ಮಂಗಳೂರು: ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ಬಕ್ರೀದ್ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಕರಾವಳಿ ಭಾಗದಲ್ಲಿ ಈ ತಿಂಗಳ 31ರಂದು ತ್ಯಾಗ ಬಲಿದಾನಗಳ ಹಬ್ಬ ‘ಬಕ್ರೀದ್’ ಆಚರಣೆ ಮಾಡಲಾಗುವುದೆಂದು ಧಾರ್ಮಿಕ ಮುಖಂಡರು ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ಅವರು ಘೋಷಣೆ ಮಾಡಿದ್ದಾರೆ. ದುಲ್ ಹಜ್ಜ್ ತಿಂಗಳ ಚಂದ್ರದರ್ಶನವಾಗಿದೆ. ಹಾಗಾಗಿ ಜುಲೈ 31 ಶುಕ್ರವಾರದಂದು ಈದುಲ್ ಅಝ್ ಹಾ (ಬಕ್ರಿದ್) ಆಚರಣೆಗೆ ಅವರ ಉಪಸ್ಥಿತಿಯಲ್ಲಿ ತೀರ್ಮಾನಿಸಲಾಗಿದೆ.
ಈ ಬಗ್ಗೆ ಮಂಗಳೂರಿನ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಜುಲೈ 31 ಶುಕ್ರವಾರದಂದು ಈದುಲ್ ಅಝ್ ಹಾ (ಬಕ್ರಿದ್) ಹಬ್ಬ ಆಚರಿಸಲು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ಘೋಷಿಸಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ.. ಸುಶಾಂತ್ ಆತ್ಮದ ಜೊತೆ ತಜ್ಞನ ಸಂವಾದ; ಸಾವಿನ ರಹಸ್ಯದ ಹಿಂದಿದೆ ನಿಗೂಢತೆ