ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹವಾ ಇನ್ನೂ ತಗ್ಗಿಲ್ಲ. ಮತ್ತಷ್ಟು ಮಂಡಿಯಲಿ ಸೋಂಕು ದೃಢಪಡುತ್ತಿದೆ. ಆದ್ರೆ ಸಾವಿನ ಸಂಗತಿ ಬಗ್ಗೆ ವರದಿಯಾಗುತ್ತಿಲ್ಲ ಎಂಬುದೇ ನೆಮ್ಮದಿಯ ಸಂಗತಿ.
ಬುಧವಾರ ಮಧ್ಯಾಹ್ನದ ಹೊತ್ತಿಗೆ 19 ಪಾಸಿಟಿವ್ ಪ್ರಕರಣಗಳು ಗೊತ್ತಾಗಿದ್ದರೆ ಅನಂತರ ಬೆಳಕಿಗೆ ಬಂದಿರುವ ಪಾಸಿಟಿವ್ ಪ್ರಕರಣ ಒಂದು ಮಾತ್ರ. ಕರ್ನಾಟಕದಲ್ಲಿ ಈ ವರೆಗೆ ಸೋಂಕಿತರ ಸಂಖ್ಯೆ 693ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ.. ಮದ್ಯಪ್ರಿಯರಿಗೆ ಮತ್ತೆ ಶಾಕಿಂಗ್ ನ್ಯೂಸ್
ನಿಟ್ಟೆ ವಿದ್ಯಾರ್ಥಿನಿಗೆ ಸೋಂಕು?
ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಬುಧವಾರ ಒಂದೇ ದಿನ 12 ಪ್ರಕರಣಗಳು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಈ ನಡುವೆ ಕೆಲ ದಿನಗಳ ಹಿಂದೆ ವಿದ್ಯಾರ್ಥಿನಿಯೊಬ್ಬಳೂ ಸೋಂಕಿಗೊಳಗಾಗಿದ್ದು, ಆಕೆ ಉಡುಪಿ ಜಿಲ್ಲೆ ನಿಟ್ಟೆ ಇಂಜಿನೀಯರಿಂಗ್ ಕಾಲೇಜು ವಿದ್ಯಾರ್ಥಿನಿ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಈಕೆ ತನ್ನ ಊರಾದ ಬಾದಾಮಿಗೆ ತೆರಳಿದ್ದರು. ಈ ವಿದ್ಯಾರ್ಥಿನಿಗೆ ಎಲ್ಲಿ ಸೋಂಕು ತಗುಲಿದೆ ಎಂಬ ಬಗ್ಗೆ ಗೊಂದಲ ಉಂಟಾಗಿದೆ.
ಈ ಸುದ್ದಿ ಹರಡುತ್ತಿದ್ದಂತೆಯೇ ಉಡುಪಿ ಜಿಲ್ಲೆಯ ಜನರಲ್ಲೂ ಆತಂಕ ಉಂಟಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಉಡುಪಿ ಜಿಲ್ಲಾಧಿಕಾರಿಗಳು, ತಾವು ಬಾಗಲಕೋಟೆ ಡಿಸಿ ಹಾಗೂ ಎಸ್ಪಿ ಜೊತೆ ಮಾತನಾಡಿದ್ದು, ಅಲ್ಲೇ ಸ್ಥಳೀಯವಾಗಿ ವಿದ್ಯಾರ್ತಿನಿಗೆ ಸೋಂಕು ತಗುಲಿರಬಹುದು ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ಉಡುಪಿ ಜಿಲ್ಲೆಯ ಜನರು ಆತಂಕಕ್ಕೊಳಗಾಗುವುದು ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ.. ಜೊತೆ ಜೊತೆಯಲಿ.. ನನ್ನರಸಿ ರಾಧೆ.. ನಮ್ಮನೆ ಯುವರಾಣಿ.. ಗಟ್ಟಿಮೇಳ.. ಯಾವ ಸೀರಿಯಲ್? ಲೆಕ್ಕಾಚಾರ ಶುರು..