ದೆಹಲಿ: ದೇಶದಲ್ಲೋ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವಂತೆಯೇ ಇದೀಗ ಪರ್ಯಾಯ ಔಷಧಿಗಾಗಿ ಹುಡುಕಾಟ ಸಾಗಿದೆ. ಈ ಸಂದರ್ಭದಲ್ಲೇ ಕೋವಿಡ್ 19 ಸೋಂಕಿತರಿಗೆ ಸಂತಸದ ಸುದ್ದಿಯನ್ನು ಬಯೋಕಾನ್ ಸಂಸ್ಥೆ ನೀಡಿದೆ.
ಕೊರೋನಾ ಸೋಂಕಿತರಿಗೆ ಬಯೋಕಾನ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಇಟೋಲಿಝುಮಾಬ್’ ಔಷಧ ಬಳಸಲು ಕೇಂದ್ರ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ.
ತುರ್ತು ಸಂದರ್ಭದಲ್ಲಿ ನಿಯಂತ್ರಿತ ಪ್ರಮಾಣದಲ್ಲಿ ಈ ಔಷಧಿ ಬಳಕೆ ಮಾಡಬೇಕೆಂಬ ಷರತ್ತಿನೊಂದಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. ಈ ಬಗ್ಗೆ ಬಯೋಕಾನ್ ಸಂಸ್ಥೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಬಯೋಕಾನ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ‘ಇಟೋಲಿಝುಮಾಬ್’ ಔಷಧ ಚರ್ಮರೋಗ ಸೋರಿಯಾಸಿಸ್‌ಗೆ ಬಳಸುವ ಈ ಔಷಧಿಯಾಗಿದೆ. ಇದನ್ನು ಉಸಿರಾಟದ ತೊಂದರೆಗೆ ಒಳಗಾಗಿರುವ ರೋಗಿಗಳಿಗೂ ಬಳಸಬಹುದೇ ಎಂಬ ಬಗ್ಗೆ ಪರಿಶೀಲಿಸಿದ ನಂತರ ಡಿಸಿಜಿಐ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
#ProudToShare: #Biocon’s Breakthrough Drug #Itolizumab Receives DCGI Nod for its Use in Moderate to Severe #COVID19 Patients, the first novel biologic therapy to be approved by DCGI for treating patients with moderate to severe COVID-19 complications. https://t.co/rrgf9ej2XH pic.twitter.com/ADXXWRZO2X
— Biocon (@Bioconlimited) July 11, 2020