ಬೆಂಗಳೂರು: ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ವರುಣಾದಲ್ಲಿ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣದಲ್ಲಿ ಸಿಎಂ ಪುತ್ರ ಯತೀಂದ್ರ ಅವರ ಕೈವಾಡವಿರುವ ಬಗ್ಗೆ ಪ್ರತಿಪಕ್ಷ ಬಿಜೆಪಿ ಸಂಶಯ ವ್ಯಕ್ತಪಡಿಸಿದೆ. ಸಿಎಂ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಗೆ ಇಷ್ಟು ಕಿರುಕುಳ ಇರುವಾಗ ಉಳಿದಕಡೆ ಏನು ಕಥೆ ಎಂದು ಬಿಜೆಪಿ ಪ್ರಶ್ನಿಸಿದೆ. ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಸಿಎಂ @siddaramaiah ಸ್ವಕ್ಷೇತ್ರ ವರುಣಾದಲ್ಲೇ ಮಹಿಳಾ ಅಧಿಕಾರಿ ಸರ್ಕಾರಿ ಕಛೇರಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಈ ಕಿರುಕುಳದ ಹಿಂದೆ ವರ್ಗಾವಣೆ ಕಿಂಗ್ ಪಿನ್ ವರುಣಾ ಉಸ್ತುವಾರಿ ಯತೀಂದ್ರ ಸಿದ್ದರಾಮಯ್ಯನವರ ಕೈವಾಡ ಶಂಕೆ ಮೂಡುತ್ತಿದೆ. ಸಿಎಂ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಗೆ ಇಷ್ಟು ಕಿರುಕುಳ… pic.twitter.com/HPsBKWbvFG — BJP Karnataka (@BJP4Karnataka) November 22, 2025 ಸಾಮಾಜಿಕ ಮಾಧ್ಯಮ ‘X’ ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಸಿಎಂ ಸಿದ್ದರಾಮಯ್ಯರ ಸ್ವಕ್ಷೇತ್ರ ವರುಣಾದಲ್ಲೇ ಮಹಿಳಾ ಅಧಿಕಾರಿ ಸರ್ಕಾರಿ ಕಛೇರಿಯೊಳಗೆ ಆತ್ಮಹತ್ಯೆಗೆ…
Author: NavaKarnataka
ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತ ಚರಿತ್ರೆ ಸಿನಿಮಾ ಚಿತ್ರೀಕರಣ ಆರಂಭ
ಸಿಂದಿಗೇರಿ: ಕುರುಗೋಡು ತಾಲೂಕಿನ ಸಿಂದಿಗೇರಿ ಗ್ರಾಮದಲ್ಲಿ ದಾತ್ರಿ ರಂಗಸಂಸ್ಥೆ ಸಿರಿಗೇರಿ ವತಿಯಿಂದ ಆಯೋಜಿಸಿದ್ದ ಕಲಾ ತಂಡದಿಂದ ಶರಣ ಹರಳಯ್ಯ ಜೀವನ ಆಧಾರಿತ ನಾಟಕ ಪ್ರದರ್ಶನ, ಸಿಂದಿಗೇರಿ ಗ್ರಾಮದ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನದೊಂದಿಗೆ ಶ್ರೀ ಶಿವಶರಣ ಮಲ್ಲಪ್ಪತಾತನವರ ಚಲನಚಿತ್ರ ಉದ್ಘಾಟನೆ ಗಮನಸೆಳೆಯಿತು. ಸಿಂದಿಗೇರಿ ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಜೀವನದಲ್ಲಿ ಅಚ್ಚಳಿಯದ ಗುರುತು ಬರೆದಿದ್ದ, ಗುಳ್ಯo ಶ್ರೀ ಶಿವಶರಣ ಗಾದಿಲಿಂಗಪ್ಪ ತಾತ ನವರ ಪರಮ ಶಿಷ್ಯರಾದ ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತನವರ ಮಹಿಮೆಯನ್ನು ಚಿತ್ರಿಸುವ ಮಹಾಯೋಗಿ ಶ್ರೀ ಶಿವಶರಣ ಮಲ್ಲಪ್ಪತಾತನವರ ಚರಿತ್ರೆ ಸಿಂದಿಗೇರಿ, ಬೈಲೂರು ಎಂಬ ಚಲನಚಿತ್ರದ ಚಿತ್ರಿಕರಣ ಉದ್ಘಾಟನಾ ಕಾರ್ಯಕ್ರಮದ ವೇಳೆ ಸಿಂದಿಗೇರಿ, ಬೈಲೂರು ಗ್ರಾಮಸ್ಥರು ಹಾಗೂ ಸರ್ವ ಭಕ್ತ ವೃಂದ ಸಹಾಯ, ಸಹಕಾರದಿಂದ ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಭಕ್ತರು, ಗಣ್ಯರು ಭಾಗವಹಿಸಿದರು. ಪೂಜಾ ವಿಧಿ, ದೀಪಪ್ರಜ್ವಲನ ಮತ್ತು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ನಂತರ ಚಿತ್ರ…
ರಾಜ್ಯದ ಆಡಳಿತ ಯಂತ್ರ ಕೋಮಾ ಸ್ಥಿತಿಯಲ್ಲಿದ್ದು, ಜನರ ಸಮಸ್ಯೆಗಳನ್ನು ಕೇಳುವವರಿಲ್ಲದ ಸ್ಥಿತಿ: ಬಿಜೆಪಿ ಟೀಕೆ
ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ ” ವಂದೇ ಮಾತರಂ ಸಂಭ್ರಮಾಚರಣೆ” ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಯಾರು ಮುಖ್ಯಮಂತ್ರಿ ಎಂದು ಸ್ಪಷ್ಟವಾಗಿ ತಿಳಿಸಲಿ ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಕಾದಾಟ ನಡೆಯುತ್ತಿರುವುದರಿಂದ ಸರ್ಕಾರ ಸತ್ತುಹೋಗಿದೆ. ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಪದವಿಯಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲವೆಂದರೆ ಸರ್ಕಾರ ನಡೆಯುವುದಿಲ್ಲ. ಅಧಿಕಾರಿಗಳು ಕೆಲಸ ಮಾಡುವುದಿಲ್ಲ. ಆಡಳಿತಯಂತ್ರ ಕೋಮಾದಲ್ಲಿದೆ ಎಂದರು. ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್ ಹೈಕಮಾಂಡ್‌ಗೆ ಇಲ್ಲ…
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ಮುಂದುವರಿಕೆ
ಬೆಂಗಳೂರು: ಜನತಾ ದಳ (ಎಸ್) ಪಕ್ಷದ ರಾಷ್ಟ್ರೀಯ ನೇತೃತ್ವದಲ್ಲಿ ಬದಲಾವಣೆ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿ ಒಮ್ಮತದಿಂದ ಮರು ಆಯ್ಕೆಗೊಂಡಿದ್ದಾರೆ. ಜೆಪಿ ಭವನದಲ್ಲಿ ಶುಕ್ರವಾರ ನಡೆದ ಜೆಡಿಎಸ್ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಕರ್ನಾಟಕದಲ್ಲೂ ಸಂಘಟನೆ ವಿಸ್ತರಣೆ ಅಗತ್ಯವಾಗಿರುವ ಈ ಸಂದರ್ಭದಲ್ಲಿ, ದೇವೇಗೌಡ–ಕುಮಾರಸ್ವಾಮಿ ನೇತೃತ್ವ ಮುಂದುವರಿಯಬೇಕೆಂಬ ಅಭಿಪ್ರಾಯ ಪ್ರತಿನಿಧಿಗಳ ನಡುವೆ ನಿರ್ಮಾಣವಾಯಿತು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಸಭೆಯಲ್ಲಿ ವಿವಿಧ ರಾಜ್ಯಗಳ ಜೆಡಿಎಸ್ ಪ್ರತಿನಿಧಿಗಳು, ರಾಜ್ಯದ ಶಾಸಕರು, ಎಂಎಲ್ಸಿಗಳು, ಜಿಲ್ಲಾಧ್ಯಕ್ಷರು ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.
