ತುಳು ಸಿನಿಮಾದಲ್ಲಿ ಬಾಲಿವುಡ್ ತಾರೆ; ರೂಪೇಶ್ ಶೆಟ್ಟಿ ಜೊತೆ ಕೈಜೋಡಿಸಿದ ಸುನೀಲ್ ಶೆಟ್ಟಿ

ತುಳುನಾಡು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಂಗಳೂರು ಮೂಲದ ಅವರು ತುಳು ಭಾಷೆಯ ಸಿನಿಮಾದಲ್ಲಿ ನಟಿಸಲಿದ್ದಾರೆ.
ರೂಪೇಶ್ ಶೆಟ್ಟಿ ಜೊತೆ ಸಿನಿಮಾವೊಂದರಲ್ಲಿ ಕೈ ಜೋಡಿಸಿದ್ದಾರೆ.

ರೂಪೇಶ್ ಶೆಟ್ಟಿ ಅವರು ಇತ್ತೀಚೆಗೆ ‘ಜೈ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಲಿದ್ದಾರೆ. ಈ ಬಗ್ಗೆ ರೂಪೇಶ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಗಮನಸೆಳೆದಿದೆ.

Related posts