‘ಜೈಲಲ್ಲಿ ಚಳಿ ಹೆಚ್ಚಾಗಿದೆ; ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ, ಕಂಬಳಿ ಬೇಕು’ ಎಂದ ನಟ

ಬೆಂಗಳೂರು: ಅಭಿಮಾನಿ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬುಧವಾರ ಹೆಚ್ಚುವರಿ ಕಂಬಳಿಗಾಗಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಸುದ್ದಿಯ ಕೇಂದ್ರದರು. ಚಳಿಯಿಂದಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು. CCH-57 ನ್ಯಾಯಾಲಯದಲ್ಲಿ ಹಾಜರಾದ ದರ್ಶನ್, “ಚಳಿಯಿಂದ ನಿದ್ರೆ ಆಗುತ್ತಿಲ್ಲ. ಜೈಲು ಅಧಿಕಾರಿಗಳು ಕಂಬಳಿ ಕೊಡುವುದಿಲ್ಲ, ಮನೆಯವರು ಕಳಿಸಿದ ಕಂಬಳಿಯನ್ನೂ ಅನುಮತಿಸಿಲ್ಲ” ಎಂದು ದೂರಿದರು. ನ್ಯಾಯಾಧೀಶರು ಈ ಹೇಳಿಕೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಲಯದ ಪದೇಪದೇ ಸೂಚನೆಗಳ ಹೊರತಾಗಿಯೂ ಜೈಲು ಅಧಿಕಾರಿಗಳು ಕಂಬಳಿಯನ್ನು ನಿರಾಕರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಶೀತ ವಾತಾವರಣದಲ್ಲಿರುವ ಕೈದಿಗೆ ಕಂಬಳಿ ನೀಡದಿರುವುದು ಹೇಗೆ ನ್ಯಾಯಸಮ್ಮತ ಎಂದು ಗರಂ ಆದ ನ್ಯಾಯಾಧೀಶರು, ತಕ್ಷಣವೇ ಕಂಬಳಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಪ್ರಕರಣದ ಮತ್ತೊಬ್ಬ ಆರೋಪಿ ನಾಗರಾಜ್ ಕೂಡ “ಜೈಲಿನಲ್ಲಿ ಚಳಿ ಜಾಸ್ತಿ, ಆದರೆ ಕಂಬಳಿ ಕೊಡುತ್ತಿಲ್ಲ”…

ಬೈಕ್ ಕಳ್ಳರ ಹಾವಳಿಗೆ ಬ್ರೇಕ್; ಖದೀಮರನ್ನು ಖೆಡ್ಡಾಕ್ಕೆ ಕೆಡವಿದ ಪೊಲೀಸ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಹಾವಳಿಗೆ ವೈಟ್’ಫೀಲ್ಡ್ ಉಪವಿಭಾಗ ಪೊಲೀಸರು ಅಂಕುಶ ಹಾಕಿದ್ದಾರೆ. ಭರ್ಜರಿ ಕಾರ್ಯಾಚರಣೆ ನಡೆಸಿದ ಎಸಿಪಿ ರೀನಾ ಸುವರ್ಣ ನೇತೃತ್ವದ ಪೊಲೀಸರು ಕಳ್ಳರನ್ನು ಜೈಲಿಗಟ್ಟಿದ್ದಾರೆ. ಸುಮಾರು 20 ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ. ಮಹದೇವಪುರ ಸಮೀಪದ ಗೋಪಾಲನ್ ಇಂಟರ್ ನ್ಯಾಷನ್ ಸ್ಕೂಲ್ ಬಳಿ ನಿಲ್ಲಿಸಲಾಗಿದ್ದ ಯಮಹ ಆರ್’ಎಕ್ಸ್ ಬೈಕ್ ಕಳೆದುಹೋಗಿರುವ ಬಗ್ಗೆ ನಾಗರಾಜು ಎಂಬವರು ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಎಸಿಪಿ ರೀನಾ ಸುವರ್ಣ ಅವರು ಮಹದೇವಪುರ ಠಾಣೆಯ ಇನ್ಸ್‌ಪೆಕ್ಟರ್ ‌ ಜಿ.ಪ್ರವೀಣ್ ಬಾಬು, PSIಗಳಾದ ಮಹೇಶ್, ಪರಶುರಾಮ್ ಮತ್ತು ಸುನೀಲ್ ಕಡ್ಡಿ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆಗೆ ಮುನ್ನುಡಿ ಬರೆದರು. ಕಳ್ಳರಿಗಾಗಿ ಖೇಡಾ ತೋಡಿದ ಈ ಪೊಲೀಸರು ರಾಮಮೂರ್ತಿನಗರ ನಿವಾಸಿಗಳಾದ ಮನು ಬಿನ್ ದ್ಯಾವೇಗೌಡ ಮತ್ತು ಸಚ್ಚಿನ್ ಬಿನ್ ಬಾಲರಾಜು ಎಂಬಿಬ್ಬರನ್ನು…

