ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯರು ಟಾರ್ಗೆಟ್.. ಯಾಕಂತೀರಾ?

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಹಿತಾಸಕ್ತಿಗೆ ವಿರುದ್ಧವಾಗಿ ಸಂದೇಶಗಳನ್ನು ಹರಿಯಬಿಟ್ಟರೆ ಅದು ಶಿಕ್ಷಾರ್ಹ ಅಪರಾಧ ಎಂಬುದು ಎಲ್ಲರಿಗೂ ಗೊತ್ತು. ಇದೀಗ ಈ ರೀತಿಯ ಪೋಸ್ಟ್’ಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಮತ್ತಷ್ಟು ಕರಾಳ ಶಿಕ್ಷೆಯಾಗುತ್ತಿದೆ. ಅರ್ಥಾತ್ ಅನ್ಯ ಧರ್ಮೀಯರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

ಇತ್ತೀಚೆಗಷ್ಟೇ ಒಂದು ಸಮುದಾಯದ ಬಗ್ಗೆ ಪೋಸ್ಟ್ ಮಾಡಿದ್ದಾರೆನ್ನಲಾದ ಅನಿವಾಸಿ ಭಾರತೀಯ ವೈದ್ಯೆಯನ್ನು ಪೊಲೀಸರು ವಶಕ್ಕೆ ಪಡೆದರೆಂಬ ವಿಚಾರ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಅದೇ ರೀತಿ ಇಸ್ಲಾಮ್ ವಿರೋಧಿ ಪೋಸ್ಟ್ ಹಾಕುವ NRI ಮಂದಿ ವಿರುದ್ಧ ಅಭಿಯಾನವೇ ಆರಂಭವಾಗಿದೆ.

ಭಾರತೀಯರ ಹೆಸರುಗಳಲ್ಲಿರುವ ಅಕೌಂಟ್ ಮೂಲಕ ಫೇಸ್ಬುಕ್’ನಲ್ಲಿ ಬಗೆಬಗೆಯ ಪೋಸ್ಟ್’ಗಳು ರಾರಾಜಿಸುತ್ತಿರುತ್ತವೆ. ಬಹುತೇಕ ಅಕೌಂಟ್’ಗಳು ಅರಬ್ ರಾಷ್ಟ್ರಗಳಿಂದಲೇ ಆಪರೇಟ್ ಆಗ್ತಾ ಇವೆಯಂತೆ.

ಇದೀಗ ಗಲ್ಫ್ ರಾಷ್ಟ್ರಗಳಲ್ಲಿರುವ ಮುಸ್ಲಿಂ ಯುವಕರರು ಎನ್.ಆರ್.ಐ ತಂಡ ರಚಿಸಿ ಸಂಘಟಿತವಾಗಿ ಕೆಲಸ ಮಾಡುತ್ತಿವೆ. ಇಸ್ಲಾಂ ವಿರುದ್ಧ ದ್ವೇಷ ಹರಡುವವರ ಯತ್ನವನ್ನು ವಿಫಲಗೊಳಿಸುವುದೇ ಇವರ ಉದ್ದೇಶವೆನ್ನಲಾಗಿದೆ. ಫೇಸ್ಬುಕ್’ನಲ್ಲಿ ಇಸ್ಲಾಂ ವಿರುದ್ದದ ಪೋಸ್ಟ್’ಗಳಿದ್ದರೆ ಅವುಗಳನ್ನು ಸಂಗ್ರಹಿಸಿ, ಅದನ್ನು ಪೋಸ್ಟ್ ಮಾಡಿದವರು ಗಲ್ಫ್ ರಾಷ್ಟ್ರಗಳಲ್ಲಿದ್ದರೆ ಅಂಥವರನ್ನು ಅಲ್ಲಿಂದ  ಓಡಿಸಲು ಒತ್ತಡ ಹೇರುತ್ತಿದ್ದಾರೆ. ಇಸ್ಲಾಂ ರಾಷ್ಟ್ರಗಳ ವೀಸಾ ಪಡೆದು ಇಸ್ಲಾಮ್ ವಿರೋಧಿ ನೀತಿ ಅನುಸರಿಸುತ್ತಿದ್ದಾರೆಂಬ ಆಪಾದನೆ ಹೊರಿಸಿ ಅದಕ್ಕೆ ಫೇಸ್ಬುಕ್ ಪೋಸ್ಟ್’ಗಳನ್ನೂ ಸಾಕ್ಷಿಯನ್ನಾಗಿಸುತ್ತಾರೆ.

ಮುಸ್ಲಿಂ ಯುವಕರ ಎನ್.ಆರ್.ಐ ತಂಡದ ಕೆಂಗಣ್ಣಿಗೆ ಗುರಿಯಾಗಿರುವ ಅನೇಕರು ಈಗಾಗಲೇ ಜೈಲು ಸೇರಿದ್ದಾರೆಂದೂ ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಅನೇಕರ ವೀಸಾ ರದ್ದುಪಡಿಸಿ ಸ್ವದೇಶಕ್ಕೆ ಕಳುಹಿಸಿಕೊಡುವ ಪ್ರಕ್ರಿಯೆಯೂ ಆರಂಭವಾಗಿದೆ ಎನ್ನಲಾಗುತ್ತಿದೆ.

ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂ ಉದ್ಯೋಗಿಗಳ ವಿರುದ್ಧ ಈ ರೀತಿ ಹಗೆ ಸಾಧಿಸುತ್ತಿರುವ ಬಗ್ಗೆ ಭಾರತದಲ್ಲಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.. ಈ ಬಗ್ಗೆ ಜಾಗೃತರಾಗಿರುವಂತೆ ಸಲಹೆಗಳನ್ನು ನೀಡುತ್ತಿದ್ದಾರೆ.

ಇದನ್ನೂ ಓದಿ.. ಕೊರೋನಾ ಸೋಂಕಿತರು ಹತ್ತಿರ ಬಂದರೆ ಅಲಾರ್ಮ್: ಇಲ್ಲಿದೆ ನೋಡಿ ಮೊಬೈಲ್ ಆ್ಯಪ್ ವಿಶೇಷ. 

 

Related posts