ಪಾಕ್ ಪರ ಬೇಹುಗಾರಿಕೆ ಆರೋಪ: ಉಡುಪಿಯಲ್ಲಿ ಇಬ್ಬರು ಬಂಧನ
ಉಡುಪಿ: ಭಾರತೀಯ ನೌಕಾಪಡೆಯ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಚೋರಿಸಿ ರವಾನಿಸಿದ್ದ ಆರೋಪದಲ್ಲಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್ ಸಿಇಒ ಮಲ್ಪೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ 152 ಹಾಗೂ ಅಧಿಕೃತ ರಹಸ್ಯ ಕಾಯ್ದೆ (ಒಎಸ್‌ಎ) 3 ಮತ್ತು 5ನೇ ಕಲಮಗಳಡಿ ಕೇಸ್ ದಾಖಲಾಗಿದೆ. ಬಂಧಿತರನ್ನು ಉತ್ತರ ಪ್ರದೇಶದ ಸುಲ್ತಾನ್‌ಪುರ ಮೂಲದ 20 ವರ್ಷದ ರೋಹಿತ್ ಮತ್ತು 37 ವರ್ಷದ ಸಾಂತ್ರಿ ಎಂದು ಗುರುತಿಸಲಾಗಿದೆ. ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಡಿಸೆಂಬರ್ 3ರವರೆಗೆ ನ್ಯಾಯಾಂಗ ಬಂಧನವನ್ನೂ ವಿಧಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಎಸ್ಪಿ ಹರಿರಾಮ್ ಶಂಕರ್ “ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೆ ಸಂಬಂಧಿಸಿದ ಗಂಭೀರ ಪ್ರಕರಣವಾದ್ದರಿಂದ ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ನವೆಂಬರ್ 22ರಂದು ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆಯಲಾಗುವುದು” ಎಂದರು. ಮಲ್ಪೆಯಲ್ಲಿದ್ದ ವಸತಿಗೃಹದ ಕೋಣೆಯಲ್ಲಿ ಸುಳಿವಿನ ಆಧಾರದ ಮೇಲೆ…
ತೇಜಸ್ ಯುದ್ಧವಿಮಾನ ಪತನ; ದುಬೈ ಏರೋ ಶೋ ವೇಳೆ ದುರಂತ
ದುಬೈ: ವಿಶ್ವದ ಗಮನ ಸೆಳೆದಿರುವ ದುಬೈ ಏರೋ ಶೋ ಕಾರ್ಯಕ್ರಮದಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ದುರಂತಕ್ಕೆ ಗುರಿಯಾಗಿದೆ. ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರದರ್ಶನ ಹಾರಾಟ ನಡೆಸುತ್ತಿದ್ದ ತೇಜಸ್, ತಕ್ಷಣವೇ ಬೆಂಕಿಗಾಹುತಿಯಾಗಿ ನೆಲಕ್ಕೆ ಅಪ್ಪಳಿಸಿದೆ. ಸ್ಫೋಟದ ನಂತರ ಸ್ಥಳದೆಲ್ಲೆ ದಟ್ಟವಾದ ಕಪ್ಪು ಹೊಗೆ ಆವರಿಸಿತು. आज एक दर्दनाक क्षण हमारे बहादुर पायलट की शहादत के साथ हमारे सामने आया, जब दुबई एयर शो के दौरान हमारी अपनी तकनीक, हमारी उड़ान संभावना, यानी #Tejas विमान जो देश की शक्ति व समर्पण का प्रतीक है जो #DubaiAirShow में इस प्रकार धराशाही हो गया जैसे ये हकीकत नहीं किसी फ़िल्म का scene……
ರಾಜಕಾರಣಕ್ಕೆ ಸಚಿವ ಚೆಲುವರಾಯಸ್ವಾಮಿ ಪುತ್ರನ ಗ್ರಾಂಡ್ ಎಂಟ್ರಿ.. ಮಂಡ್ಯ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ
