‘ನಾಗರ ಪಂಚಮಿ’, ಸಿಎಂಬಿಎಸ್’ವೈ, ಸಂಸ್ಕೃತಿ ಸಚಿವ ಸಿ.ಟಿ.ರವಿ ಶುಭಾಶಯ

ಬೆಂಗಳೂರು: ಆಷಾಢ ನಂತರದ ಮೊದಲ ಹಬ್ಬ ನಾಗರ ಪಂಚಮಿಯನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ನಾಡಿನ ದೇವಾಲಯಗಳಲ್ಲಿ ಎಂದಿನಂತೆ ಆಚರಣಾ ವೈಭವ ಕಂಡುಬಂದಿಲ್ಲ. ಕೊರೋನಾ ವೈರಾಣು ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ದೇವಾಲಯಗಳ ಅರ್ಚಕರಷ್ಟೇ ಪೂಜಾ ಸಾಂಪ್ರದಾಯಿಕ ವಿಧಾನಗಳನ್ನು ನೆರವೇರಿಸಿದ್ದಾರೆ.

ಮನೆ ಮನೆಗಳಲ್ಲಿ ಕುಟುಂಬ ಸದಸ್ಯರಿಗಷ್ಟೇ ಈ ಬಾರಿಯ ನಾರ ಪಂಚಮಿ ಆಚರಣೆ ಸೀಮಿತವಾಗಿದೆ.

ಇದೇ ವೇಳೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಶುಭಾಶಯ ಕೋರಿದ್ದಾರೆ.

ದೇವರು ಎಲ್ಲ ದುರಿತಗಳನ್ನು ಪರಿಹರಿಸಿ, ಎಲ್ಲರಿಗೂ ಸುಖ, ಸಂತೋಷ, ನೆಮ್ಮದಿ, ಆರೋಗ್ಯಗಳನ್ನು ಕರುಣಿಸಲಿ, ನಾಡಿಗೆ ಮಂಗಳವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸೋಣ ಸಿಎಂ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ. ಮನೆಗಳಲ್ಲಿಯೇ ದೇವರನ್ನು ಪ್ರಾರ್ಥಿಸಿ, ಸಾಮಾಜಿಕ ಅಂತರ ಸೇರಿದಂತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯ ಪಾಲಿಸಿ ಎಂದೂ ಅವರು ಮನವಿ ಮಾಡಿದ್ದಾರೆ.

ಕನ್ನಡ ಸಂಸ್ಕೃತಿ ಸಚಿವ ಸಿ.ಟಿ.ರವಿ ಕೂಡಾ ನಾಡಿನ ಜನತೆಗೆ “ನಾಗರ ಪಂಚಮಿ” ಹಬ್ಬದ ಶುಭಾಶಯ ಕೋರಿದ್ದಾರೆ. ಕೊರೋನಾ ಸಂದರ್ಭದಲ್ಲಿ ಭಗವಂತ ನಾಡಿನ ಜನರ ಸಂಕಷ್ಟಗಳನ್ನು ದೂರ ಮಾಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

 

Related posts