ರಾಜ್ಯದಲ್ಲಿ ಕೊರೋನಾ: ಮತ್ತೆ ಬರೋಬ್ಬರಿ 2627 ಪಾಸಿಟಿವ್ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಮತ್ತೆ ಆಘಾತ ತಂದಿದೆ. ರಾಜ್ಯದಲ್ಲಿಂದು ಬರೋಬ್ಬರಿ 2627 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಈ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ.

ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ರಾಜ್ಯದ ವಿವಿಧೆಡೆಯ ಬೆಳವಣಿಗೆಗಳತ್ತ ಬೆಳಕು ಚೆಲ್ಲಿದೆ. ಶನಿವಾರ ಸಂಜೆ ನಂತರ ಭಾನುವಾರ ಸಂಜೆಯವರೆಗೆ ವಿವಿಧ ಜಿಲ್ಲೆಗಳಲ್ಲಿ 2627 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 1525 ಹೊಸ ಪ್ರಕರಣಗಳು ಪತ್ತೆಯಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 196 ಪ್ರಕರಣಗಳು, ಧಾರವಾಡದಲ್ಲಿ 129, ಯಾದಗಿರಿಯಲ್ಲಿ 120 ಕೇಸ್’ಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿ 79, ಬಳ್ಳಾರಿಯಲ್ಲಿ 63, ಬೀದರ್’ನಲ್ಲಿ 62ಮಂದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

ಇದೇ ವೇಳೆ ಭಾನುವಾರ ಒಂದೇ ದಿನ 71 ಮಂದಿ ಸೋಂಕಿತರು ಬಲಿಯಾಗಿದ್ದು ಕೊರೋನಾದಿಂದಾಗಿ ಸಾವನ್ನಪಿದವರ ಸಂಖ್ಯೆಯೂ 684 ಕ್ಕೆ ಏರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.

Related posts