ಮಂಡ್ಯ: ಮಂಡ್ಯ ಡಿ.ಸಿ.ಸಿ ಬ್ಯಾಂಕ್ ಚುನಾವಣೆಯಲ್ಲಿ ಸಚಿನ್ ಚಲುವರಾಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸಚಿನ್ ಸಿ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚಲುವರಾಜ್ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 5 ವರ್ಷದ ಅವಧಿ ಅಧ್ಯಕ್ಷರಾಗಿ ಸಚಿನ್ ಮತ್ತು ಉಪಾಧ್ಯಕ್ಷರಾಗಿ ಚೆಲುವರಾಜ್ ಆಯ್ಕೆಯಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಶಿವಮೂರ್ತಿ ಪ್ರಕಟಿಸಿದ್ದಾರೆ.. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಸಚಿನ್ ಚಲುವರಾಯಸ್ವಾಮಿ, ತಮ್ಮ ಗೆಲುವಿಗೆ ಕಾರಣರಾದ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರಿಗೂ ಧನ್ಯವಾದ ಮುಖ್ಯ 12 ಜನ ನಿರ್ದೇಶಕರಿಗೂ ಧನ್ಯವಾದ ತಿಳಿಸಿದರು. ಶಂಕರೇಗೌಡರು ಹಾಗೂ ಚೌಡೇಗೌಡರು ಸ್ಥಾಪಿಸಿದ ಸಂಸ್ಥೆ ಡಿ.ಸಿ.ಸಿ ಬ್ಯಾಂಕ್ ಅಲ್ಲಿಂದಲೂ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ. ಕಳೆದ ಎರಡೂವರೆ ವರ್ಷಗಳಿಂದ ಜೋಗಿಗೌಡರು…
‘ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ಇಲ್ಲ’; ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬಿಕ್ಕಟ್ಟು ಕುರಿತಾಗಿ ಕೇಳಿಬರುತ್ತಿರುವ ಊಹಾಪೋಹಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ‘ಕರ್ನಾಟಕ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವೇ ಇಲ್ಲ. ಎಲ್ಲವೂ ಸುಗಮವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಪಕ್ಷದೊಳಗೆ ಗೊಂದಲ ಇದ್ದಿದ್ದರೆ ಹೈಕಮಾಂಡ್ ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸುವುದು. ಅಗತ್ಯವಿಲ್ಲದ ಕಾರಣ ಇದುವರೆಗೆ ಹೈಕಮಾಂಡ್ ಮಧ್ಯಪ್ರವೇಶಿಸಿಲ್ಲ” ಎಂದರು. ಹಲವಾರು ಸಚಿವರು ಮತ್ತು ಶಾಸಕರು ದೆಹಲಿಗೆ ಭೇಟಿ ನೀಡಿ ನಡೆಸಿದ “ಭೋಜನ ಸಭೆ” ರಾಜಕೀಯ ಚರ್ಚೆಗೆ ಕಾರಣವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಯಾರೇ ದೆಹಲಿಗೆ ಹೋದರೂ ತಮ್ಮ ವೈಯಕ್ತಿಕ ಅಥವಾ ಆಡಳಿತಾತ್ಮಕ ಕೆಲಸಗಳಿಗಾಗಿ ಹೋಗಿದ್ದಾರೆ. ರಾಜಕೀಯ ಕಾರಣವೇನೂ ಇಲ್ಲ ಎಂಬುದನ್ನು ಅವರು ಈಗಾಗಲೇ ವಿವರಿಸಿದ್ದಾರೆ” ಎಂದರು. ದೆಹಲಿಯಲ್ಲಿ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವ ವರದಿಗಳಿಗೆ ಸ್ಪಷ್ಟನೆ ನೀಡಿದ ಪರಮೇಶ್ವರ್, “ದೆಹಲಿಗೆ ಹೋದಾಗ ಪಕ್ಷದ…
ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಹಾರಧಾನ್ಯ ಉತ್ಪಾದನೆಯಲ್ಲಿ ಹೆಚ್ಚಳ
ನವದೆಹಲಿ: ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ಆಹಾರಧಾನ್ಯ ಉತ್ಪಾದನೆ ಗಣನೀಯವಾಗಿ ಹೆಚ್ಚಿದ್ದು, 2015–16ರ 251.54 ಮಿಲಿಯನ್ ಟನ್‌ನಿಂದ 2024–25ರಲ್ಲಿ 357.73 ಮಿಲಿಯನ್ ಟನ್ ಗಳನ್ನು ತಲುಪಲಿದೆ ಎಂದು ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಅಕ್ಕಿ ಉತ್ಪಾದನೆ 1,501.84 ಲಕ್ಷ ಟನ್ ಆಗಿ ದಾಖಲೆ ಮಟ್ಟ ತಲುಪಿದೆ ಎಂದು ತಿಳಿಸಿದರು. ಇದು ಕಳೆದ ಸಾಲಿನ 1,378.25 ಲಕ್ಷ ಟನ್‌ಗಿಂತ 123.59 ಲಕ್ಷ ಟನ್ ಹೆಚ್ಚಳ. ಗೋಧಿ ಉತ್ಪಾದನೆಯು 46.53 ಲಕ್ಷ ಟನ್‌ಗಳ ಏರಿಕೆ ಕಾಣಿಸಿ, ಹೆಸರುಕಾಳು 42.44 ಲಕ್ಷ ಟನ್, ಸೋಯಾಬೀನ್ 152.68 ಲಕ್ಷ ಟನ್, ನೆಲಗಡಲೆ 119.42 ಲಕ್ಷ ಟನ್ ಮಟ್ಟ ತಲುಪಿದೆಯೆಂದು ಹೇಳಿದರು. ಮೆಕ್ಕೆಜೋಳ ಉತ್ಪಾದನೆ 434.09 ಲಕ್ಷ ಟನ್ ಮತ್ತು ‘ಶ್ರೀಅನ್ನ’ (ರಾಗಿ) 185.92 ಲಕ್ಷ ಟನ್ ಅಂದಾಜಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಎರಡೂ ಹಬ್ಬಿನ…
ಡಿಕೆಶಿಗೆ ಪಟ್ಟ ಕಟ್ಟಲು ಬೇಬಲಿಗರ ಕಸರತ್ತು; CLP ಸಭೆ ಕರೆಯಲು ಬೆಂಬಲಿಗರ ಆಗ್ರಹ
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಇದೀಗ ಹೈವೋಲ್ಟೇಜ್ ಬೆಳವಣಿಗೆಗೆ ಸಾಕ್ಷಿಯಾಗುತ್ತಿದೆ. ಒಂದೆಡೆ ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕರು ಸಚಿವರು ಕಸರತ್ತಿನಲ್ಲಿ ತೊಡಗಿದರೆ, ಇನ್ನೊಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲಿಗರು ರಹಸ್ಯ ಸಭೆ ನಡೆಸಿ ಆಯಕತ್ವ ಬದಲಾವಣೆಗೆ ರಂಗ ಸಜ್ಜುಗೊಳಿಸುತ್ತಿದ್ದಾರೆ. ಸರ್ಕಾರ ರಚನೆಯಾದ ಆರಂಭದಲ್ಲಿ ಚರ್ಚೆಗೆ ಬಂದಂತೆಯೇ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಬೆಂಬಲಿಗ ಶಾಸಕರು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಡಿಕೆಶಿ ಬೆಂಬಲಿಗರು ರಹಸ್ಯ ಸಭೆ ನಡೆಸಿದ ಸಂದರ್ಭದಲ್ಲಿ, ಇನ್ನೊಂದೆಡೆ ಕುತೂಹಲಕಾರಿ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಟ್ಟಾ ಬೆಂಬಲಿಗ ಶಾಸಕ ಎಚ್.ಸಿ. ಬಾಲಕೃಷ್ಣ, ಹೈಕಮಾಂಡ್‌ಗೆ ತಕ್ಷಣ ಮಧ್ಯಪ್ರವೇಶಿಸಿ ನಾಯಕತ್ವ ಬದಲಾವಣೆಯ ಒಟ್ಟಾರೆ ಬೆಳವಣಿಗೆ ಬಗ್ಗೆ ಶಾಸಕರಿಗೆ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಾಲಕೃಷ್ಣ, ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದರು. ‘ಕಾಂಗ್ರೆಸ್…
