ಮಹಾರಾಷ್ಟ್ರದಲ್ಲಿ ಮೀಸಲಾತಿ‌ ಕಿಚ್ಚು; ಬೆಂಗಳೂರು-ಶಿರಡಿ KSRTC ಬಸ್ ಸೇವೆ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ಮರಾಠ ಮೀಸಲಾತಿ ಚಳುವಳಿ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಹಾರಾಷ್ಟ್ರ ರಾಜ್ಯಕ್ಕೆ ಹೊರಡುವ ಮುಂಬೈ ಶಿರಡಿ ಮತ್ತು ಪುಣೆ ಅನುಸೂಚಿಗಳನ್ನು ರದ್ದುಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಕಟಣೆ ತಿಳಿಸಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ಮರಾಠ ಮೀಸಲಾತಿ ಚಳುವಳಿ, ಹೋರಾಟ ನಡುವೆಯೂ ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರಿನಿಂದ ಹೊರಡುವ ಶಿರಡಿ (1301), ಮುಂಬೈ(1600) ಪುಣೆ (1804 & 1904) ಗೆ ನಿಲ್ಲಿಸಲಾಗಿದ್ದ ಅನುಸೂಚಿಗಳನ್ನು ಈ ದಿನದಿಂದ ಪರಿಸ್ಥಿತಿಯ ಮೇರೆಗೆ ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿತ್ತು.

ಆದರೆ, ಮಹಾರಾಷ್ಟ್ರ ರಾಜ್ಯದಲ್ಲಿ ಈ ಸಂಬಂಧ ಚಳುವಳಿಯು ತೀವ್ರಗೊಂಡಿದ್ದು ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಹೆಚ್ಚು ಬಸ್‌ಗಳಿಗೆ ಜಕಂ ಮಾಡಲಾಗಿದೆ ಮತ್ತು ಕೆಲವೊಂದು ಬಸ್ಗಳನ್ನು ಸುಡಲಾಗಿದೆ ಎಂಬ ಮಾಹಿತಿಯ ಮೇರೆಗೆ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಹೊರಡುವ ಮುಂಬೈ ಶಿರಡಿ ಮತ್ತು ಪುಣೆ ಅನುಸೂಚಿಗಳನ್ನು ರದ್ದುಗೊಳಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.

Related posts