ಚುನಾವಣಾ ವಂಚನೆ ಪ್ರತಿಪಕ್ಷಗಳ ಒಗ್ಗಟ್ಟು; ಮಿತ್ರಪಕ್ಷಗಳ ಸಂಸದರಿಗೆ ಖರ್ಗೆ ಭೋಜನ ಕೂಟ

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ವಿರುದ್ಧ ಒಗ್ಗಟ್ಟಿನ ಸಂಕೇತ ನೀಡಲು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಭಾರತ ಬ್ಲಾಕ್ ಸಂಸದರಿಗೆ ಭೋಜನ ಕೂಟ ಆಯೋಜಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಈ ಕೂಟ ಚಾಣಕ್ಯಪುರಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯಲಿದ್ದು, ಹಲವಾರು ವಿರೋಧ ಪಕ್ಷಗಳ ಸಂಸದರು ಭಾಗವಹಿಸುವ ನಿರೀಕ್ಷೆಯಿದೆ. ಕೆಲವೇ ದಿನಗಳ ಹಿಂದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಭೋಜನ ಕೂಟದ ನಂತರ, ವಿರೋಧ ಪಕ್ಷಗಳ ಏಕತೆಯ ಪ್ರದರ್ಶನಕ್ಕೆ ಇದು ಮತ್ತೊಂದು ಹಂತವೆಂದು ವಲಯಗಳು ಹೇಳುತ್ತಿವೆ.

ಮೂರು ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣದಲ್ಲಿ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲಿಗೆ ಅವರು ನೇರವಾಗಿ ಚಾಲನೆ ನೀಡಿದರೆ, ಅಮೃತಸರ–ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ಅಜ್ನಿ (ನಾಗ್ಪುರ)–ಪುಣೆ ನಡುವೆ ಸಂಚರಿಸಲಿರುವ ಇನ್ನೆರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು. VIDEO | PM Narendra Modi (@narendramodi) flags off Vande Bharat Express train from Bengaluru to Belagavi from KSR Railway Station in Bengaluru. (Source: Third Party) pic.twitter.com/nG7issWdDV — Press Trust of India (@PTI_News) August 10, 2025

‘ಆಪರೇಷನ್ ಸಿಂಧೂರ್’: ಅಪರೂಪದ ಒಳನೋಟ ಹಂಚಿಕೊಂಡ ಸೇನಾ ಮುಖ್ಯಸ್ಥ

ಚೆನ್ನೈ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ‘ಆಪರೇಷನ್ ಸಿಂಧೂರ್’ ಹೇಗೆ ರೂಪುಗೊಂಡಿತು ಎಂಬುದರ ಕುರಿತು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಅಪರೂಪದ ಒಳನೋಟ ಹಂಚಿಕೊಂಡಿದ್ದಾರೆ. ಮಿಲಿಟರಿ ನಿಖರತೆ ಮತ್ತು ರಾಜಕೀಯ ಸ್ಪಷ್ಟತೆ ಸಂಗಮಗೊಂಡ ಉನ್ನತ ಮಟ್ಟದ ಕಾರ್ಯಾಚರಣೆ ಎಂದು ಅವರು ಬಣ್ಣಿಸಿದರು. ಐಐಟಿ ಮದ್ರಾಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 22ರಂದು ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ದಾಳಿ ಇಡೀ ದೇಶವನ್ನು ಬೆಚ್ಚಿಬೀಳಿಸಿತೆಂದರು. “ಮರುದಿನವೇ ನಾವು ಚರ್ಚೆಗೆ ಕುಳಿತೆವು. ರಕ್ಷಣಾ ಸಚಿವರು ‘ಸಾಕು ಸಾಕು’ ಎಂದರು. ಮೂವರು ಸೇನಾ ಮುಖ್ಯಸ್ಥರೂ ನಿರ್ಣಾಯಕ ಕ್ರಮಕ್ಕೆ ಒಪ್ಪಿಕೊಂಡು ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು. ಇಷ್ಟು ಸ್ಪಷ್ಟ ರಾಜಕೀಯ ನಿರ್ದೇಶನವನ್ನು ಮೊತ್ತಮೊದಲು ನೋಡಿದೆವು,” ಎಂದರು. ಏಪ್ರಿಲ್ 25ರಂದು ಉತ್ತರ ಕಮಾಂಡ್ ಕೇಂದ್ರದಲ್ಲಿ ಕಾರ್ಯಯೋಜನೆ ರೂಪಿಸಿ ತಕ್ಷಣವೇ ಕಾರ್ಯಗತಗೊಳಿಸಲಾಯಿತು. ಒಂಬತ್ತು ಗುರಿಗಳಲ್ಲಿ ಏಳು ನಾಶವಾಗಿದ್ದು,…