ಕೆಎಸ್‌ಸಿಎ ಚುನಾವಣೆ ಮುಂದೂಡಿಕೆಗೆ ವೆಂಕಟೇಶ್ ಪ್ರಸಾದ್ ಆಕ್ಷೇಪ

ಬೆಂಗಳೂರು: ನವೆಂಬರ್‌ 30ಕ್ಕೆ ನಿಗದಿಯಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯನ್ನು ಮುಂದೂಡಿರುವುದಕ್ಕೆ ಸಂಸ್ಥೆಯ ಮಾಜಿ ವೇಗಗೋಲಂದಾಜು ವೆಂಕಟೇಶ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆಯನ್ನು ಡಿಸೆಂಬರ್‌ 30ಕ್ಕೆ ಮುಂದೂಡಿರುವುದು ಸರಿಯಲ್ಲ ಎಂದಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಸಾದ್, “ಈ ನಿರ್ಧಾರ ನಮಗೆ ಸಂಪೂರ್ಣ ಆಘಾತಕರ. ಕೆಎಸ್‌ಸಿಎನಲ್ಲಿ ರಾಜಕೀಯಕ್ಕಲ್ಲ, ಕ್ರಿಕೆಟ್‌ಗೆ ಆದ್ಯತೆ ಸಿಗಬೇಕು. ನಾವು ಯಾವುದೇ ರಾಜಕೀಯ ಉದ್ದೇಶದಿಂದ ಬಂದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉನ್ನತ ಮಟ್ಟದ ಕ್ರಿಕೆಟ್‌ಗೆ ಪುನರ್ಜೀವನ ನೀಡುವುದು, ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್‌ ಮರಳಿ ಬರಲು ಸೂಕ್ತ ವಾತಾವರಣ ಸೃಷ್ಟಿಸುವುದು ನಮ್ಮ ಏಕೈಕ ಗುರಿ,” ಎಂದು ಹೇಳಿದ್ದಾರೆ. ಚುನಾವಣೆಯು ನಿಗದಿಪಡಿಸಿದ ದಿನಾಂಕದಲ್ಲಿ ನಡೆಯಲೇಬೇಕು. ಕೆಎಸ್‌ಸಿಎ ಈಗ ನಿರ್ಣಾಯಕ ಹಂತದಲ್ಲಿದೆ. ಬದಲಾವಣೆಯ ಅಗತ್ಯ ತೀವ್ರವಾಗಿದೆ. ಈಗಾಗಲೇ ನಡೆಯುತ್ತಿರುವ ಋತುವಿನಲ್ಲಿ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದೆ. ಹೊಸ ಸಮಿತಿಯು ತನ್ನ ದೃಷ್ಟಿಕೋನವನ್ನು ಜಾರಿಗೆ ತರಲು ಚುನಾವಣೆ ಅತ್ಯಗತ್ಯ. ಚುನಾವಣಾ ಆಯೋಗದೊಂದಿಗೆ…

