ದೆಹಲಿ: ಹಿಮಾಚಲಪ್ರದೇಶದ ರೋಹ್ಟಂಗ್ನಲ್ಲಿ ನಿರ್ಮಾಣವಾಗಿರುವ ಜಗತ್ತಿನ ಅತ್ಯಂತ ಉದ್ದವಾದ ಅಟಲ್ ಸುರಂಗ ಮಾರ್ಗವನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದಾರೆ.
ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಯೋಜನೆ ಇದಾಗಿದೆ. 2002ರಲ್ಲಿ ಆರಂಭಿಸಲಾಗಿದ್ದ ಈ ಸುರಂಗ ಮಾರ್ಗ ಇಂದು ಲೋಕಾರ್ಪಣೆಗೊಂಡಿದೆ.
ಈ ಸುರಂಗಮಾರ್ಗದಿಂದಾಗಿ ಮನಾಲಿ ಮತ್ತು ಲೇಹ್ ನಡುವಿನ ಅಂತರ 46 ಕಿ.ಮೀ. ಕಡಿಮೆ ಆಗಲಿದೆ. ಇದರಿಂದಾಗಿ 4ರಿಂದ 5 ಗಂಟೆ ಸಮಯವೂ ಉಳಿತಾಯವಾಗಲಿದೆ.