ಬೆಂಗಳೂರು ‘ಕಂಬಳ’ದಲ್ಲಿ ಪದಕ ಗೆದ್ದಿದ್ದು ಪುತ್ತೂರಿನ ಕೋಣಗಳು; ನಾಯಕನಾಗಿ ಮಿಂಚಿದ್ದು ‘ಜೈ ತುಳುನಾಡು’ ಕಿಶೋರ್ ಭಂಡಾರಿ

ಮಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ‘ಕಂಬಳ’ ಇಡೀ ದೇಶದ ಗಮನಸೆಳೆಯಿತು. ತುಳುನಾಡಿಗೆ ಸೀಮಿತ ಎಂಬಂತಿದ್ದ ‘ಕಂಬಳ’ವು ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನದ ಫಲವಾಗಿ ರಾಜ್ಯ ರಾಜಧಾನಿಯಲ್ಲೂ ಕಲರವ ಸೃಷ್ಟಿಸಿ ‘ಮಹಾಹಬ್ಬ’ವಾಗಿ ಕುತೂಹಲದ ಕೇಂದ್ರಬಿಂದುವಾಯಿತು. ಪದಕ ಗೆದ್ದ ಕೋಣಗಳು ತವರಿಗೆ ತಲುಪಿದಾಗ ಕಂಡುಬಂದ ಉತ್ಸಾಹ ಕೂಡಾ ಚಾರಿತ್ರಿಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಬೆಂಗಳೂರು ಕಂಬಳದಲ್ಲಿ 200ಕ್ಕೂ ಹೆಚ್ಚು ದೈತ್ಯ ಕೋಣಗಳು ಭಾಗವಹಿಸಿ ರೋಚಕತೆ ತುಂಬಿದ್ದವು. ಎಲ್ಲಾ ಕಂಬಳ ಕೋಣಗಳ ತಂಡಗಳ ಸೆಣಸಾಟದಲ್ಲಿ ಪದಕವನ್ನು ಬಾಚಿರುವ ಬೊಟ್ಯಾಡಿ ಕಿಶೋರ್ ಭಂಡಾರಿ ಮುಂದಾಳುತ್ವದ ಯುವಕರ ಪಡೆಯಾದ ‘ಜೈ ತುಳುನಾಡು ಪುತ್ತೂರು’ ತಂಡದ ಕೋಣಗಳು ಚಿನ್ನದ ಪುರಸ್ಕಾರದೊಂದಿಗೆ ಗೆದ್ದು ಬೀಗಿದೆ. ನೇಗಿಲು ಕಿರಿಯ (ಜೂನಿಯರ್) ವಿಭಾಗದಲ್ಲಿ ಕಿಶೋರ್ ಭಂಡಾರಿ ಅವರ ಕೋಣಗಳು ಚಿನ್ನದ ಪದಕ ಹಾಗೂ 50,000 ರೂಪಾಯಿ ಜಯಿಸಿ ತುಳುನಾಡಿನ ಜನರ ಹರ್ಷವನ್ನು ಮುಗಿಲೆತ್ತರ ರಾಚುವಂತೆ ಮಾಡಿವೆ.  …