ಮತಗಳ್ಳತನ ಆರೋಪ ಬಗ್ಗೆ ರಾಹುಲ್ ‘ಹಿಟ್ ಅಂಡ್ ರನ್’; ಜೋಶಿ

ಬೆಂಗಳೂರು: ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ ಬಳಿಕ ಆಯೋಗದ ಕಚೇರಿಗೆ ಭೇಟಿ ನೀಡದೆ, ಯಾವುದೇ ದಾಖಲೆಗಳನ್ನು ಸಲ್ಲಿಸದೇ “ಹಿಟ್ ಅಂಡ್ ರನ್” ಪದ್ದತಿ ಪಾಲಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಟೀಕಿಸಿದ ಅವರು, “ಸಾರ್ವಜನಿಕವಾಗಿ ದೊಡ್ಡ ದೊಡ್ಡ ಸುಳ್ಳು ಹೇಳಿಕೆಗಳನ್ನು ನೀಡುವ ರಾಹುಲ್, ಸಾಕ್ಷಿ ಕೇಳಿದರೆ ಮಾಯವಾಗುತ್ತಾರೆ. ಗುರುವಾರ ಮತಗಳ್ಳತನದ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೂ, ಆಯೋಗದ ಕಚೇರಿಗೆ ತೆರಳಿಲ್ಲ. ಫ್ರೀಡಂ ಪಾರ್ಕ್‌ನಿಂದ ಆಯೋಗದ ಕಚೇರಿಗೆ 5 ನಿಮಿಷ ನಡೆದು ಹೋಗಬಹುದು. ಬದಲಾಗಿ, ಬೇರೆವರನ್ನು ಕಳುಹಿಸಿದ್ದಾರೆ” ಎಂದು ವ್ಯಂಗ್ಯವಾಡಿದರು. “ಆರೋಪ ಮಾಡಿ ಇನ್ನೊಬ್ಬರಿಂದ ಉತ್ತರ ಕೊಡಿಸುವುದು, ಸುಳ್ಳಿಗೆ ಆಧಾರವಿಲ್ಲವೆಂಬುದರ ಪುರಾವೆ. ರಾಜ್ಯ ಚುನಾವಣಾ ಆಯೋಗ ಅಫಿಡವಿಟ್ ಕೇಳಿದೆ, ಇದುವರೆಗೂ ಫೈಲ್ ಮಾಡಿಲ್ಲ” ಎಂದು ಹೇಳಿದರು. ರಾಹುಲ್…

ರಕ್ಷಾ ಬಂಧನ: ಅಂಗನವಾಡಿ ಶಿಕ್ಷಕಿಯರಿಗೆ ಇವರು ಸಚಿವರಲ್ಲ ಸಹೋದರ

ಚಿಂಚೋಳಿ: ಸೇಡಂ ಕ್ಷೇತ್ರದ ಪೆಂಚೆನಪಳ್ಳಿ ಗ್ರಾಮದಲ್ಲಿ ಹೊಸ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಆಗಮಿಸಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ, ಗ್ರಾಮ ಸಹೋದರಿಯರು, ಅಂಗನವಾಡಿ ಶಿಕ್ಷಕಿಯರು ಮತ್ತು ಮಕ್ಕಳು ರಾಕಿ ಕಟ್ಟಿ ಸಿಹಿ ತಿನ್ನಿಸಿ ಆತ್ಮೀಯ ಸ್ವಾಗತ ಕೋರಿದರು. ರಕ್ಷಾಬಂಧನ ಹಬ್ಬದ ಸಂಭ್ರಮದಲ್ಲಿ ಗ್ರಾಮಸ್ಥರು ಪ್ರೀತಿಯ ಸಂಕೇತವಾಗಿ ಸಚಿವರಿಗೆ ರಾಖಿಯನ್ನು ಕಟ್ಟಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡರು.

