ಮುಂಬೈ: ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಜನರಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಉದ್ಧವ್ ಠಾಕ್ರೆ, ಬಹುಸಂಖ್ಯೆಯಲ್ಲಿ ಮರಾಠಿ ಸಂಸ್ಕೃತಿ ಹೊಂದಿರುವ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಬೆಳಗಾವಿ ಗಡಿ ವಿವಾದವನ್ನು ಕೆದಕಿ ಕನ್ನಡ ಪರ ಸಂಘಟನೆಗಳ ನಾಯರ ಆಕ್ರೋಶಕ್ಕೆ ಗುರಿಯಲಿದ್ದಾರೆ.
ಮಹಾರಾಷ್ಟ್ರ ಏಕೀಕರಣಕ್ಕಾಗಿ ಹೋರಾಡಿದವರ ಗೌರವಾರ್ಥಕವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿವರ್ಷ ಜನವರಿ 17 ರಂದು ಆಚರಿಸುವ ಹುತಾತ್ಮರ ದಿನ ಪ್ರಮುಕ್ತ ಉದ್ಧವ್ ಠಾಕ್ರೆ ಈ ಟ್ವೀಟ್ ಮಾಡಿದ್ದಾರೆ.
कर्नाटकव्याप्त मराठी भाषिक आणि सांस्कृतिक प्रदेश महाराष्ट्रात आणणे हीच या सीमा लढ्यात हौतात्म्य पत्करलेल्या सैनिकांना आदरांजली ठरणार आहे. त्यासाठी आम्ही एकजूट आणि कटिबद्ध आहोत. या अभिवचनासह हूतात्म्यांना विनम्र अभिवादन🙏🏼
— CMO Maharashtra (@CMOMaharashtra) January 17, 2021