ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರವನ್ನು ಮತ್ತೆ ಪರಿಷ್ಕರಿಸಲಾಗಿದೆ. ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ‘ನಮ್ಮ ಮೆಟ್ರೋ’ ಪ್ರಯಾಣ ದರವನ್ನು ಸ್ವಲ್ಪ ಮಟ್ಟಿಗೆ ಇಳಿಕೆ ಮಾಡಿದೆ.
ಟಿಕೆಟ್ ದರ ಏರಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿನ ಆಕ್ರೋಶ ಹಿನ್ನೆಲೆಯಲ್ಲಿ ದರ ಇಳಿಸುವಂತೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿರುವ ಬಿಎಂಆರ್ಸಿಎಲ್, ಶೇ 90 ರಿಂದ 100 ರಷ್ಟು ದರ ಹೆಚ್ಚಳ ಮಾಡಿರುವ ನಿಲ್ದಾಣಗಳ ಮಧ್ಯೆ ತಲಾ 10 ರೂಪಾಯಿಗಳಷ್ಟು ಇಳಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ದರ ಹೀಗಿದೆ:
ಮೆಜೆಸ್ಟಿಕ್ನಿಂದ ವೈಟ್ಫಿಲ್ಡ್ಗೆ ಹಳೆಯ ದರ 90 ರೂ. ಹೊಸ ದರ 80 ರೂ.
ಮೆಜೆಸ್ಟಿಕ್ನಿಂದ ಚಲ್ಲಘಟ್ಟಕ್ಕೆ ಹಳೆಯ 70 ರೂ. ಹೊಸ ದರ 60 ರೂ.
ಮೆಜೆಸ್ಟಿಕ್ನಿಂದ ವಿಧಾನಸೌಧಕ್ಕೆ ಹಳೆಯ 20 ರೂ. ಹೊಸ ದರ 10 ರೂ.
ಮೆಜೆಸ್ಟಿಕ್ನಿಂದ ಬೈಯಪ್ಪನಹಳ್ಳಿಗೆ ಹಳೆಯ 60 ಹೊಸ ದರ 50 ರೂ.
ಮೆಜೆಸ್ಟಿಕ್ನಿಂದ ರೇಷ್ಮೆ ಸಂಸ್ಥೆಗೆ ಹಳೆಯ 70 ರೂ. ದರ ಈಗ 60 ರೂ.
ಇದೇ ವೇಳೆ, ಕನಿಷ್ಠ, ಗರಿಷ್ಠ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.