ಪ್ರಜಾಪ್ರಭುತ್ವ ಅಲುಗಾಡಿಸುವ ಯತ್ನ: ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಆರೋಪ

ಬೆಂಗಳೂರು: “ಮತಗಳ್ಳತನ ತಡೆಯುವುದು ಕೇವಲ ಚುನಾವಣೆ ಸ್ವಚ್ಛತೆಗೆ ಸಂಬಂಧಿಸಿದ ವಿಷಯವಲ್ಲ, ಪ್ರಜಾಪ್ರಭುತ್ವದ ಅಸ್ತಿತ್ವಕ್ಕೂ ಸಂಬಂಧಿಸಿದೆ. ಬಿಜೆಪಿ ಚುನಾವಣಾ ಆಯೋಗ, ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸುತ್ತಿದೆ,” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಟೀಕಿಸಿದರು. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ‘ಕ್ವಿಟ್ ಇಂಡಿಯಾ’ ದಿನಾಚರಣೆಯಲ್ಲಿ ಮಾತನಾಡಿದ ಅವರು, “1942ರ ಚಳುವಳಿಯಂತೆ, ಇಂದಿನ ದಿನಗಳಲ್ಲಿ ಕೇಂದ್ರದ ಜನವಿರೋಧಿ ನೀತಿಯ ವಿರುದ್ಧ ತಾರ್ಕಿಕ ಅಂತ್ಯ ಕಾಣುವ ಹೋರಾಟ ಅಗತ್ಯ. ರಾಹುಲ್ ಗಾಂಧಿ ಅವರ ಮೇಲೆ 51 ಪ್ರಕರಣ ದಾಖಲಿಸಿ, ಮಾತನಾಡುವ ಹಕ್ಕೇ ಕಸಿದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ,” ಎಂದರು. ಮತದಾನದಲ್ಲಿ ಅಕ್ರಮಗಳ ಬಗ್ಗೆ ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. “25 ಕ್ಷೇತ್ರಗಳಲ್ಲಿ ಚುನಾವಣೆ ಪಾರದರ್ಶಕವಾಗಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗಿರುತ್ತಿರಲಿಲ್ಲ. ಅಕ್ರಮ ತಡೆಯಲು 5 ಸಮಿತಿಗಳನ್ನು ರಚಿಸಿದ್ದೇವೆ. ಯಾರೇ ‘ಮತಗಳ್ಳತನ ದೊಡ್ಡ ಸಮಸ್ಯೆಯಲ್ಲ’ ಎಂದು ಭಾವಿಸಿದರೆ,…

