ಬೆಂಗಳೂರು: ಪೊಲೀಸರು ನಾಡು ರಕ್ಷಕರು. ಅಷ್ಟೇ ಅಲ್ಲ ಅವರ ಪ್ರತಿಭೆ ಸಾಂಸ್ಕೃತಿಕ ಸಕ್ಷೇತ್ರದಲ್ಲೂ ಪ್ರತಿಬಿಂಭಿಸುತ್ತಿದೆ. ಇಲ್ಲೊಬ್ಬ ಪೊಲೀಸ್ ತನ್ನ ಸಹೋದ್ಯೋಗಿ ತಂಡಕ್ಕೆ ಜಾನಪದ ಹಾಡಿನೊಂದಿಗೆ ಕಾರ್ಯಕ್ಷಮತೆಯ ಪಾಠ ಹೇಳಿ ಗಮನಸೆಳೆದಿದ್ದಾರೆ.
ಕರ್ನಾಟಕ ಪೊಲೀಸ್ ತರಬೇತಿ ಶಾಲೆಯೊಂದರಲ್ಲಿ ತರಬೇತುದಾರರೊಬ್ಬರು ಜಾನಪದ ಹಾಡೊಂದನ್ನು ಹಾಡುತ್ತಾ ಪಾಠ ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ತರಬೇತಿ ಸಂದರ್ಭದಲ್ಲಿ ಏಕ್-ದೊ-ತೀನ್-ಚಾರ್ ಎನ್ನುತ್ತಾ ಅಂಕಿಗಳಿಗೆ ತಕ್ಕಂತೆ ಡ್ರಿಲ್ ಮಾಡೋದನ್ನು ತಿಳಿದಿದ್ದೇವೆ. ಇಲ್ಲೊಬ್ಬ ತರಬೇತುದಾರ ಕನ್ನಡ ಜಾನಪದ ಹಾಡನ್ನು ಹೇಳುತ್ತಾ ಶಿಕ್ಷಾರ್ಥಿಗಳನ್ನು ರಂಜಿಸುತ್ತಾ ತರಬೇತಿ ನೀಡಿದ ವೈಖರಿ ನಾಡಿನ ಗಮನಸೆಳೆದಿದೆ. ಈ ಇನ್ಸ್ಟ್ರಕ್ಟರ್’ನ ಹಾಡು ಮಹಿಳಾ ಶಿಕ್ಷಾರ್ಥಿಗಳ ಹುಮ್ಮಸ್ಸನ್ನೂ ದುಪ್ಪಟ್ಟು ಮಾಡುತ್ತಿತ್ತು ಎಂಬುದಕ್ಕೆ ಈ ವೀಡಿಯೊ ಸಾಕ್ಷಿಯಾಗಿದೆ.
#Police training school somewhere in #Karnataka.#desi style of command with a folk song by an instructor.
Video: forwarded on WhatsApp.@XpressBengaluru @AshwiniMS_TNIE @santwana99 @DgpKarnataka @BlrCityPolice @PIBHomeAffairs @BSBommai @hublimandi pic.twitter.com/qNK7in0I0q— Devaraj Hirehalli Bhyraiah (@swaraj76) July 15, 2020