ಆಸ್ಮಾಕಂ ಸಂಸ್ಕೃತಂ; ಹನೂರಿನಲ್ಲಿ ಹೀಗೊಂದು ವಿಶೇಷ ಕಾರ್ಯಕ್ರಮ

ಚಾಮರಾಜನಗರ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ ಹೊಸಪಾಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಆಸ್ಮಕಂ ಸಂಸ್ಕೃತಂ ಕಾರ್ಯಕ್ರಮವನ್ನು ಬೈಲೂರಿನ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.

ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಹದೇವಸ್ವಾಮಿ ಮಾತನಾಡಿ ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುವುದರಿಂದ ಜ್ಞಾನ ಶಕ್ತಿ ಹೆಚ್ಚಿಸುತ್ತದೆ ಕಲಿಕೆಯ ದೃಷ್ಠಿಯಿಂದ ಅನುಕೂಲವಾಗುವುದು , ಸಂಸ್ಕಾರ ಸಂಸ್ಕೃತಿಗಳ ಬಗ್ಗೆ ಹೆಚ್ಚು ಅರಿವು ಮೂಡುತ್ತದೆ ಎಂದರು.

ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾದ ರವಿಕುಮಾರ್ ಮಾತನಾಡಿ ಯಾವುದೇ ಭಾಷೆಯಾದರೂ ಸಂವಹನದ ಮೂಲಕ ಬಳಕೆ ಮಾಡಿದಾಗ ಮಾತ್ರ ಆ ಭಾಷೆ ಬೆಳೆಯುತ್ತದೆ , ಸುಮಾರು 3000 ವರ್ಷಗಳ ಇತಿಹಾಸ ವನ್ನು ಸಂಸ್ಕೃತ ಭಾಷೆ ಹೊಂದಿದೆ ಸಂಸ್ಕೃತ ಭಾಷೆಯಲ್ಲಿ ವೇದ ಉಪನಿಷತ್ತುಗಳು, ಇತಿಹಾಸ ಪುರಾಣಗಳು ,ಅನೇಕ ಶಾಸ್ತ್ರಗಳು ರಚನೆಯಾಗಿದೆ. ಇಂದಿನ ವಿದ್ಯಾರ್ಥಿಗಳು ಸಂಸ್ಕೃತವನ್ನು ವೈಜ್ಞಾನಿಕ ದೃಷ್ಟಿಕೋನವಿಟ್ಟು ಅಧ್ಯಯನ ಮಾಡಿದರೆ ಆಧುನಿಕ ಭಾಷೆಯೊಂದಿಗೆ ಸಂವಹನ ಮೂಲಕ ಅಧ್ಯಯನಗಳ ಸಂಶೋಧನೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ತಿಳಿಸಿದರು.

ಆಂಗ್ಲ ಭಾಷಾ ಶಿಕ್ಷಕರಾದ ಅರುಣ್ ಸೆಲ್ವಕುಮಾರ್ ಮಾತನಾಡಿ ಮಾತೃಭಾಷೆಯ ಜೊತೆಗೆ ನಮ್ಮೊಡನೆ ಇರುವ ಸಂಸ್ಕೃತ ಭಾಷೆಯನ್ನು ಉಳಿಸಿ ರಚಿಸಬೇಕು ಸಂಸ್ಕೃತ ಅಧ್ಯಯನದಿಂದ ಉತ್ತಮ ಸನ್ಮಾರ್ಗ ಜ್ಞಾನ ದೊರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ರವಿಕುಮಾರ್, ಮುಖ್ಯ ಶಿಕ್ಷಕರು ಸಂಸ್ಕೃತ ಪಾಠಶಾಲೆ ಹೊಸ ಪಾಳ್ಯ ಹಾಗೂ ಶಿಕ್ಷಕರುಗಳಾದ ಮಲ್ಲಿಕಾರ್ಜುನ ಸ್ವಾಮಿ ವೈಎನ್, ನಾಗಮಣಿ ಪಿ , ವಿದ್ಯಾರ್ಥಿಗಳು ಇನ್ನಿತರರು ಹಾಜರಿದ್ದರು.

Related posts