ಏಷ್ಯನ್ ಗೇಮ್ಸ್‌ ಬಾಕ್ಸಿಂಗ್: ಬೆಳ್ಳಿ ಪದಕ ಗೆದ್ದ ಲೊವ್ಲಿನಾ

ಹ್ಯಾಂಗ್‌ಝೌ: 2023ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಟೋಕಿಯೊ ಒಲಿಂಪಿಕ್‌ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್‌ ಅವರು ಬೆಳ್ಳಿ ಪದಕ ಗೆದ್ದಿದಾರೆ.

ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ 75 ಕೆಜಿ ವಿಭಾಗದ ಅಂತಿಮ ಹಣಾಹಣಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಲಿ ಕಿಯಾನ್ ವಿರುದ್ಧ ವೀರೋಚಿತ ಸೋಲುಂಡರೂ ಲೊವ್ಲಿನಾ ಬೊರ್ಗೊಹೈನ್‌ ಅವರು ಭಾರತದ ಪಾಲಿಗೆ ಬೆಳ್ಳಿ ಪದಕ ತಂದುಕೊಟ್ಟರು.

Related posts