ಶ್ರೀನಗರ: ಒಂದೆಡೆ ಕೊರೋನಾ ವರಸ್ ಹಾವಳಿಯಿಂದ್ ದೇಶ ನಲುಗಿದ್ದರೆ ಮತ್ತೊಂದೆಡೆ ದೇಶವನ್ನು ನಡುಗಿಸಲು ಪಾಕ್ ಪ್ರೇರಿತ ಉಗ್ರರು ಯತ್ನವನ್ನು ಮುಂದುವರಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಂತೂ ಈ ಕ್ರೌರ್ಯ ಹೆಚ್ಚಾಗಿದ್ದು ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ.
ಈ ನಡುವೆ ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಕಣಿವೆ ರಾಜ್ಯದ ಹಂದ್ವಾರದಲ್ಲಿ ಮನೆಯೊಂದಕ್ಕೆ ನುಗ್ಗಿದ ಉರರ ತಂಡ ಕ್ರೌರ್ಯ ಮೆರೆದಿದೆ. ಈ ಉಗ್ರರನ್ನು ಮಟ್ಟಹಾಕಲು ಮುಂದಾದ ಸೇನಾ ಯೋಧರ ಮೇಲೆ ದಾಳಿ ನಡೆದಿದ್ದು, ಸೇನಾಧಿಕಾರಿ ಸೇರಿ ನಾಲ್ವರು ಯೋಧರು ಹಾಗೂ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ.
ಹಂದ್ವಾರದ ಛಾಂಜ್ಮುಲ್ಲಾ ಎಂಬ ಪ್ರದೇಶದಲ್ಲಿ ಉಗ್ರರು ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಈ ಭಯೋತ್ಪಾದಕರ ವಿರುದ್ಧ ಸೇನಾಪಡೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ, ಭಯೋತ್ಪಾದರು ಗುಂಡಿನ ದಾಳಿ ನಡೆಸಿದರು. ಸುದೀರ್ಘ ಹೊತ್ತು ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಸೇನಾಧಿಕಾರಿಗಳು ಸೇರಿದಂತೆ ಅನೇಕ ಯೋಧರು ಬಲಿಯಾದರು. ಜಮ್ಮು ಮತ್ತು ಕಾಶ್ಮೀರದ ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆಂದು ವರದಿಗಳು ತಿಳಿಸಿವೆ.
ಈ ಸಂದಿಗ್ಧ ಸನ್ನಿವೇಶದಲ್ಲೂ ಹೋರಾಟ ಮುಂದುವರಿಸಿದ ಸೇನೆ ಉಗ್ರರಿಬ್ಬರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಉಗ್ರರ ಹಿಡಿತದಲ್ಲಿದ್ದ ನಾಗರಿಕರನ್ನು ಪಾರು ಮಾಡುವಲ್ಲೂ ಸೇನೆ ಯಶಸ್ವಿಯಾಗಿದೆ.