ನವದೆಹಲಿ: ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು ಪ್ರಸ್ತುತ ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 3,000ದ ಸಮೀಪದಲ್ಲಿವೆ. ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕೇರಳ ರಾಜ್ಯದಲ್ಲಿ ಅತೀ ಹೆಚ್ಚಿನ ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 1,147 ಸಕ್ರಿಯ ಕೋವಿಡ್ -19 ಸೋಂಕುನಾ ಪ್ರಮಾಣ ದಾಖಳಾಗಿದ್ದರೆ, ಮಹಾರಾಷ್ಟ್ರದಲ್ಲಿ 424, ದೆಹಲಿಯಲ್ಲಿ 294 ಮತ್ತು ಗುಜರಾತ್ ರಾಜ್ಯದಲ್ಲಿ 223, ತಮಿಳುನಾಡು ಮತ್ತು ಕರ್ನಾಟಕದಲ್ಲಿ ತಲಾ 148 ಪ್ರಕರಣಗಳು ವರದಿಯಾಗಿವೆ.
Author: NavaKarnataka
ಪಾಕ್ ಬೆಂಬಲಿಸಿದ ಟರ್ಕಿ ಜೊತೆಗಿನ ವಿಮಾನ ಒಪ್ಪಂದಕ್ಕೂ ಭಾರತ ಬ್ರೇಕ್
ನವದೆಹಲಿ: ಆಪಲ್ ಸಹಿತ ಟರ್ಕಿಯ ಪ್ರಮುಖ ವಸ್ತುಗಳನ್ನು ಭಾರತೀಯರು ತಿರಸ್ಕರಿಸುವಂತೆಯೇ ಇದೀಗ ಆಯಾ ದೇಶದ ಜೊತೆ ವಿಮಾನಯಾನ ಸಹಕಾರವೂ ಸ್ಥಗಿತಗೊಳ್ಳಲಿದೆ. ಟರ್ಕಿಶ್ ಏರ್ಲೈನ್ಸ್ ಸಂಸ್ಥೆಯ ವಿಮಾನಗಳ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸುವ ಪ್ರಕ್ರಿಯೆ ಕೂಡಾ ಪಾಕ್ ಮಿತ್ರ ರಾಷ್ಟ್ರಕ್ಕೆ ಆಘಾತ ನೀಡಿದೆ. ಟರ್ಕಿ ಮೂಲದ ಕಂಪನಿ ಜೊತೆಗಿನ ವಿಮಾನ ಗುತ್ತಿಗೆಯನ್ನು 3 ತಿಂಗಳೊಳಗೆ ರದ್ದುಗೊಳಿಸುವಂತೆ ಇಂಡಿಗೋ ಸಂಸ್ಥೆಗೆ ಕೇಂದ್ರ ಸರ್ಕಾರ ತಿಳಿಸಿದೆ. ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಟರ್ಕಿ ದೇಶವು ಪಾಕಿಸ್ತಾನಕ್ಕೆ ನೆರವು ನೀಡಿತ್ತು. ಪಾಕಿಸ್ತಾನವನ್ನು ಬೆಂಬಲಿಸಿದ ಕಾರಣಕ್ಕಾಗಿ ಟರ್ಕಿ ಮೂಲದ ವಸ್ತುಗಳ ಆಮದನ್ನು ಭಾರತದ ವರ್ತಕರು ಸ್ಥಗಿತಗೊಳಿಸಿದರೆ. ಇದೀಗ ಟರ್ಕಿಶ್ ವಿಮಾನಯಾನ ಸಂಸ್ಥೆ ಜೊತೆಗಿನ ಒಪ್ಪಂದ ರದ್ದುಗೊಳಿಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಇಂಡಿಗೋ ವಿಮಾನಯಾನ ಸಂಸ್ಥೆಗೆ ಸೂಚನೆ ನೀಡಿದೆ.
ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಮೂವರು ದುರ್ಮರಣ
ಧಾರವಾಡ: ಅಣ್ಣಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಬೆಂಗಳೂರಿನ ವೇಣುಗೋಪಾಲ್ (63), ಮದನ್ (61) ಹಾಗೂ ಮೈಸೂರಿನ ಸುರೇಶ್ (60) ಎಂದು ಗುರುತಿಸಲಾಗಿದೆ. ಇವರು ಮುಂಡರಗಿಯಿಂದ ಹುಬ್ಬಳ್ಳಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಸುದ್ದಿತಿಳಿದು ಸ್ಥಳಕ್ಕೆ ಧಾವಿಸಿದವ ಅಣ್ಣಿಗೇರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
‘ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’: ಕಮಲ್ ಹಾಸನ್
ಚೆನ್ನೈ: ಕನ್ನಡ ಭಾಷೆಯ ಉಗಮದ ಬಗ್ಗೆ ನಟ ಕಮಲ್ ಹಾಸನ್ ಆಡಿರುವ ಮಾತುಗಳು ವಿವಾದ ಎಬ್ಬಿಸಿವೆ. ಕನ್ನಡಿಗರ ಆಕ್ರೋಶ ಪ್ರತಿಕ್ರಿಯಿಸಿರುವ ‘ನಾನು ತಪ್ಪು ಮಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ. ‘ನನ್ನಿಂದ ತಪ್ಪು ಆಗಿದ್ದರೆ ಮಾತ್ರ ಕ್ಷಮೆಯಾಚಿಸುವೆ, ನನ್ನಿಂದ ತಪ್ಪು ಆಗಿಲ್ಲ, ಹಾಗಾಗಿ ನಾನು ಕ್ಷಮೆ ಕೇಳಲ್ಲ ಎಂದಿರುವ ಅವರು, ಯಾವುದೇ ಬೆದರಿಕೆ, ಎಚ್ಚರಿಕೆಗೆ ಹೆದರುವುದಿಲ್ಲ ಎಂದಿದ್ದಾರೆ. ನಾನು ಕಾನೂನು & ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ’ ಎಂದು ಕಮಲ್ ಹಾಸನ್ ಸ್ಪಷ್ಟಪಡಿಸಿದ್ದಾರೆ. ಕಮಲ್ ಹಾಸನ್ ಸಿನಿಮಾ ‘ಥಗ್ ಲೈಫ್’ನ ಕರ್ನಾಟಕದಲ್ಲಿ ಬಿಡುಗಡೆಗೆ ಅವಕಾಶ ನೀಡದಿರಲು ಫಿಲಂ ಚೇಂಬರ್ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಕ್ಷಮೆ ಕೇಳಬೇಕೆಂಬ ಫಿಲಂ ಚೇಂಬರ್ ಮನವಿಯನ್ನು ಅವರು ತಳ್ಳಿಹಾಕಿದ್ದಾರೆ.
ರಾಷ್ಟೀಯ ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಚಲುವರಾಯಸ್ವಾಮಿ
ಬೆಂಗಳೂರು:ಮಂಡ್ಯ ಜಿಲ್ಲೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸುವಂತೆ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದ್ದಾರೆ. ವಿಕಾಸಸೌಧ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ತ್ವರಿತವಾಗಿ ಮುಕ್ತಾಯ ಗೊಳಿಸುವಂತೆ ತಿಳಿಸಿದರು. ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಬೆಳ್ಳೂರು ಕ್ರಾಸ್, ನಾಗಮಂಗಲ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಡೆಯಬೇಕಿರುವ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಚಿವರು ಹೇಳಿದರು. ಕಾಮಗಾರಿಗೆ ಅಗತ್ಯ ವಿರುವ ಹೆಚ್ಚುವರಿ ಭೂಮಿಯ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅವರು ನಿರ್ದೇಶನ ನೀಡಿದರು. ರಾಷ್ಟೀಯ ಹೆದ್ದಾರಿ 150 A ರಲ್ಲಿ ಕೆ.ಬಿ ಕ್ರಾಸ್ ನಿಂದ ಚುಂಚನಹಳ್ಳಿ ರಸ್ತೆ ವಿಸ್ತರಣೆ, ಮೆಲು ಸೇತುವೆ ವಿ ಹ ಕಾಮಗಾರಿಯನ್ನು ದೂರದೃಷ್ಟಿ ಚಿಂತನೆಯೊಂದಿಗೆ ರೂಪಿಸಿ ಅನುಷ್ಠಾನ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು. ಇದೇ…
IPL 2025: ಫೈನಲ್ ಪ್ರವೇಶಿಸಿದ RCB
ಮೊಹಾಲಿ: ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 2025 ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೇಲುಗೈ ಸಾಧಿಸಿದೆ. ಫೈನಲ್ ಅಂಗಳಕ್ಕೆ ಜಿಗಿದು ಬೆಂಗಳೂರು ಮಂದಿಯ ಸಂತಸಕ್ಕೆ ಕಾರಣರಾಗಿದ್ದಾರೆ. ಮೊಹಾಲಿಯಲ್ಲಿ ಗುರುವಾರ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ XI ವಿರುದ್ಧ RCB ತಂಡ 8 ವಿಕೆಟ್ ಗಳಿಂದ ಜಯಭೇರಿ ಭರಿಸಿದೆ. ಈ ಮೂಲಕ ಫೈನಲ್ಸ್ ಪ್ರವೇಶಿಸಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ RCBಗೆ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 102 ರನ್ಗಳ ಗೆಲುವಿನ ಗುರಿ ಒಡ್ಡಿತು. ಆರ್ ಸಿಬಿ ಕೇವಲ 10 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಜಯಭೇರಿ ಬಾರಿಸಿತು. ಬರೊಬ್ಬರಿ 9 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ತಂಡ ಫೈನಲ್ ಪ್ರವೇಶಿಸಿದ್ದು, ತಂಡದ ಅಭಿಮಾನಿಗಳಲ್ಲಿ ಸಂತಸ ಮೂಡಿದೆ.
‘ರಾಮಾಯಣ’ ಸಾಹಸಕ್ಕಾಗಿ ‘ಮ್ಯಾಡ್ ಮ್ಯಾಕ್ಸ್’ ಸಾಹಸಿ ಜೊತೆ ಯಶ್ ಕಸರತ್ತು
ಮುಂಬೈ:ಮುಂಬರುವ ಮಹಾಕಾವ್ಯ ‘ರಾಮಾಯಣ’ದ ಸಾಹಸ ಸನ್ನಿವೇಶಗಳಿಗಾಗಿ ಸ್ಟಾರ್ ಯಶ್ ‘ಮ್ಯಾಡ್ ಮ್ಯಾಕ್ಸ್’ ಸಾಹಸ ಮಾಂತ್ರಿಕ ಗೈ ನಾರ್ರಿಸ್ ಜೊತೆ ಕೈಜೋಡಿಸಿದ್ದಾರೆ. ನಟ-ನಿರ್ಮಾಪಕ ಯಶ್ ‘ರಾಮಾಯಣ’ದ ಪ್ರಧಾನ ಛಾಯಾಗ್ರಹಣವನ್ನು ಪ್ರಾರಂಭಿಸಿದ್ದಾರೆ. ಈ ಯೋಜನೆಯು “ಫ್ಯೂರಿಯೋಸಾ: ಎ ಮ್ಯಾಡ್ ಮ್ಯಾಕ್ಸ್ ಸಾಗಾ,” “ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್” ಮತ್ತು “ದಿ ಸೂಸೈಡ್ ಸ್ಕ್ವಾಡ್” ನ ಹಿಂದಿನ ಸಾಹಸ ನಿರ್ದೇಶಕ ಗೈ ನಾರ್ರಿಸ್ ಅವರನ್ನು ಈ ಪೌರಾಣಿಕ ರೂಪಾಂತರದ ಬೃಹತ್ ಪ್ರಮಾಣಕ್ಕೆ ನಿರ್ದಿಷ್ಟವಾಗಿ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಿಸ್ತಾರವಾದ ಸಾಹಸ ಸನ್ನಿವೇಶಗಳನ್ನು ನೃತ್ಯ ಸಂಯೋಜನೆ ಮಾಡಲು ಕರೆತಂದಿದೆ. ಭಾರತೀಯ ಸಿನಿಮಾದ ದೊಡ್ಡ ಪ್ರಮಾಣದ ಪ್ರದರ್ಶನದ ವಿಧಾನವನ್ನು ಮರು ವ್ಯಾಖ್ಯಾನಿಸಬಹುದಾದ ಸೆಟ್ ತುಣುಕುಗಳನ್ನು ರಚಿಸಲು ನಾರ್ರಿಸ್ ಪ್ರಸ್ತುತ ಭಾರತದಲ್ಲಿ ಯಶ್ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಮಹಾಕಾವ್ಯ ನಿರೂಪಣೆಯು ರಾಜಕುಮಾರ ರಾಮನ 14 ವರ್ಷಗಳ ವನವಾಸವನ್ನು ಅನುಸರಿಸುತ್ತದೆ, ಈ ಸಮಯದಲ್ಲಿ ರಾಕ್ಷಸ ರಾಜ ರಾವಣನು…
ಕಾನೂನು ಕಾಲೇಜುಗಳಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಆದ್ಯತೆ; KSLU ಕುಲಪತಿ ಸುಳಿವು
ಬೆಂಗಳೂರು: ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಾಲಯ ಕಲಾಪಗಳ ಸಂಪೂರ್ಣ ತಿಳುವಳಿಕೆ ಸಿಗುವಂತಾಗಲು ಪ್ರಾಯೋಗಿಕ ಶಿಕ್ಷಣದಲ್ಲಿ ಸುಧಾರಣೆ ತರಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ. ಬಸವರಾಜು ತಿಳಿಸಿದ್ದಾರೆ. ವೈದೇಹಿ ಕಾನೂನು ಸಂಸ್ಥೆಯ ವತಿಯಿಂದ ನಡೆದ ‘ಸಾಮಾಜಿಕ, ನ್ಯಾಯ ಮತ್ತು ಲಿಂಗ ಸಮಾನತೆ’ ಕುರಿತ ರಾಷ್ಟ್ರೀಯ ಸಮ್ಮೇಳನ ಮತ್ತು ವೈದೇಹಿ ವೈದ್ಯಕೀಯ ಕಾಲೇಜಿನಲ್ಲಿ ಹೊಸ ಮೂಟ್ ಕೋರ್ಟ್ ಹಾಲ್ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಡಾ.ಸಿ. ಬಸವರಾಜು, ರಾಜ್ಯದ ಕಾನೂನು ಮಹಾವಿದ್ಯಾಲಯಗಳಲ್ಲಿ ಮೂಟ್ ಕೋರ್ಟ್ ವ್ಯವಸ್ಥೆಯು ನ್ಯಾಯಾಲಯ ಸ್ವರೂಪದ ವೇದಿಕೆಯಂತಿದ್ದರೂ ಕೂಡಾ, ತಜ್ಞರ ನಿರಂತರ ಮಾರ್ಗದರ್ಶನ ಅವಶ್ಯವಿದೆ. ಈ ನಿಟ್ಟಿನಲ್ಲಿ ಪರಿಪೂರ್ಣ ಶಿಕ್ಶಣ, ಮಾರ್ಗದರ್ಶನ ಅಗತ್ಯವಿದೆ. ಈ ರೀತಿಯ ಶಿಕ್ಷಣದಿಂದ ಕಾನೂನು ವಿದ್ಯಾರ್ಥಿಗಳು ಪಠ್ಯದ ಜೊತೆಗೆ ನ್ಯಾಯಾಂಗದ ಬಗ್ಗೆ ಪರಿಪೂರ್ಣ ತಿಳುವಳಿಕೆ ಹೊಂದಲು ಪೂರಕ ವ್ಯವಸ್ಥೆ ರೂಪಿಸಿದಂತಾಗುತ್ತದೆ ಎಂದು ಪ್ರತಿಪಾದಿಸಿದರು. ವೈದೇಹಿ…
ಟ್ರಂಪ್ ಆಡಳಿತದಿಂದ ದೂರ.. ಎಲಾನ್ ಮಸ್ಕ್ ಅಚ್ಚರಿಯ ನಿರ್ಧಾರ