ಸಿಎಂ ಮೊದಲು ನೆರೆ ಪರಿಹಾರ ಕೊಡಬೇಕಿತ್ತು- ಸಿ.ಟಿ.ರವಿ

ಬೆಂಗಳೂರು: ರಾಜ್ಯ ಸರಕಾರವು ಮೊದಲು ನೆರೆ ಪರಿಹಾರ ನೀಡಿ ಬಳಿಕ ಕೇಂದ್ರದಿಂದ ಪರಿಹಾರ ಕೇಳಬೇಕಿತ್ತು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿಯವರದು ಮತ್ತು ಮುಖ್ಯಮಂತ್ರಿಗಳದು ಸಾಂವಿಧಾನಿಕ ಹುದ್ದೆಗಳು. ಅವರ ಪರಸ್ಪರ ಭೇಟಿ, ಮಾತುಕತೆಯನ್ನು ರಾಜಕೀಯ ದೃಷ್ಟಿಯಿಂದ ನೋಡಲಾಗದು; ನೋಡಬಾರದು ಎಂದು ಪ್ರಶ್ನೆಗೆ ಉತ್ತರಿಸಿದರು. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ನೆರೆ ಪರಿಹಾರವಾಗಿ ರಾಜ್ಯದ ಬೊಕ್ಕಸದಿಂದ ಹಣ ನೀಡಿ ಬಳಿಕ ಕೇಂದ್ರದಿಂದ ಕೇಳುವ ವಾಡಿಕೆಯನ್ನು ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಮಾಡಿದ್ದಾರೆ. ಬೇರೆ ಬೇರೆ ಮುಖ್ಯಮಂತ್ರಿಗಳೂ ಇದನ್ನೇ ಮಾಡಿದ್ದರು. ಕೇಂದ್ರ ಎನ್‍ಡಿಆರ್‍ಎಫ್ ನಿಯಮದಡಿ ಸಮೀಕ್ಷೆ ಮಾಡಿ ಕೊಡಬೇಕಾದುದನ್ನು ಕೊಟ್ಟೇ ಕೊಡುತ್ತದೆ. ಅದಕ್ಕೂ ಮೊದಲು ರಾಜ್ಯದ ಬೊಕ್ಕಸದಿಂದ ಬಿಡುಗಡೆ ಮಾಡುವುದು ಎಲ್ಲ ಮುಖ್ಯಮಂತ್ರಿಗಳು, ಸರಕಾರಗಳು ಪಾಲಿಸಿಕೊಂಡು ಬಂದ ಪದ್ಧತಿ. ಅದನ್ನು ಮುಖ್ಯಮಂತ್ರಿಗಳು ಮಾಡಬೇಕಿತ್ತು ಎಂದು…

ರಾಜ್ಯಪಾಲರನ್ನು ಭೇಟಿ ಮಾಡಿದ ನಿತೀಶ್; ನ.20 ರಂದು ನೂತನ ಸಿಎಂ ಆಗಿ ಪ್ರಮಾಣವಚನ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ರಾಜಭವನದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಹೊಸ ಸರ್ಕಾರ ರಚಿಸುವ ಒಂದು ದಿನ ಮೊದಲು, ಅಂದರೆ ನವೆಂಬರ್ 19 ರಂದು ಪ್ರಸ್ತುತ ವಿಧಾನಸಭೆಯನ್ನು ವಿಸರ್ಜಿಸುವಂತೆ ಮನವಿ ಮಾಡಿದ್ದಾರೆ. 2005 ರಿಂದ ದಾಖಲೆಯ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿದ ಬಳಿಕ, ನಿತೀಶ್ ಕುಮಾರ್ ಅವರು ಈಗ ದಾಖಲೆಯ 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ನವೆಂಬರ್ 20ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಅದ್ದೂರಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇದೆ. ಬೆಳಿಗ್ಗೆ…

ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಬಸ್ ಅಪಘಾತ; 45 ಭಾರತೀಯರು ದುರ್ಮರಣ

