ಆತ್ಮವಿಶ್ವಾಸದ ಬಲ ತುಂಬುತ್ತಿರುವ ನಮ್ಮ ಶಾಸಕ ರಾಜೇಶ್ ನಾಯ್ಕ್
ನಮ್ಮ ಶಾಸಕರ ಯಾವುದೇ ಕಾರ್ಯವಿರಲಿ ಅದರ ಅಂತಿಮ ಉದ್ದೇಶ ಕಟ್ಟ ಕಡೆಯ ನಾಗರೀಕನ ಕಲ್ಯಾಣ ಅವರ ಉದ್ದೇಶ ಮಾತು ಕೆಲಸವಗಬಾರದು ಕೆಲಸ ಮಾತಗಬೇಕು ಅನ್ನುವುದು ಅವರ ಕಾರ್ಯಪದ್ದತಿ ಬಹಿರಂಗವಾಗಿ ಯಾವುದೇ ಭರವಸೆಗಳನ್ನು ನೀಡದೆ ಪ್ರಚಾರದ ಅಬ್ಬರವಿಲ್ಲದೆ ಕಳೆದ ಲಾಕ್ ಡಾನ್ ಅರಂಭಗೊಂಡ ಇಂದಿನವರೆಗೂ ಯಾರು ನೈಜವಾಗಿ ಸಂಕಷ್ಟದಲ್ಲಿದ್ದಾರೋ ಅವರ ಸಂಕಷ್ಟಗಳಿಗೆ ಸ್ಪಂದನೆಯನ್ನು ನೀಡುತ್ತಿದ್ದಾರೆ ತನ್ನ ಅಪಾರ ದೇವದುರ್ಲಭ ಪಕ್ಷದ ಕಾರ್ಯಕರ್ತರು ಸಂಘಟನೆಯ ಕಾರ್ಯಕರ್ತರು ಕ್ಷೇತ್ರದ ಧಾರ್ಮಿಕ ಮುಖಂಡರ ಸಹಬಾಗಿತ್ವದಲ್ಲಿ ಹಸಿವನ್ನು ನೀಗಿಸುವಲ್ಲಿ ಕಾರ್ಯಪ್ರವರತ್ತರಾಗಿದ್ದಾರೆ ತಾಲೂಕಿನ ಎಲ್ಲಾ ಪಡಿತರ ಚೀಟಿ ಹೊಂದಿರುವ ಬಿ ಪಿ ಎಲ್ ಕಾರ್ಡ್ ದಾರರಿಗೆ ಸೂಕ್ತ ಸಮಯದಲ್ಲಿ ಮುತುವರ್ಜಿ ವಹಿಸಿ ಅಹಾರ ಪೊರೈಕೆಯಾಗುವಲ್ಲಿ ಶ್ರಮಿಸಿ ನಿರಾಶ್ರಿರ ವಲಸೆ ಕೂಲಿಕಾರ್ಮಿಕರ ಹಸಿವನ್ನು ನೀಗಿಸಲು ವಿಶೇಷ ಪ್ರಯತ್ನ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ನನ್ನ ಕ್ಷೇತ್ರದ ಬಂದುಗಳು ಅನಿವಾರ್ಯವಾಗಿ ಇ ಪರಿಸ್ಥಿತಿಯಲ್ಲಿರುವುದನ್ನು ಕಂಡು ಯಾರು ಮನೆಯಿಂದ ಹೊರ ಬರಬೇಡಿ ನಿಮ್ಮ ಅಗತ್ಯತೆಗಳನ್ನು ಪೊರೈಸಲು ತಾಲೂಕು ಅಡಳಿತದ ಜೊತೆ ನಾನಿದ್ದೇನೆ ಎನ್ನುವ ಭರವಸೆ ನಿಜಕ್ಕೂ ಸಮದಾನದ ನಿಟ್ಟುಸಿರು ಮೂಡಿಸಿದೆ ಯಾಕೆಂದರೆ ನಮ್ಮ ಶಾಸಕರು ಶಾಸಕರಾಗುವ ಮುಂಚೆಯೆ ಜನರ ಏಳಿಗೆಯನ್ನು ಕಣ್ಣಿಗೆ ಕಾಣುವಂತೆ ಮಾಡಿ ತೋರಿಸಿದವರು ಸಹಸ್ರಾರು ಜನರ ಹಸಿವನ್ನು ನೀಗಿಸಿದವರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗ್ರಾಮಗ್ರಾಮಕ್ಕೂ ಅಗತ್ಯ ಸೌಲಭ್ಯಗಳನ್ನು ಅರ್ಹ ವ್ಯಕ್ತಿ ಗಳಿಗೆ ಒದಗಿಸಿದವರು ನಮ್ಮ ಶಾಸಕರು.
