ಬೆಂಗಳೂರು: ಕೃಷಿಯೇತರರು ಇನ್ನು ಮುಂದೆ ಕೃಷಿ ಭೂಮಿ ಖರೀದಿಸಬಹುದು. ಇಂಥದ್ದೊಂದು ಅವಕಾಶ ನೀಡುವ ನಿಟ್ಟಿನಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79-ಎ, 79-ಬಿ, 79-ಸಿ ಮತ್ತು ಸೆಕ್ಷನ್ 80ನ್ನು ರದ್ದುಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಪ್ರತಿ ಕುಟುಂಬಕ್ಕೆ 10 ಘಟಕಗಳಿಂದ 20 ಘಟಕಗಳಿಗೆ ದ್ವಿಗುಣಗೊಳಿಸಲು ಅವಕಾಶ ಸಿಗಲಿದ್ದು, ಪ್ರತಿ ಕುಟುಂಬ ಗರಿಷ್ಠ 108 ಎಕರೆ ಜಮೀನನ್ನು ಹೊಂದಿರಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.