ಸೌದಿ: ಮೆಕ್ಕಾ–ಮದೀನಾ ಮಾರ್ಗದಲ್ಲಿ ಭಾರತೀಯ ಭಕ್ತರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡೀಸೆಲ್‌ ಟ್ಯಾಂಕರ್‌ ಡಿಕ್ಕಿ ಹೊಡೆದು ಭಾರೀ ದುರಂತ ಸಂಭವಿಸಿದೆ. ಮುಫ್ರಿಹತ್ ಪ್ರದೇಶದಲ್ಲಿ ಭಾರತೀಯ ಕಾಲಮಾನ ಸೋಮವಾರ ಬೆಳಗಿನ ಜಾವ 1.30ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಬಸ್ ಬೆಂಕಿಗೆ ಆಹುತಿಯಾಗಿದೆ. ಮೆಕ್ಕಾದಿಂದ ಮದೀನಾಗೆ ತೆರಳುತ್ತಿದ್ದ ಬಸ್ಸಿನಲ್ಲಿ ಸುಮಾರು 20 ಮಹಿಳೆಯರು, 11 ಮಕ್ಕಳು ಸೇರಿದಂತೆ ಒಟ್ಟು 45 ಉಮ್ರಾ ಯಾತ್ರಿಕರು ಪ್ರಯಾಣಿಸುತ್ತಿದ್ದರು. ಡೀಸೆಲ್‌ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಜ್ವಾಲೆಗಳು ಬಸ್‌ನ್ನು ಆವರಿಸಿದ್ದು, ಒಳಗಿದ್ದವರು ತಪ್ಪಿಸಿಕೊಳ್ಳುವ ಅವಕಾಶವೇ ದೊರೆತಿಲ್ಲ. ಎಲ್ಲಾ 45 ಯಾತ್ರಿಕರೂ ಸಜೀವದಹನವಾದರೆಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಮೃತರೆಲ್ಲರೂ ಹೈದರಾಬಾದ್ ಮೂಲದವರಾಗಿರುವ ಮಾಹಿತಿ ಲಭ್ಯವಾಗಿದೆ. ಈ ಭೀಕರ ದುರಂತದಲ್ಲಿ ಒಬ್ಬ ಯುವಕ ಮಾತ್ರ ಬದುಕುಳಿದಿದ್ದಾನೆ ಎನ್ನಲಾಗಿದೆ.

ಬಾಂಗ್ಲಾದೇಶ ಹಿಂಸಾಚಾರ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ ಪ್ರಕಟ

ಢಾಕಾ: ಕಳೆದ ವರ್ಷದ ಜುಲೈಯಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಮಾನವೀಯತೆಯ ವಿರುದ್ಧದ ಅಪರಾಧಗಳನ್ನು ಎಸಗಿದ್ದಾರೆ ಎಂಬ ಆರೋಪದ ಮೇಲೆ, ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಸೋಮವಾರ ಮಾಜಿ ಪ್ರಧಾನಿ ಶೇಖ್ ಹಸೀನಾ ಹಾಗೂ ಅವರ ಇಬ್ಬರು ಆಪ್ತರನ್ನು ದೋಷಿಗಳೆಂದು ಘೋಷಿಸಿ ಗಲ್ಲು ಶಿಕ್ಷೆ ಪ್ರಕಟಿಸಿದೆ. ದೋಷಿಗಳಾಗಿ ಹೊರಹೊಮ್ಮಿದ ಇತರರು ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಮಹಾನಿರೀಕ್ಷಕ ಚೌಧರಿ ಅಬ್ದುಲ್ಲಾ ಅಲ್–ಮಾಮುನ್. ನ್ಯಾಯಮೂರ್ತಿ ಎಂಡಿ ಗೋಲಮ್ ಮೊರ್ತುಜಾ ಮಜುಂದರ್ ನೇತೃತ್ವದ ಮೂರು ಸದಸ್ಯರ ಐಸಿಟಿ–1 ಪೀಠ ತೀರ್ಪು ಪ್ರಕಟಿಸಿತು. ಹಸೀನಾ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲೇ ಉಳಿದುಕೊಂಡಿದ್ದು, ನ್ಯಾಯಾಲಯದ ಸಮನ್ಸ್‌ಗಳನ್ನು ಪಾಲಿಸಲು ನಿರಾಕರಿಸಿರುವುದು ದಾಖಲಾಗಿದೆ. ಅಸದುಜ್ಜಮಾನ್ ಪರಾರಿಯಾಗಿದ್ದು, ಮಾಮುನ್ ಬಂಧನದಲ್ಲಿದ್ದಾರೆ. ವಿಶೇಷವಾಗಿ, ಮಾಮುನ್ ತಪ್ಪೊಪ್ಪಿಕೊಂಡು ರಾಜ್ಯ ಸಾಕ್ಷಿಯಾದ ಮೊದಲ ಆರೋಪಿಯಾಗಿದ್ದಾರೆ. ಕೊಲೆಗಳನ್ನು ತಡೆಯುವಲ್ಲಿ ವಿಫಲತೆ ಸೇರಿದಂತೆ ಐದು ಮುಖ್ಯ ಆರೋಪಗಳನ್ನು…