ಇದನ್ನೂ ಓದಿ.. SSLC, PUC ಫಲಿತಾಂಶ ವಿಚಾರ.. ಆಗಸ್ಟ್’ನಲ್ಲಿ ಶಾಲೆ-ಕಾಲೇಜು ಆರಂಭ? – ಅಧಿಕೃತ ಆದೇಶ ನಂತರವೇ ಸುದ್ದಿಗೆ ಮಹತ್ವ
ಸ್ವತಃ ತಾನೆ ಕಾರು ಚಲಾಯಿಸಿಕೊಂಡು ಕ್ಷೇತ್ರದುದ್ದಕ್ಕೂ ಸಂಚರಿಸುತ್ತಿದ್ದ ಇವರು ಜನರ ಅರೋಗ್ಯದ ದ್ರಷ್ಟಿಯಿಂದ ಅಧಿಕಾರಿಗಳ ಜೊತೆ ನನ್ನ ಕ್ಷೇತ್ರದ ಜನರ ಅರೋಗ್ಯ ಕ್ಕಾಗಿ ನೀವು ಕಠಿಣ ಕ್ರಮಗಳನ್ನು ಕೈಗೊಳ್ಳಿ ಎನ್ನು ಅದೇಶದ ಹಿಂದೆ ಕ್ಷೇತ್ರದ ಬಂದುಗಳ ಅರೋಗ್ಯದ ಕಾಳಜಿಯಿದೆ. ಯಾವೊಬ್ಬ ಜನಸಾಮಾನ್ಯನು ಇನ್ನಿತರ ಅರೋಗ್ಯ ಸಮಸ್ಯೆಗಳಲ್ಲಿ ನರಳಬಾರದೆಂದು ತನ್ನ ಕಾರ್ಯಲಯದಲ್ಲಿ ಅರೋಗ್ಯಕ್ಕೆ ಸಂಬಂದಿಸಿದ ಸಹಾಯವಾಣಿ ತೆರದಿದ್ದಾರೆ. ತಾಲೂಕಿನ ಅಶಾ ಕಾರ್ಯಕರ್ತೆಯರಿಗೆ ಅ್ಯಂಬುಲೆನ್ಸ್ ಚಾಲಕರಿಗೆ ಪೌರಕಾರ್ಮಿಕರಿಗೆ ಸಹಕಾರ ನೀಡಿ ಕೋರೊನಾ ನಿರ್ಮೂಲನೆಗೆ ಸಹಕರಿಸಲು ಶಕ್ತಿ ತುಂಬುತ್ತಿದ್ದಾರೆ. ದಾದಿಯರು ವೈದ್ಯರ ಜೊತೆ ನಿರಂತರ ಸಮಲೋಚನೆ ನಡೆಸಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುತ್ತಿದ್ದಾರೆ ನಮ್ಮ ಶಾಸಕರು ಗ್ರಾಮಗ್ರಾಮಗಳ ಟಾಸ್ಕ್ ಪೊರ್ಸ್ ಕಮಿಟಿ ಜನಪ್ರತಿನಿಧಿಗಳನ್ನು ಸೇರಿಸಿ ಇ ಸಂಕಷ್ಟ ಕಾಲದಲ್ಲಿ ಪಕ್ಷ ಬೇಧ ಮರೆತು ಮಾನವೀಯ ನೆಲೆಯಲ್ಲಿ ಪರಸ್ಪರ ಸಹಕರಿಸಿ ನಮ್ಮ ಜನರ ಸಂಕಷ್ಟಗಳನ್ನು ನಿವಾರಿಸುವ ನಿವೇದನೆಯಂತು ನನ್ನ ಕ್ಷೇತ್ರದ ಶಾಸಕರ ಕಾಳಜಿಯನ್ನ ವ್ಯಕ್ತಪಡಿಸುತ್ತಿದೆ. ನಮ್ಮ ಸಂಕಷ್ಟಗಳ ಕಾಲದಲ್ಲಿ ನಮ್ಮ ಜೊತೆಯಾಗಿರುವ ಶಾಸಕರ ಪ್ರೀತಿ ಕಾಳಜಿ ನನ್ನಗಂತೂ ನನ್ನ ಮತ ವ್ಯರ್ಥವಾಗಿಲ್ಲವೆಂಬ ಬಾವನೆ ಮೂಡಿಸಿದೆ
ರಾಜೇಶ್ ನಾಯ್ಕ್ ಅಭಿಮಾನಿ
ಇದನ್ನೂ ಓದಿ.. ನೀವು ರೆಡ್ ಝೋನ್’ನಲ್ಲಿದ್ದೀರಿ.. ಹಾಗಾದರೆ ನಿಮ್ಮ ಸ್ಥಿತಿ ಹೇಗಿರುತ್ತೆ ಗೊತ್ತಾ?