ರಾಜ್ಯದಲ್ಲಿ ಮತ್ತೆ 1498 ಮಂದಿಗೆ ಕೊರೋನಾ ಸೋಂಕು

ಬೆಂಗಳೂರು: ತಲ್ಲಣದ ತರಂಗ ಎಬ್ಬಿಸಿರುವ ಕೊರೋನಾ ವೈರಾಣು, ಭಾರತವನ್ನೂ ಸಂದಿಗ್ಧ ಸ್ಥಿತಿಯಲ್ಲಿ ನಿಲ್ಲಿಸಿದೆ. ಕರ್ನಾಟಕ ಕೂಡಾ ಆತಂಕದ ಸ್ಥಿತಿಯಲ್ಲಿದೆ.

ಇದೀಗ ಪ್ರತಿದಿನವೂ ಸಾವಿರಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗುತ್ತಿದ್ದು, ಇಂದು ಮತ್ತೆ 1,498 ಪಾಸಿಟಿವ್ ಕೇಸ್’ಗಳು ವರದಿಯಾಗಿವೆ.

ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ಈ ಕಳವಳಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಇಂದು 15 ಮಂದಿ ಕೊರೋನಾ ಸೋಂಕಿಗೊಳಗಾಗಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೋನಾ ಸೋಂಕಿಗೊಳಗಾಗಿ ಸಾವನ್ನಪಿದವರ ಸಂಖ್ಯೆ 416ಕ್ಕೆ ಏರಿಕೆಯಾಗಿದೆ. ಜೊತೆಗೆ 1498 ಪಾಸಿಟಿವ್ ಕೇಸ್’ಗಳು ವರದಿಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 26,416ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

ರಾಜಧಾನಿ ಬೆಂಗಳೂರಿನಲ್ಲಿ 800 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡದಲ್ಲಿ 83, ಧಾರವಾಡದಲ್ಲಿ 57, ಕಲಬುರಗಿ ಜಿಲ್ಲೆಯಲ್ಲಿ51, ಬೀದರ್ ಜಿಲ್ಲೆಯಲ್ಲೂ 51 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

 

 

Related posts