ಮಂಗಳೂರು: ನಾಗರ ಪಂಚಮಿ ದಿನವಾದ ಇಂದು ಕುಕ್ಕೆ ಕ್ಷೇತ್ರದಲ್ಲಿ ಪಾವಾಡ ನಡೆಯಿತೇ? ಇಂಥದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಾಗರ ಪಂಚಮಿ ಪೂಜೆ ನೆರವೇರುತ್ತಿದ್ದಂತೆಯೇ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗರಾಜ ಪ್ರತ್ಯಕ್ಷವಾಗಿದೆಯಂತೆ. ಇದನ್ನು ಕಂಡ ದೇವಾಲಯದವರು ನಾಗರಾಜನಿಗೆ ಹಾಲನ್ನು ಸಮರ್ಪಿಸಿದ್ದಾರಂತೆ. ಈ ಹಾಲಿನ ನೈವೇದ್ಯವನ್ನು ಸ್ವೀಕರಿಸಿದ ನಾಗರ ಹಾವು ಅಲ್ಲಿಂದ ನಿರ್ಗಮಿಸಿದೆ.
ತುಳುನಾಡಿನಲ್ಲಿ ನಾಗರ ಹಾವನ್ನು ದೇವರೆಂದೇ ಆಸ್ತಿಕರು ತಿಳಿದಿದ್ದಾರೆ. ಈ ರೀತಿಯ ಹಾವುಗಳು ಅಲ್ಲಿನ ಮನೆಗಳಲ್ಲೂ ಪ್ರತ್ಯಕ್ಷವಾಗುವುದುಂಟು. ಹೀಗಿರುವಾಗ ನಾಗರಾಜನ ಸನ್ನಿದಿ ಎಂದೇ ಗುರುತಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಾವಿನ ಸವಾರಿ ಅಚ್ಚರಿಯೇನಲ್ಲ. ಆದರೆ ನಾಗರ ಪಂಚಮಿಯ ದಿನವಾದ ಇಂದು ನಾಗರಾಜ ಪ್ರತ್ಯಕ್ಷವಾದದ್ದು ಹಾಗೂ ದೇವಾಲಯದವರು ಸಮರ್ಪಿಸಿದ ಹಾಲನ್ನು ಸ್ವೀಕರಿಸಿದ ಅನನ್ಯ ಸನ್ನಿವೇಶ ಕುತೂಹಲಕಾರಿಯೆನಿಸಿದೆ.
ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.