ದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕಾಗಿ ಪ್ರಧಾನಿ ಮೋದಿಯವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಸುಂದರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹುತೇಕ ನಾಯಕರಿಗೆ, ಗಣ್ಯರಿಗೆ ಸಾಧ್ಯವಾಗಿಲ್ಲ.
ರಾಮ ಮಂದಿರಕ್ಕಾಗಿ ಹೋರಾಟ ನಡೆಸಿರುವ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಕೈಂಕರ್ಯವನ್ನು ಕಣ್ತುಂಬಿಕೊಂಡರು.
ರಾಮ ಜನ್ಮಭೂಮಿ ಪರವಾಗಿ ಸುಪ್ರಿಮ್ ಕೋರ್ಟ್ ನಲ್ಲಿ ಹೋರಾಟ ನಡೆಸಿದ್ದ ಹಿರಿಯ ವಕೀಲ ಶ್ರೀ ಪರಾಶರಣ್ ಕೂಡಾ ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಅವರು ತಮ್ಮ ಕುಟುಂಬದ ಜೊತೆ ಭೂಮಿ ಪೂಜೆ ಕಾರ್ಯಕ್ರಮ ವೀಕ್ಷಿಸಿದರು.