ಮಂಗಳೂರು: ನಾಡಿನ ಒಲಿತಿಗಾಗಿ ಒಂದಿಲ್ಲೊಂದು ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿಯ ‘ವೀರ ಕೇಸರಿ’ ಯುವಕರು ಕೈಗೊಂಡಿರುವ ‘ಆಸರೆ ಕಾರ್ಯಕ್ರಮ ಗಮನಸೆಳೆದಿದೆ. ‘ವೀರಕೇಸರಿ ಬೆಳ್ತಂಗಡಿ’ ಸಂಘಟನೆ ನಿರ್ಗತಿಕರಿಗಾಗಿ ಮನೆಗಳನ್ನು ನಿರ್ಮಿಸಿಕೊಡುತ್ತಿದ್ದು, ಇದೀಗ ಈ ಸೇವಾಯೋಜನೆ ದ್ವಿ ಶತಕ ತಲುಪಿದೆ.
ವೈದಿಕ ಕೈಂಕರ್ಯಗಳೊಂದಿಗೆ ನಡೆದ 200ನೇ ಸೇವಾಯೋಜನೆಯಾದ 8ನೇ ಆಸರೆ ಮನೆಯ ಭೂಮಿಪೂಜಾ ಕಾರ್ಯಕ್ರಮವು ಗಮನಸೆಳೆಯಿತು.
ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಅಂತರಬೈಲು ಪಾದೆಮೇಲಿನಲ್ಲಿ ನವೆಂಬರ್ 25ರಂದು ಭೂಮಿ ಪೂಜೆ ನೆರವೇರಿಸಲಾಯಿತು. ಶ್ರೀನಿರಂಜನಿ ಮಾಯಾಪುರಿ ಹರಿದ್ವಾರ್‌ನ ಪಂಚಾಯಿತಿ ಅಖಾಡದ ನಾಗಸಾಧು ತಪೋನಿಧಿ ಬಾಬಾ ಶ್ರೀ ವಿಠ್ಠಲ್ ಗಿರಿ ಜಿ ಮಹಾರಾಜ್ ಅವರು ಭೂಮಿ ಪೂಜೆ ನೆರವೇರಿಸಿದರು.
‘ವೀರ ಕೇಸರಿ’ ಬಳಗದ ಯುವಕರೇ ಖರ್ಚಿನ ಹಣ ಪೇರಿಸಿ ಈ ಯೋಜನೆ ಸಾಕಾರಗೊಳಿಸುತ್ತಿರುವ ಮೂಲಕ ನಾಡಿಗೆ ಶಕ್ತಿಯಾಗಿ ಗುರುತಾಗಿದ್ದಾರೆ.
ಇದರ ಜೊತೆಯಲ್ಲೇ ಅನಾರೋಗ್ಯದಿಂದ ಬಳಲುತ್ತಿರುವ ಎರಡು ಕುಟುಂಬಗಳ ಸದಸ್ಯರಿಗೆ ನೆರವನ್ನು ನೀಡಲಾಯಿತು. ಸ್ವಾಮೀಜಿ ಮತ್ತು ಗಣ್ಯರ ಸಮ್ಮುಖದಲ್ಲಿ ವೀರಕೇಸರಿ ತಂಡದ ಸದಸ್ಯರು ಹಸ್ತಾಂತರಿಸಿ ಮೆಚ್ಚುಗೆಗೆ ಪಾತ್ರರಾದರು.
ಲಕ್ಷ್ಮೀ ಗ್ರೂಪ್ ಉಜಿರೆ ಇದರ ಮಾಲೀಕರು ಹಾಗೂ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್(ರಿ) ಉಜಿರೆ ಇದರ ಸ್ಥಾಪಕಾಧ್ಯಕ್ಷರಾದ ಮೋಹನ್ ಕುಮಾರ್, ಮಾಜಿ ಸೈನಿಕರಾದ ವೆಂಕಟರಮಣ ಶಮಾ೯ ಗುರುವಾಯನಕೆರೆ, ಭಾರತೀಯ ಭೊ ಸೇನೆ ವೀರ ಯೋಧ ಥೋಮಸ್ ಫಿಲಿಪ್, ಹಿಂದೂ ಜಾಗರಣ ವೇದಿಕೆ ಮಂಗಳೂರು ಮಹಾನಗರ ಸಹ ಸಂಯೋಜಕ ಗಣೇಶ್ ಕುಲಾಲ್ ಕೆದಿಲ, ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರ ಕೃಷ್ಣಮೂತಿ೯ ಮಧುಗಿರಿ, ಆಮಂತ್ರಣ ಪರಿವಾರ ಸ್ಥಾಪಕಧ್ಯಕ್ಷ ವಿಜಯ ಕುಮಾರ್ ಜೈನ್, ರಾಷ್ಟ್ರೀಯ ತುಳು ಗುಡಿಗಾರ ಸಂಘದ ಸಂಚಾಲಕ ಹರ್ಷೇಂದ್ರ ಗುಡಿಗಾರ್, ರಾಷ್ಟ್ರೀಯ ತುಳು ಗುಡಿಗಾರ ಸಂಘದ ಅಧ್ಯಕ್ಷ ರವೀಂದ್ರ ಗುಡಿಗಾರ್, ರಾಷ್ಟ್ರೀಯ ತುಳು ಗುಡಿಗಾರ ಸಂಘದ ಗೌರವಾಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲಾ, ಉಪಾಧ್ಯಕ್ಷರಾದ ಪೂರ್ಣಿಮಾ, ಸಮಾಜ ಸೇವಕ ಪ್ರಭಾಕರ್ ಸಿ.ಜಿ. ಕನ್ಯಾಡಿ, ವೀರಕೇಸರಿ ಬೆಳ್ತಂಗಡಿ ಇದರ ಸಂಚಾಲಕ ಸತೀಶ್ ಶೆಟ್ಟಿ ಹಾಗೂ ತಂಡದ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.