ದೆಹಲಿ ಸ್ಫೋಟ; NIAಯಿಂದ ಕಾರು ಚಾಲಕನ ಬಂಧನ

ನವದೆಹಲಿ: ದೆಹಲಿಯ ಕೆಂಪುಕೋಟೆ ಪ್ರದೇಶದಲ್ಲಿ ನವೆಂಬರ್ 10ರಂದು ನಡೆದ ಕಾರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮಹತ್ವದ ತಿರುವು ದೊರೆತಿದ್ದು, ದಾಳಿಗೆ ಬಳಸಲಾದ ಕಾಶ್ಮೀರಿ ಕಾರಿನ ಮಾಲೀಕ ಅಮೀರ್ ರಶೀದ್‌ ಅಲಿ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪ್ರಕರಣವನ್ನು ದೆಹಲಿ ಪೊಲೀಸರಿಂದ ವಹಿಸಿಕೊಂಡ ನಂತರ, ಎನ್‌ಐಎ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿ ಅಮೀರ್ ರಶೀದ್‌ ಅಲಿಯನ್ನು ದೆಹಲಿಯಲ್ಲೇ ಬಂಧಿಸಿದೆ. ಜಮ್ಮು–ಕಾಶ್ಮೀರದ ಪ್ಯಾಂಪೋರ್‌ ತಾಲ್ಲೂಕಿನ ಸಂಬೂರ್‌ ಪ್ರದೇಶದ ನಿವಾಸಿಯಾದ ಅಮೀರ್, ಆತ್ಮಹತ್ಯಾ ಬಾಂಬರ್‌ ಉಮರ್ ಉನ್ ನಬಿ ಜೊತೆ ಸೇರಿ ದಾಳಿಯ ಸಂಚು ರೂಪಿಸಿದ್ದಾನೆ ಎಂದು ಎನ್‌ಐಎ ತನಿಖೆಯಲ್ಲಿ ಹೊರಬಂದಿದೆ. ಅಮೀರ್ ಈ ಕಾರನ್ನು ಖರೀದಿಸಲು ದೆಹಲಿಗೆ ಬಂದು, ಬಳಿಕ ಅದೇ ಕಾರನ್ನು ಐಇಡಿ ಸ್ಫೋಟಕ ಸಾಧನವನ್ನು ಅಳವಡಿಸಿ ರಾಷ್ಟ್ರೀಯ ರಾಜಧಾನಿಯನ್ನು ಬೆಚ್ಚಿಬೀಳಿಸಿದ ದಾಳಿಗೆ ಬಳಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್‌…

ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಉಪನ್ಯಾಸಕರ ವಿರುದ್ಧ ಎಫ್‌ಐಆರ್

ಮೈಸೂರು: ಪ್ರಮುಖ ಶಿಕ್ಷಣ ಸಂಸ್ಥೆಯ ಉಪನ್ಯಾಸಕರೊಬ್ಬರ ವಿರುದ್ಧ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಈ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯನ್ನು ಭರತ್ ಭಾರ್ಗವ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 126(2) (ತಪ್ಪಾದ ಸಂಯಮ), 75(2) (ಲೈಂಗಿಕ ಕಿರುಕುಳ) ಮತ್ತು 351(2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳ ಭರವಸೆಯ ಜೊತೆಗೆ ಉತ್ತಮ ಉದ್ಯೋಗ ದೊರಕಿಸಲು ಸಹಾಯ ಮಾಡುವ ನೆಪದಲ್ಲಿ ಉಪನ್ಯಾಸಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ತನ್ನ ಅನುಚಿತ ವರ್ತನೆಗೆ ಪ್ರಶ್ನೆ ಮಾಡಿದಾಗ, “ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಉಪನ್ಯಾಸಕರು ಬೆದರಿಕೆ ಹಾಕಿದರೆಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸುವ ಬೆದರಿಕೆ ನೀಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪವೂ ಇದೆ. ವಿದ್ಯಾರ್ಥಿನಿ ಆರೋಪಿಯ ವಿರುದ್ಧ ಕಠಿಣ…

2010ರ ಅಡ್ವಾಣಿ ನಾಯಕತ್ವಕ್ಕೆ ಸಿಕ್ಕಿದ ಪ್ರಾಮುಖ್ಯತೆ ಈಗ ಮೋದಿಗೆ ಸಿಕ್ಕಿಲ್ಲವೇ? ಏನಿದು ರಮೇಶ್ ಬಾಬು ವಿಶ್ಲೇಷಣೆ?

ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯಭೇರಿ ಭಾರಿಸಿರಬಹುದು, ಆದರೆ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಡಿಮೆಯಾಗಿರುವುದನ್ನು ಆ ಫಲಿತಾಂಶ ತೋರಿಸಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರೂ ಆದ, ಶಾಸಕ ರಮೇಶ್ ಬಾಬು ವಿಶ್ಲೇಷಿಸಿದ್ದಾರೆ. ಸಂಸದೀಯ ವಿಶ್ಲೇಷಕರೂ ಆದ ರಮೇಶ್ ಬಾಬು ಅವರು, ಬಿಹಾರ ಫಲಿತಾಂಶ ಬಗ್ಗೆ ತಮ್ಮದೇ ದಾಟಿಯಲ್ಲಿ ವಿಶ್ಲೇಷಿಸಿ ಪ್ರತಿಕ್ರಿಯೆ ನೀಡಿದ್ದಾರೆ. ‘ಬಿಹಾರದಲ್ಲಿ ಕಾಂಗ್ರೆಸ್ ಪಕ್ಷದ ಸೋಲನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಅದೇ ಸಮಯದಲ್ಲಿ ರಾಜಕೀಯ ಪಕ್ಷವಾಗಿ ಮತ್ತು ಪಕ್ಷವಾಗಿ ಗೌರವದಿಂದ ಹೇಳಿಕೊಳ್ಳುವುದರೊಂದಿಗೆ, ಬಿಜೆಪಿ ಹಲವಾರು ಅಂಶಗಳಿಗೆ ಜವಾಬ್ದಾರರಾಗಿರಬೇಕು’ ಎಂದು ಅವರು ಪ್ರತಿಪಾದಿಸಿದ್ದಾರೆ. ಬಿಹಾರದಲ್ಲಿ 2025 ರ ಎನ್‌ಡಿಎಯ ಗೆಲುವು ಪ್ರಭಾವಶಾಲಿಯಾಗಿದ್ದರೂ, ಫಲಿತಾಂಶವನ್ನು ಆಳವಾಗಿ ಗಮನಿಸಿದರೆ, ನರೇಂದ್ರ ಮೋದಿಗೆ ವೈಯಕ್ತಿಕವಾಗಿ ಹಿನ್ನಡೆಯಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ರಮೇಶ್ ಬಾಬು ಬೊಟ್ಟುಮಾಡಿದ್ದಾರೆ. 2010ರಲ್ಲಿ ಎಲ್.ಕೆ.ಅಡ್ವಾಣಿ ಇನ್ನೂ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದಾಗ ಬಿಹಾರದಲ್ಲಿ ಬಿಜೆಪಿ…