ರಸ್ತೆ ಗುಂಡಿ, ಕಸ ಅವಾಂತರ; ಸರ್ಕಾರಕ್ಕೆ ಮುಜುಗರ ತಂದ ಬಿಜೆಪಿ ಅಭಿಯಾನ

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಗುಂಡಿ ಬಿದ್ದ ರಸ್ತೆಗಳು ಮತ್ತು ಕಸ ವಿಲೇವಾರಿಯಾಗದೇ ಇರುವುದು ಕಾಂಗ್ರೆಸ್ ಸರ್ಕಾರ ವೈಫಲ್ಯ ಖಂಡಿಸಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಪಕ್ಷದ ವತಿಯಿಂದ ಜನಜಾಗೃತಿ ಅಭಿಯಾನ ನಡೆಯಿತು.

ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್, ಬಿಜೆಪಿ ಉತ್ತರ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗುಂಡಿ ಬಿದ್ದ ರಸ್ತೆಗಳು ಹಾಗೂ ಕಸ ರಾಶಿಗಳು ಬಿದ್ದಿರುವ ಸ್ಥಳಕ್ಕೆ ವೀಕ್ಷಣೆ ಮಾಡಿದರು.

ಇದೇ ಸಂದರ್ಭದಲ್ಲಿ ಆರ್.ಅಶೋಕ್ ರವರು ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಗುಂಡಿಗಳ ಸರ್ಕಾರ, ಗುಂಡಿಗಳ ಕ್ಯಾಬಿನೇಟ್ ಆಗಿದೆ ಎಂದರು. ಎರಡುವರೆ ವರ್ಷಗಳಿಂದ ಯಾವುದೇ ಅಭವೃದ್ದಿ ಕೆಲಸವಾಗಿಲ್ಲ ಗ್ಯಾರೆಂಟಿ, ಗ್ಯಾರೆಂಟಿ ಎಂದು ಹೇಳುತ್ತಿದ್ದಾರೆ. ಗುಂಡಿ ಮುಚ್ಚಲು 1800ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳುತ್ತಾರೆ ಎಲ್ಲಿ ಗುಂಡಿ ಮುಚ್ಚಿದ್ದಾರೆ.ಗುಂಡಿ ಬಿದ್ದ ಸರ್ಕಾರ, ಗುಂಡಿ ಮುಚ್ಚಲು ಹಣವಿಲ್ಲ ಇವರ ಬಳಿ.
ಗುಂಡಿಗಳಿಂದ 12ಜನ ಸತ್ತಿದ್ದಾರೆ ಅವರ ಕುಟುಂಬ ಶಾಪ ತಟ್ಟುತ್ತದೆ ಎಂದರು. 

ಸಾವಿರಾರು ಕೋಟಿ ರೂಪಾಯಿ ತೆರಿಗೆ ಹಣ ಉತ್ತಮ ರಸ್ತೆ ಮಾಡಲ್ಲಿಲ ಜನರ ಪಾಲಿಗೆ ಕಾಂಗ್ರೆಸ್ ಸತ್ತಿದೆ ಎಂದ ಅಶೋಕ್, ಬೆಂಗಳೂರುನಗರಕ್ಕೆ ಬಿಜೆಪಿ ಕೊಡುಗೆ ಏನು ಎಂಬುದು ಶ್ವೇತಪತ್ರ ಹೊರಡಿಸುತ್ತೇವೆ ಎಂದರು.

ಗುಂಡಿ ಮುಚ್ಚುವ ವಿಷಯ ಮುಖ್ಯಮಂತ್ರಿಯಾವರಿಗೆ ಹೇಳಿದರೆ ಉಪಮುಖ್ಯಮಂತ್ರಿಯವರನ್ನು ಹೇಳಿ ಎಂದು ಹೇಳುತ್ತಾರೆ. ಜವಾಬ್ದಾರಿ ಇಲ್ಲದ ಸರ್ಕಾರವಾಗಿದೆ ಎಂದು ಟೀಕಿಸಿದ ಅಶೋಕ್, ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ, ನಗರದ ತುಂಬ ಕಸದ ರಾಶಿ ತುಂಬಿದೆ. ಬಿಜೆಪಿ ಆಡಳಿತದಲ್ಲಿ ಕಸಕ್ಕೆ 120ರೂಪಾಯಿ ಸಂಗ್ರಹ ಮಾಡಲಾಗುತ್ತಿತು. ಕಾಂಗ್ರೆಸ್ ಸರ್ಕಾರ 700ರೂಪಾಯಿ ಕಸ ಸಂಗ್ರಹಕ್ಕೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ಗಾರ್ಬೇಜ್ ಸಿಟಿ ಎಂದು ಇಂದು ವಿಶ್ವಕ್ಕೆ ಪ್ರಚಲಿತವಾಗಿದೆ. ಕಾಂಗ್ರೆಸ್ ಸರ್ಕಾರ ಕುಂಬಕರ್ಣನಂತೆ ನಿದ್ರೆ ಮಾಡುತ್ತಿದೆ , ಪಾಪರ್ ಸರ್ಕಾರವಾಗಿದೆ ಎಂದರು.

Related posts