ಕರುನಾಡಲ್ಲಿ ಕಿಲ್ಲರ್ ಕೊರೋನಾ; ಮತ್ತೆ 105 ಮಂದಿಗೆ ಸೋಂಕು

ಬೆಂಗಳೂರು: ದೇಶದಲ್ಲಿ ಕೊರೋನಾ ಸವಾರಿ ಆತಂಕಕಾರಿ ರೀತಿಯಲ್ಲಿ ಸಾಗಿದ್ದು, ಇತ್ತ ಕರ್ನಾಟಕದಲ್ಲೂ ನಿತ್ಯವೂ ಜನ ಬೆಚ್ಚಿ ಬೀಳಿಸುವ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಕೂಡಾ ಕಳವಳಕಾರಿ ಸಂಗತಿಗಳನ್ನೇ ಬಹಿರಂಗಪಡಿಸಿದೆ.

ಗುರುವಾರ ಸಂಜೆಯಿಂದ ಇಂದು ಮಧ್ಯಾಹ್ನವರೆಗಿನ ಕೊರೋನಾ ವಿದ್ಯಮಾನಗಳನ್ನು ಆಧರಿಸಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ರಾಜ್ಯದಲ್ಲಿ 105 ಹೊಸ ಪಾಸಿಟಿವ್ ಕೇಸ್’ಗಳತ್ತ ಬೊಟ್ಟು ಮಾಡಿದೆ.

  • ಚಿಕ್ಕಬಳ್ಳಾಪುರ – 45 ಹೊಸ ಕೇಸ್
  • ಹಾಸನ – 14 ಹೊಸ ಕೇಸ್
  • ತುಮಕೂರು – 8 ಹೊಸ ಕೇಸ್
  • ಬೀದರ್ – 6 ಹೊಸ ಕೇಸ್
  • ಬೆಂಗಳೂರು ನಗರ – 5 ಹೊಸ ಕೇಸ್
  • ಚಿಕ್ಕಮಗಳೂರು – 5 ಹೊಸ ಕೇಸ್
  • ಬೆಂಗಳೂರು ಗ್ರಾಮಾಂತರ – 4 ಹೊಸ ಕೇಸ್
  • ಮಂಡ್ಯ – 3 ಹೊಸ ಕೇಸ್
  • ಹಾವೇರಿ – 3 ಹೊಸ ಕೇಸ್
  • ದಾವಣಗೆರೆ – 3 ಹೊಸ ಕೇಸ್
  • ಧಾರವಾಡ – 2 ಹೊಸ ಕೇಸ್
  • ವಿಜಯಪುರ – 2 ಹೊಸ ಕೇಸ್
  • ಬಾಗಲಕೋಟೆ – 1 ಹೊಸ ಕೇಸ್
  • ಚಿತ್ರದುರ್ಗ – 1 ಹೊಸ ಕೇಸ್
  • ಉತ್ತರಕನ್ನಡ – 1 ಹೊಸ ಕೇಸ್
  • ದಕ್ಷಿಣಕನ್ನಡ – 1 ಹೊಸ ಕೇಸ್
  • ಬೆಳಗಾವಿ – 1 ಹೊಸ ಕೇಸ್

ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದ್ದು, ಇದೀಗ ಹೊಸದಾಗಿ ಕಾಣಿಸಿಕೊಂಡಿರುವ ಕೇಸ್’ಗಳ ಪೈಕಿ ಹೆಚ್ಚಿನವು ಮುಂಬೈ ಟ್ರಾವೆಲ್ ಹಿಸ್ಟರಿಯುಳ್ಳವರದ್ದೆಂದು ಹೇಳಲಾಗುತ್ತಿದೆ.

ಇದನ್ನೂ ಓದಿ.. ಸೋನಿಯಾ ಗಾಂಧಿ Vs ಶೋಭಾ ಕರಾಂದ್ಲಾಜೆ; FIR ರದ್ದು ಮಾಡದಂತೆ ಸಲಹೆ 

 

Related posts