ದೊಡ್ಡಬಳ್ಳಾಪುರದಲ್ಲಿ ಪುರಸಭೆ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ; ರಸ್ತೆ ಬದಿ ಅಂಗಡಿಗಳ ತೆರವು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಗರಸಭೆ ಮತ್ತು ನಗರ ಠಾಣಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು, ರಸ್ತೆ ಬದಿಯ ಅಂಗಡಿಗಳನ್ನು ತೆರವು ಮಾಡಿದ್ದಾರೆ. ದೊಡ್ಡಬಳ್ಳಾಪುರ ಜಿ.ರಾಮೇಗೌಡ ವೃತ್ತದ ಬಳಿ ನಗರಸಭೆಯ ಪರಿಸರ ವಿಭಾಗದ ಎಇಇ ಈರಣ್ಣ, ನಗರ ಠಾಣಾ ಇನ್ಸ್ಪೆಕ್ಟರ್ ಎ.ಅಮರೇಶ್ ಗೌಡ ನೇತೃತ್ವದಲ್ಲಿ ಬುಧವಾರ ಬೀದಿಬದಿ ಅಂಗಡಿಗಳ ತೆರವು ಮಾಡಲಾಯಿತು. ಹೈಕೋರ್ಟ್ ಆದೇಶದಂತೆ ರಸ್ತೆ ಬದಿಗಳಲ್ಲಿನ ಅನಧಿಕೃತ ಅಂಗಡಿಗಳನ್ನು ಕಡ್ಡಾಯವಾಗಿ ತೆರವು ಮಾಡಲಾಗುತ್ತಿದೆ. ಎರಡು ತಿಂಗಳ ಹಿಂದೆಯೂ ತೆರವು ಕಾರ್ಯಾಚರಣೆ ಮಾಡಿದ್ದೇವು. ಬೀದಿಬದಿ ವ್ಯಾಪಾರಿಗಳಿಗೆ ಈ ವೇಳೆ ಪರ್ಯಾಯ ವ್ಯವಸ್ಥೆಯ ಬಗ್ಗೆಯೂ ಮನವರಿಕೆ ಮಾಡಲಾಗಿತ್ತು. ಇದೀಗ ಪರ್ಯಾಯ ಸ್ಥಳವನ್ನು ವಿನಾಯಕನಗರ, ಬಸವಣ್ಣ ದೇಗುಲ ಬಳಿ ಸ್ಥಳವನ್ನು ಗುರುತಿಸಿ ನೀಡಿದ್ದೇವೆ ಎಂದು ನಗರಸಭೆ ಪರಿಸರ ವಿಭಾಗದ ಎಇಇ ಈರಣ್ಣ ತಿಳಿಸಿದ್ದಾರೆ. ವಿನಾಯಕನಗರದಲ್ಲಿ ಪರ್ಯಾಯ ವ್ಯವಸ್ಥೆ: ಬೀದಿ ಬದಿಯಲ್ಲಿನ ವ್ಯಾಪಾರಿಗಳನ್ನು ಏಕಾಏಕಿ ತೆರವು ಕಾರ್ಯಾಚರಣೆಯಿಂದಾಗಿ ವ್ಯಾಪಾರಿಗಳು ಅತಂತ್ರರಾಗಿದ್ದಾರೆ…

ಡಿಕೆಶಿ ವಿರುದ್ದದ ಸಿಬಿಐ ತನಿಖೆಯ ಆದೇಶ ವಾಪಾಸ್; ಸರ್ಕಾರದ ತೀರ್ಮಾನ ಎತ್ತಿ ಹಿಡಿದ ಹೈಕೋರ್ಟ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಬಿಐ ತನಿಖೆಯ ವಿಚಾರದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಕೆಲವು ದಿನಗಳ ಹಿಂದಷ್ಟೇ ಹಿಂದಿನ ಸರ್ಕಾರ ಸಿಬಿಐ ತನಿಖೆಗೆ ವಹಿಸಲಾಗಿದ್ದ ತನಿಖೆಯನ್ನು ಸಿದ್ದರಾಮಯ್ಯ ಸಂಪುಟ ಹಿಂಪಡೆಯುವ ತೀರ್ಮಾನ ಕೈಗೊಂಡಿತ್ತು. ಆ ತೀರ್ಮಾನವನ್ನು ಹೈಕೋರ್ಟ್ ಒಪ್ಪಿಕೊಂಡಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣ ವಿಚಾರಣೆಯನ್ನು ಬುಧವಾರ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನೇತೃತ್ವದ ವಿಭಾಗೀಯ ಪೀಠ ಬುಧವಾರ ಕೈಗೆತ್ತಿಕೊಂಡಿತು. ರಾಜ್ಯ ಸರ್ಕಾರದ ಆದೇಶವನ್ನು ಇದುವರೆಗೂ ಯಾರೂ ಪ್ರಶ್ನೆ ಮಾಡಿಲ್ಲ. ಹೀಗಾಗಿ ಸಿಬಿಐ ವಾದ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಜೊತೆಗೆ, ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ ಎತ್ತಿ ಹಿಡಿಯಿತು.

ಸಚಿವ ಕೃಷ್ಣಭೈರೇಗೌಡ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ಆಕ್ರೋಶ; ಬೆಳಗಾವಿ ಅಧಿವೇಶನದಲ್ಲೂ ಭಾಗಿಯಾಗುವುದಿಲ್ಲ ಎಂದು ಪುನರುಚ್ಚಾರ

ಕಲಬುರಗಿ: ಸಚಿವ ಕೃಷ್ಣಭೈರೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಳಂದ ಶಾಸಕ ಬಿ.ಆರ್.ಪಾಟೀಲ್ ತಾವು ರಾಜೀನಾಮೆ ನಿರ್ಧಾರ ಪ್ರಕಟಿಸಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಸಿಎಂ ಗೆ ಬರೆದಿರುವ ಪತ್ರದ ಬಗ್ಗೆ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ.ಆರ್.ಪಾಟೀಲ್, ಸಚಿವ ಕೃಷ್ಣಭೈರೇಗೌಡ ವಿರುದ್ಧಅಸಮಾಧಾನ ಹೊರಹಾಕಿದರು. ಸಚಿವರು ನನ್ನ ವಿರುದ್ಧ ಆರೋಪದ ರೀತಿ ಮಾತನಾಡಿದ್ದಾರೆ. ಈ ಆರೋಪದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ತನಿಖೆ ಮುಗಿಯುವರೆಗೂ ಸದನಕ್ಕೆ ಹೋಗುವುದಿಲ್ಲ ಎಂದ ಅವರು, ಬೆಳಗಾವಿ ಅಧಿವೇಶನದಲ್ಲೂ ಭಾಗಿಯಾಗುವುದಿಲ್ಲ ಎಂದು ಪುನರುಚ್ಚರಿಸಿದರು.

ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ‘ಕಾಂತಾರ’ಕ್ಜೆ ತೀರ್ಪುಗಾರರ ವಿಶೇಷ ಪ್ರಶಸ್ತಿ

ಭಾರತೀಯ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದಿರುವ ‘ಕಾಂತಾರ’ ಚಿತ್ರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆ ಗಳಿಸಿದೆ‌. ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿ ಅಥವಾ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ‘ಕಾಂತಾರ’ ಪಾತ್ರವಾಗಿದೆ. ಕಾಂತಾರ’ ಸಿನಿಮಾದಲ್ಲಿ ಅದ್ಭುತ ನಟನೆಗೆ ಹಾಗೂ ಅದ್ಭುತವಾಗಿ ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗಿದೆ. Earning a mention from the Jury is always significant, and this year the brilliant @shetty_rishab has claimed the honour!🏆🎬🎉 📽️Indian Actor @shetty_rishab takes home the 'Special Jury Award' at #IFFI54 for his captivating performance and masterful storytelling…

ಕಮೀಷನ್: 3ನೇ ಕಂತಿಗಾಗಿ ಸುರ್ಜೇವಾಲ ಮತ್ತೆ ಬಂದರೇ..?

ಬೆಂಗಳೂರು: ಇವತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು; 2ನೇ ಕಂತು ಬಂತು. 3ನೇ ಕಂತು ಬೇಕು; 3ನೇ ಕಂತಿನಲ್ಲಿ ಚೌಕಾಸಿ ಆಗಬಾರದೆಂದು 3ನೇ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನಗಳಲ್ಲಿ ಎಂದು ಟೀಕಿಸಿದರು. ತೆಲಂಗಾಣ ಚುನಾವಣಾ ಉಸ್ತುವಾರಿಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿಗೇ ನೀಡಿದ್ದಾರೆ. ಹಾಗಾಗಿ 3ನೇ ಕಂತಿಗಾಗಿ ಬಂದಂತಿದೆ ಎಂದು ತಿಳಿಸಿದರು. ಕರ್ನಾಟಕ ಇನ್ನೆಷ್ಟು ಕಂತು ಕೊಡಬೇಕೋ? ಎಂದು ಕೇಳಿದ ಅವರು, ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡುವ ಬಗ್ಗೆ ನಾವು ಮುಂಚೆಯೇ ತಿಳಿಸಿದ್ದೆವು. ಕಾಂಗ್ರೆಸ್ ಗೆಲ್ಲಿಸಬೇಡಿ…

“ತೆರಿಗೆ ಹಣ ಕರುನಾಡಿನವರದ್ದು, ಕೊಡುಗೆ ತೆಲಂಗಾಣದ ಕಾಂಗ್ರೆಸ್ಸಿಗೆ? ಸಿದ್ದು ಸರ್ಕಾರದ ನಡೆಗೆ ಆಕ್ರೋಶ

ಬೆಂಗಳೂರು: ತೆರಿಗೆ ಹಣ ಕರುನಾಡಿನವರದ್ದು, ಕೊಡುಗೆ ತೆಲಂಗಾಣದ ಕಾಂಗ್ರೆಸ್ಸಿಗೆ? ಇದು ಸಿದ್ದರಾಮಯ್ಯ ಸರ್ಕಾರದ ನಡೆ ಎಂಬಂತಿದೆ. ಚುನಾವಣೆ ನಡೆಯುತ್ತಿರುವ ತೆಲಂಗಾಣ ಜನರ ಮೇಲೆ ಕರ್ನಾಟಕದ ಸಾಧನೆಯನ್ನು ತೋರಿಸುವ ಜಾಹೀರಾತು ಮೂಲಕ ಪ್ರಭಾವ ಬೀರುವ ಪ್ರಯತ್ನ ಕಾಂಗ್ರೆಸ್ ಪಕ್ಷದಿಂದ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ನವೆಂಬರ್ 30 ರಂದು ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿನ ಪತ್ರಿಕೆಗಳಲ್ಲಿ ‘ಗ್ಯಾರಂಟಿ’ ಕುರಿತು ಜಾಹಿರಾತು ಪ್ರಕಟಿಸಲಾಗುತ್ತಿದೆ. ಈ ಜಾಹೀರಾತು ಮೂಲಕ ಕಾಂಗ್ರೆಸ್ ಪಕ್ಷ ಪರೋಕ್ಷ ಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪದ ಬೆನ್ನಲ್ಲೇ ಚುನಾವಣಾ ಆಯೋಗ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ನೊಟೀಸ್ ನೀಡಿದೆ. ತೆಲಂಗಾಣದ ಪತ್ರಿಕೆಗಳಿಗೆ ಜಾಹೀರಾತು ನೀಡುವುದನ್ನು ನಿಲ್ಲಿಸುವಂತೆ ಆಯೋಗ ಸೂಚಿಸಿದೆ. ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯದ ಬಗ್ಗೆ ವಿವರಣೆಯನ್ನೂ ಕೇಳಿದೆ. ಬಿಜೆಪಿ ಆಕ್ರೋಶ.. ತೆಲಂಗಾಣ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಸಿದ್ದರಾಮಯ್ಯ ಸರ್ಕಾರದ ಕ್ರಮದ ಬಗ್ಗೆ…

‘ಗೃಹಲಕ್ಷ್ಮಿ’: 1 ಕೋಟಿ 17 ಲಕ್ಷ ಯಜಮಾನಿಯರಿಂದ ನೋಂದಣಿ

ಬೆಂಗಳೂರು: ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಗೃಹಲಕ್ಷ್ಮೀ ಯೋಜನೆಯು ದೇಶದಲ್ಲಿ, ಅಥವಾ ವಿಶ್ವದಲ್ಲಿ ಜಾರಿಯಾದ ಅತಿ ವಿಶಿಷ್ಟ ಹಾಗೂ ಜನಪ್ರಿಯ ಯೋಜನೆಯಾಗಿದೆ. ಇದುವರೆಗೆ ರಾಜ್ಯಾದ್ಯಂತ 1 ಕೋಟಿ 17 ಲಕ್ಷ ಯಜಮಾನಿಯರು ಗೃಹಲಕ್ಷ್ಮಿ ಯೋಜನೆ ಮೂಲಕ ಹಣ ಪಡೆಯಲು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಒದಗಿಸಿರುವ ಅವರು, ಗೃಹಲಕ್ಷ್ಮಿ ಯೋಜನೆಗಾಗಿ ಹೆಸರು ನೋಂದಾಯಿಸಿರುವವರ ಪೈಕಿ 1 ಕೋಟಿ 10 ಲಕ್ಷ ಯಜಮಾನಿಯರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಯೋಜನೆಗಾಗಿ ನಮ್ಮ ಸರ್ಕಾರ 11,200 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಪ್ರತಿ ತಿಂಗಳು ಸುಮಾರು 2,100 ಕೋಟಿ ರೂ.ಗಳನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದುವರೆಗೆ ಸುಮಾರು 6 ಸಾವಿರ ಕೋಟಿ ರೂಪಾಯಿ ಜಮಾ ಆಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್…

ತಾಯಿ ಚಾಮುಂಡೇಶ್ವರಿಗೆ 5 ವರ್ಷಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ

ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ ಭರ್ತಿ ಐದು ವರ್ಷಗಳ ಕಂತನ್ನು ಶಾಸಕ ದಿನೇಶ್ ಗೂಳಿಗೌಡ ಅವರು ತಾಯಿ ಚಾಮುಂಡೇಶ್ವರಿಗೆ ಸಮರ್ಪಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪರವಾಗಿ ಶಾಸಕ ದಿನೇಶ್ ಗೂಳಿಗೌಡ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ಹಣವನ್ನು ಅರ್ಪಿಸುವ ಮೂಲಕ ಸರ್ಕಾರದ ಹರಕೆ ತೀರಿಸಿದರು. ಪ್ರತಿ ತಿಂಗಳಿಗೆ 2 ಸಾವಿರ ರೂ.ನಂತೆ 59 ತಿಂಗಳ ಕಂತಿನ ಹಣ ಒಟ್ಟು 1.18 ಲಕ್ಷ ರೂ.ಗಳನ್ನು ಸಚಿವೆ ಹೆಬ್ಬಾಳ್ಕರ್ ವೈಯಕ್ತಿಕವಾಗಿ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಸಭಾ ಚುನಾವಣೆಗೂ ಪೂರ್ವ ಮೇ 9 ರಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ದಿನೇಶ್ ಗೂಳಿಗೌಡ ಹಾಗೂ ಇತರ ಕಾಂಗ್ರೆಸ್ ನಾಯಕರು ಚಾಮುಂಡಿ ದೇವಿ ಸನ್ನಿಧಿಯಲ್ಲಿ…