ಮದುವೆಯಲ್ಲಿ 300 ಮಂದಿ ಭಾಗಿ. ಈ ಪೈಕಿ 80 ಮಂದಿಗೆ ಸೋಂಕು, ವರ ಸಾವು

ಮದುವೆಯ ಸಂಭ್ರಮ.. ಸುಮಾರು 300 ಮಂದಿ ಪಾಲ್ಗೊಂಡಿದ್ದ ಸಮಾರಂಭ.. ಕೆಲವೇ ದಿನಗಳಲ್ಲಿ 80 ಮಂದಿಯಲ್ಲಿ ಕೊರೋನಾ ಸೋಂಕು.. ಈ ಪೈಕಿ ಮದುಮಗನೇ ಸೋಂಕಿಗೆ ಬಲಿ.

ಕೊರೋನಾ ಸಂಕಟ ಕಾಲದಲ್ಲಿ ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧವಿದೆ. ಮದುವೆಯಂತಹಾ ಸಮಾರಂಭಗಳಿಗೆ ಅನುಮತಿ ಇದೆಯಾದರೂ ನಿರ್ದಿಷ್ಟ ಸಂಖ್ಯೆಯಷ್ಟು ಮಂದಿ ಮಾತ್ರ ಭಾಗಿಯಾಗಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಆದರೆ ಬಿಹಾರದ ಪಾಟೀನಾ ಬಳಿ ಮದುವೆಯಲ್ಲಿ ನಿಯಮ ಮೀರಿ ಜನ ಪಾಲ್ಗೊಂಡಿದ್ದು, ಬಹುತೇಕ ಮಂದಿ ಸೋಂಕಿಗೊಳಗಾದ ಆಘಾತಕಾರಿ ಘಟನೆ ನಡೆದಿದೆ.

ಪಾಟ್ನದ ಪಾಲಿಗಂಜ್ ಎಂಬಲ್ಲಿ ಜೂನ್ 15 ರಂದು ಸಾಫ್ಟ್’ವೇರ್ ಇಂಜಿನಿಯರ್’ನ ವಿವಾಹ ಸಮಾರಂಭ ನೆರವೇರಿತ್ತು. ಕೆಲ ದಿನಗಳ ನಂತರ ವಾರ ಜ್ವರದಿಂದ ಬಳಲಿದ್ದು ಆತ ಕೊರೋನಾ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ. ಆದರೆ ಅಷ್ಟರಲ್ಲೇ ವಿಷಮ ಪರಿಸ್ಥಿತಿ ತಲುಪಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.

ಇದರಿಂದ ಎಚ್ಛೆತ್ತುಕೊಂಡ ಅಧಿಕಾರಿಗಳು ಆ ಸಮಾರಂಭದಲ್ಲಿ ಸುಮಾರು ಪಾಲ್ಗೊಂಡಿದ್ದಾರೆನ್ನಲಾದ 300 ಮಂದಿಯ ಮಾಹಿತಿ ಕಲೆಹಾಕುವ ಪ್ರಯತ್ನ ಮಾಡಿದ್ದಾರೆ. ಹಲವರನ್ನು ಪರೀಕ್ಷೆಗೆ ಗುರಿಪಡಿಸಲಾಗಿದ್ದು ಈ ಪೈಕಿ ಸುಮಾರು 80 ಮಂದಿ ಸೋಂಕಿಗೊಳಗಾಗಿದ್ದಾರೆ ಎನ್ನಲಾಗಿದೆ.

Related posts