ಖ್ಯಾತ ಬಾಲಿವುಡ್ ಕೊರಿಯೋಗ್ರಾಫರ್ ಸರೋಜ್ ಖಾನ್ ವಿಧಿವಶ

ಮುಂಬೈ: ‘ಏಕ್ ದೋ ತೀನ್..’, ‘ಚೋಲಿ ಕೆ ಪೀಚೆ ಕ್ಯಾಹೆ..’, ‘ಡೋಲಾ ರೆ ಡೋಲಾ ರೇ..’ ಹಾಡುಗಳು ಒಂದು ಕಾಲದಲ್ಲಿ ಸೂಪರ್ ಹಿಟ್. ಈ ಹಾಡುಗಳನ್ನು ಕೇಳದವರಿಲ್ಲ. ಹಾಡುಗಳು ಮೊಳಗುತ್ತಿದ್ದಂತೆ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದವರೂ ಅನೇಕರು. ಈ ಹಾಡಿನ ನೃತ್ಯ ಸಂಯೋಜಕಿ ಇನ್ನು ನೆನಪು ಮಾತ್ರ.

ಬಾಲಿವುಡ್ ಜಗತ್ತನ್ನು ಆಳಿದ ಮತ್ತೊಬ್ಬರು ಸೆಲೆಬ್ರಿಟಿ ವಿಧಿವಶರಾಗಿದ್ದಾರೆ. ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

71 ವರ್ಷ ವಯಸ್ಸಿನ ಸರೋಜ್ ಖಾನ್ ಸುಮಾರು ೫ ದಶಕಗಳಿಂದ ಬಾಲಿವುಡ್ ಸಿನಿಮಾ ರಂಗದಲ್ಲಿ ನೃತ್ಯ ನಿರ್ದೇಶನ ಮಾಡಿ ಗಮನಸೆಳೆದಿದ್ದರು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಮುಂಬೈನ ಬಾಂದ್ರಾದ ಗುರುನಾನಕ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ನಸುಕಿನ ಜಾವ ಹೃದಯಾಘಾತಕ್ಕೊಳಗಾದರೆಂದು ಆಸ್ಪತ್ರ್ ಮೂಲಗಳು ತಿಳಿಸಿವೆ. ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
1974ರ ‘ನಾಮ್’ ಸಿನಿಮಾದ ನೃತ್ಯ ಸಂಯೋಜಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು 2 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.

ಸರೋಜ್ ಖಾನ್ ನಿಧಾನಕ್ಕೆ ಬಾಲಿವುಡ್ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. ನಟ ಅಮೀರ್ ಖಾನ್ ಅವರು ಸರೋಜ್ ಖಾನ್ ದಾಖಲಾಗಿದ್ದ ಆಸ್ಪತ್ರೆಯ ವೀಡಿಯೋ ತುಣುಕನ್ನು ಟ್ವೀಟ್ ಮಾಡಿ ದುಃಖ ತೋಡಿಕೊಂಡಿದ್ದಾರೆ.

Related posts