ಮೆಟ್ರೋ ಯೋಜನೆ: ಬಿಜೆಪಿ ನಾಯಕರಿಗೆ ಪ್ರಚಾರದ ಹುಚ್ಚು ಎಂದ ರಾಮಲಿಂಗಾ ರೆಡ್ಡಿ

ಬೆಂಗಳೂರು: “ಮೆಟ್ರೋ ಯೋಜನೆಯ ಇತಿಹಾಸವೇ ಗೊತ್ತಿಲ್ಲದೆ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಯೋಜನೆಯಲ್ಲಿ ರಾಜ್ಯ ಸರ್ಕಾರ ಸಣ್ಣ ಪಾಲುದಾರನಲ್ಲ, ದೊಡ್ಡ ಪಾಲುದಾರ,” ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಭಾನುವಾರ ನಡೆಯಲಿರುವ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಕುರಿತು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “2006ರಲ್ಲಿ ಧರಂ ಸಿಂಗ್ ಮುಖ್ಯಮಂತ್ರಿ, ಮನಮೋಹನ್ ಸಿಂಗ್ ಪ್ರಧಾನಮಂತ್ರಿ ಆಗಿದ್ದಾಗ ಮೆಟ್ರೋ ಶಂಕುಸ್ಥಾಪನೆ ನಡೆದಿದೆ. ಮೆಟ್ರೋ ಸಂಸ್ಥೆ ಜನರದ್ದು, ಯಾವುದೇ ಪಕ್ಷದ ಸ್ವತ್ತಲ್ಲ. ಆದರೆ ಬಿಜೆಪಿಯವರಿಗೆ ಕೆಲಸಕ್ಕಿಂತ ಪ್ರಚಾರವೇ ಮುಖ್ಯ,” ಎಂದರು. ಯೋಜನೆಯ ವೆಚ್ಚ ಹಂಚಿಕೆ ವಿವರಿಸುತ್ತಾ, ಫೇಸ್ 1ರಲ್ಲಿ ರಾಜ್ಯದ ಪಾಲು 30% (ಜಮೀನು ಸೇರಿ), ಕೇಂದ್ರದ ಪಾಲು 25%, ಉಳಿದದ್ದು ಸಾಲ. ಫೇಸ್ 2ರಲ್ಲಿ ರಾಜ್ಯ 30% ಜೊತೆಗೆ ಮಿತಿಮೀರಿದ ವೆಚ್ಚ ಬಹುತೇಕ ರಾಜ್ಯದಿಂದ; ಕೇಂದ್ರ ಕೇವಲ…

ಬಿಬಿಎಂಪಿ ಅವಾಂತರ; ಸಾರ್ವಜನಿಕರ ಸಂಕಷ್ಟ ಬಗ್ಗೆ ಮಮ್ಮಲ ಮರುಗಿದ ಸಚಿವ

ಬೆಂಗಳೂರು: ಬಿಬಿಎಂಪಿ ಕಾಮಗಾರಿ ವಿಳಂಬದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಅವಾಂತರ ಸೃಷ್ಟಿಯಾಗಿವೆ. ಅದರಲ್ಲೂ ಚರಂಡಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದೆ ಇದ್ದುದರಿಂದಾಗಿ ಉದ್ಯಾನನಗರಿಯ ಹಲವೆಡೆ ಸಾರ್ವಜನಿಕರು ಆತಂಕದಲ್ಲಿ ಸಿಲುಕುವಂತಾಗಿದೆ. ಬೆಂಗಳೂರಿನಾದ್ಯಂತ ಈ ರೀತಿಯ ಸನ್ನಿವೇಶ ಕಂಡುಬರುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಅನನ್ಯ ಸನ್ನಿವೇಶಕ್ಕೆ N.S.Palya ಸಾಕ್ಷಿಯಾಯಿತು. ರಾಜಧಾನಿ ಬೆಂಗಳೂರಿನಲ್ಲಿ ಚರಂಡಿ ದುರಸ್ತಿ ಹಾಗೂ ಪಾದಚಾರಿ ಮಾರ್ಗಗಳ ಕಾಮಗಾರಿ ನಡೆಯುತ್ತಿದೆಯಾದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಅನಾಹುತಗಳು ಸಂಭವಿಸುತ್ತಿವೆ. ಈ ರೀತಿಯ ಅವಾಂತರಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಿಕ್ಕಿದ್ದೇ ತಡ, ತಮ್ಮ ಆಪ್ತರನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುತ್ತಿರುವ ಸಚಿವರ ನಡೆ ಗಮನಸೆಳೆದಿದೆ. ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 181ರ ಎನ್.ಎಸ್.ಪಾಳ್ಯ 7ನೇ ಮುಖ್ಯರಸ್ತೆ ಬಳಿ ಚರಂಡಿ ದುರಸ್ತಿ ಕಾಮಗಾರಿ ಕೈಗೊಂಡಿರುವ…