ವಾಷಿಂಗ್ಟನ್: ಅಚ್ಚರಿಯ ಬೆಳವಣಿಗೆಯಲ್ಲಿ ಸ್ಪೇಸ್ ಎಕ್ಸ್ ಒಡೆತನನದ ಬಿಲಿಯನೇರ್ ಎಲಾನ್ ಮಸ್ಕ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಿಂದ ನಿರ್ಗಮಿಸುತ್ತಿರುವುದಾಗಿ ಘೋಷಿಸಿದ್ದಾರೆ. ಜಗತ್ತಿನ ಹಿರಿಯಣ್ಣ ಎನಿಸಿಕೊಂಡಿರುವ ಅಮೇರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ, ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರು ಟ್ರಂಪ್ ಬಲಗೈ ಬಂಟ ಎಂದು ಗುರುತಿಸಿಕೊಂಡರು. ಆದರೆ ಇದೀಗ ಅವರಿಬ್ಬರ ಆಪ್ತತೆಯಲ್ಲಿ ಬಿರುಕು ಕಾಣಿಸಿಕೊಂಡಂತಿದೆ. ಇದೀಗ ಎಲೋನ್ ಮಸ್ಕ್ ಅವರು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಿಂದ ಅಂತರ ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಅಚ್ಚರಿ ಹಾಗೂ ಕುತೂಹಲ ಸೃಷ್ಟಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯನ್ನು ಟೀಕಿಸಿದ ಮರುದಿನವೇ ಎಲೋನ್ ಮಸ್ಕ್ ಅವರು ಅಮೆರಿಕದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಹುದ್ದೆ ತೊರೆದಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ವಿಶೇಷ ಸರ್ಕಾರಿ…
ಆಪರೇಷನ್ ಸಿಂಧೂರ್ ಬಗ್ಗೆ ವಿಶೇಷ ಅಧಿವೇಶನ ಕರೆಯದ ಸರ್ಕಾರ; ಕಾಂಗ್ರೆಸ್ ಅಸಮಾಧಾನ
ಬೆಂಗಳೂರು: ದೇಶದಾದ್ಯಂತ 20 ನಗರಗಳಲ್ಲಿ ಜೈ ಹಿಂದ್ ಸಭಾ ಮೂಲಕ ಮಾಜಿ ಸೈನಿಕರಿಗೆ ನಮನ ಸಲ್ಲಿಸಲು ಎಐಸಿಸಿ ನಿರ್ದೇಶನ ನೀಡಿತ್ತು. ಇದು ರಾಜಕೀಯ ಕಾರ್ಯಕ್ರಮವಲ್ಲ. ಇದು ಕಾಂಗ್ರೆಸ್ ಪಕ್ಷದ ಭಾವನಾತ್ಮಕ ಕಾರ್ಯಕ್ರಮವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್ ತಿಳಿಸಿದ್ದಾರೆ. ಟೌನ್ ಹಾಲ್ ನಲ್ಲಿ ನಡೆದ ಜೈ ಹಿಂದ್ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ದಾಳಿಯಲ್ಲಿ ಕನ್ನಡಿಗರು ಹಾಗೂ ಕೇರಳದ ಪ್ರಜೆಗಳು ಹತರಾಗಿದ್ದರು. ಪ್ರವಾಸಿಗರ ಹೆಸರು ಕೇಳಿ ಹತ್ಯೆ ಮಾಡಿರುವುದು ನಮ್ಮ ದೇಶದಲ್ಲಿ ಕೋಮು ವಿಭಜನೆ ಮಾಡುವ ಪ್ರಯತ್ನ ನಡೆದಿರುವುದು ಸ್ಪಷ್ಟವಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ಭಾರತ ಜಾತಿ, ಧರ್ಮ, ಭಾಷೆ ಮೀರಿ ಒಟ್ಟಾಗಿ ನಮ್ಮ ಸೇನಾ ಪಡೆಗಳ ಜತೆ ನಿಂತಿದ್ದು ನಮಗೆ ಹೆಮ್ಮೆಯ ವಿಚಾರ ಎಂದರು. ದಾಳಿಯಾದ 24 ತಾಸುಗಳಲ್ಲಿ ಕಾಂಗ್ರೆಸ್ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿ ವರ…