ವಾಷಿಂಗ್ಟನ್: ಭಾರತ ಮಾದರಿಯಲ್ಲೇ ಅಮೆರಿಕದಲ್ಲೂ ಚೀನಾ ಮೂಲದ ಟಿಕ್ ಟಾಕ್ ಆ್ಯಪ್ ನಿಷೇಧ ಮಾಡಲಾಗುವುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ.
ಚೀನಾ ದೇಶದ ಟಿಕ್ ಟಾಕ್ ಅಪ್ಲಿಕೇಷನನ್ನು ಭಾರತ ಕೆಲವು ವಾರಗಳ ಹಿಂದಷ್ಟೇ ನಿಷೇಧಿಸಿತ್ತು. ದೇಶದ ಭದ್ರತೆಯ ಕಾರಣಕ್ಕಾಗಿ ಭಾರತ ಈ ನಿರ್ಧಾರ ಕೈಗೊಂಡಿದೆ. ಅಮೆರಿಕಾ ಕೂಡಾ ಇದೀಗ ಅದೇ ಹಾದಿ ತುಳಿಯಲು ತೀರ್ಮಾನಿಸಿದೆ.
ಚೀನಾದ ಗುಪ್ತಚರಕ್ಕೆ ಟಿಕ್ ಟಾಕ್ ಮೂಲಕ ಮಾಹಿತಿ ರವಾನೆಯಾಗುತ್ತದೆ ಎಂಬ ಆತಂಕದಿಂದ ಟ್ರಂಪ್ ಆಡಳತ ಈ ಕ್ರಮಕ್ಕೆ ಮುಂದಾಗಿದೆ.
ತನ್ನ ಗುಪ್ತಚರ ರಹಸ್ಯ ಚಟುವಟಿಕೆಗಳಿಗೆ ಸೋಷಿಯಲ್ ಮೀಡಿಯಾ ಆಪ್ ನ್ನು ಚೀನಾ ಬಳಸುತ್ತದೆ ಎಂದು ಅಮೆರಿಕ ಸರ್ಕಾರದ ಅಧಿಕಾರಿಗಳು ಮಾಹಿತಿ ಕಳೆಹಾಕಿರುವ ಹಿನ್ನೆಲೆಯಲ್ಲಿ ಸದ್ಯವೇ ಈ ಬಗ್ಗೆ ಆದೇಶ ಹೊರಡಿಸಲು ಟ್ರಂಪ್ ನಿರ್ಧರಿಸಿದ್ದಾರೆನ್ನಲಾಗಿದೆ.