ದೆಹಲಿಯಲ್ಲಿನ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರದ ದಂಪತಿ

ಬೆಂಗಳೂರು, ಆ. 9: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಉತ್ತರ ಕನ್ನಡ ಜಿಲ್ಲೆಯಾ ಸಿದ್ದಾಪುರ ತಾಲೂಕಿನ ದಂಪತಿಗೆ ಅವಕಾಶ ಸಿಕ್ಕಿದೆ. ಸಿದ್ದಾಪುರ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮನೆ ಸಂಜೀವಿನಿ ಒಕ್ಕೂಟದ ಹಸವಂತೆ ಗ್ರಾಮದ ಪ್ರಗತಿ ಸ್ತ್ರೀ ಶಕ್ತಿ ಸಂಘದ ಸರಸ್ವತಿ ಈಶ್ವರ ನಾಯ್ಕ ದಂಪತಿಗಳು ಆಯ್ಕೆಯಾಗಿದ್ದಾರೆ. ಈ ಸಂಬಂಧ ದಂಪತಿಗೆ ಅಧಿಕಾರಿಗಳು ಆಮಂತ್ರಣ ಪತ್ರಿಕೆಯನ್ನ ನೀಡಿದ್ದಾರೆ. ಸಂಜೀವಿನಿ ಯೋಜನೆಯಡಿಯಲ್ಲಿ ನಡೆಯುವ ಸರಸ್‌ ಮೇಳಗಳಲ್ಲಿ ಭಾಗವಹಿಸಿದ್ದ ಈ ದಂಪತಿ ತಮ್ಮ ಚಿತ್ತಾರ ಕಲೆಯನ್ನು ಪರಿಚಯ ಮಾಡಿಸಿರುವುದಕ್ಕೆ ಈ ಅವಕಾಶ ದೊರಕಿದೆ ಎಂದು ರಾಷ್ಟ್ರೀಯ ಜೀವನೋಪಾಯ ಇಲಾಖೆಯ ಅಭಿಯಾನ ನಿರ್ದೇಶಕರಾದ ಪಿ.ಐ. ಶ್ರೀವಿದ್ಯಾ ತಿಳಿಸಿದ್ದಾರೆ. ಸರಸ್ವತಿ ಅವರ ಪತಿ ಹಸೆ ಚಿತ್ತಾರ ಕಲಾವಿರ ಈಶ್ವರ ನಾಯ್ಕ ಹಸುವಂತೆ ಅವರಿಗೆ ಪ್ರಸಕ್ತ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು. ನವದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಸ್ವಸಹಾಯ…

ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಭವ್ಯ ಕ್ರೀಡಾ ಸಂಕೀರ್ಣ ನಿರ್ಮಾಣ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ರಾಜಧಾನಿಯಲ್ಲಿ ಮತ್ತೊಂದು ಭವ್ಯ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದೆ. ಬೊಮ್ಮಸಂದ್ರದ ಸೂರ್ಯನಗರ ಸಮೀಪ 100 ಎಕರೆ ಪ್ರದೇಶದಲ್ಲಿ 80,000 ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸೌಲಭ್ಯಗಳು ಲಭ್ಯವಾಗಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕರ್ನಾಟಕ ವಸತಿ ಮಂಡಳಿಯ (KHB) ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಒಳಾಂಗಣ ಮತ್ತು ಹೊರಾಂಗಣ ತಲಾ ಎಂಟು ಕ್ರೀಡೆಗಳ ಮೈದಾನ, ಅತ್ಯಾಧುನಿಕ ಜಿಮ್‌, ತರಬೇತಿ ಕೇಂದ್ರ, ಈಜುಕೊಳ, ಅತಿಥಿ ಗೃಹ, ಹಾಸ್ಟೆಲ್‌ಗಳು, ತ್ರೀ-ಸ್ಟಾರ್ ಹಾಗೂ ಫೈವ್-ಸ್ಟಾರ್ ಹೋಟೆಲ್‌ಗಳು, ಮತ್ತು ಅಂತರರಾಷ್ಟ್ರೀಯ ಕಾರ್ಯಕ್ರಮಗಳಿಗೆ ಸಮಾವೇಶ ಸಭಾಂಗಣ—all in one ಸಂಕೀರ್ಣ ರೂಪ ಪಡೆಯಲಿದೆ. ನಿರ್ಮಾಣಗೊಳ್ಳುವ ಕ್ರಿಕೆಟ್ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ನಂತರ ಭಾರತದ ಎರಡನೇ ಅತಿದೊಡ್ಡದಾಗಲಿದೆ. ನರೇಂದ್ರ ಮೋದಿ ಸ್ಟೇಡಿಯಂ 1,32,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಒಟ್ಟು ₹1,650…