ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ‘ಕಾಂತಾರ’ಕ್ಜೆ ತೀರ್ಪುಗಾರರ ವಿಶೇಷ ಪ್ರಶಸ್ತಿ

ಭಾರತೀಯ ಚಿತ್ರರಂಗದಲ್ಲಿ ದಾಖಲೆಗಳನ್ನು ಬರೆದಿರುವ ‘ಕಾಂತಾರ’ ಚಿತ್ರ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆ ಗಳಿಸಿದೆ‌. ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದೆ. ತೀರ್ಪುಗಾರರ ವಿಶೇಷ ಪ್ರಶಸ್ತಿ ಅಥವಾ ‘ಸಿಲ್ವರ್ ಪೀಕಾಕ್’ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿಗೆ ‘ಕಾಂತಾರ’ ಪಾತ್ರವಾಗಿದೆ. ಕಾಂತಾರ’ ಸಿನಿಮಾದಲ್ಲಿ ಅದ್ಭುತ ನಟನೆಗೆ ಹಾಗೂ ಅದ್ಭುತವಾಗಿ ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗಿದೆ. Earning a mention from the Jury is always significant, and this year the brilliant @shetty_rishab has claimed the honour!🏆🎬🎉 📽️Indian Actor @shetty_rishab takes home the 'Special Jury Award' at #IFFI54 for his captivating performance and masterful storytelling…

ಕುತೂಹಲ ಹೆಚ್ಚಿಸಿದ ‘ಕಾಂತಾರ ಚಾಪ್ಟರ್-1″; ಒಂದೆಡೆ ಮೂಹೂರ್ತ, ಇನ್ನೊಂದೆಡೆ ಟೀಸರ್ ಬಿಡುಗಡೆ.‌

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವ ‘ಕಾಂತಾರ’ ಸಿನಿಮಾದ ಎರಡನೇ ಆವೃತ್ತಿ ಸ್ಯದಲ್ಲೇ ಬರಲಿದೆ. ನಿರೀಕ್ಷೆಯಂತೆಯೇ ಮುಂದೆ ಬರುತ್ತಿರುವುದು ‘ಕಾಂತಾರ ಚಾಪ್ಟರ್ 1″. ಈ ಕುರಿತಂತೆ ಹೊಂಬಾಳೆ ಫಿಲಮ್ಸ್ ಮಾಹಿತಿ ಹಂಚಿಕೊಂಡಿದೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಪ್ರೀಕ್ವೆಲ್‌ ಅಂದರೆ ಎರಡನೇ ಭಾಗದ ಫಸ್ಟ್‌ ಲುಕ್‌ ಹಾಗೂ ಟೀಸರ್ ಸೋಮವಾರ ಬಿಡುಗಡೆಯಾಗಿದೆ. ಈ ಹೊಸ ಸಿನಿಮಾದ ಮುಹೂರ್ತ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಇಂದು (ಸೋಮವಾರ) ಬೆಳಿಗ್ಗೆ ನೆರವೇರಿದೆ. ಇದೇ ವೇಳೆ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಟೀಸರ್ ಬಿಡುಗಡೆಯಾಗಿದೆ. ಕಾಂತಾರದ ವಿಸ್ಮಯಗಳ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ, ಮೊದಲ ಅಧ್ಯಾಯದ ಫಸ್ಟ್ ಲುಕ್ ಇಲ್ಲಿದೆ. ಈ ಹೊಸ ಪಯಣಕ್ಕೆ ನಿಮ್ಮ ಹಾರೈಕೆಗಳಿರಲಿ.https://t.co/QqpFVkmRTR@hombalefilms @KantaraFilm @VKiragandur @AJANEESHB pic.twitter.com/RHkQTevhWP — Rishab Shetty (@shetty_rishab) November 27, 2023 ಕನ್ನಡ, ಇಂಗ್ಲಿಷ್,…

ಮಲಯಾಳಂ ನಟ ವಿನೋದ್ ಥಾಮಸ್ ಶವವಾಗಿ ಪತ್ತೆ

ಕೊಟ್ಟಾಯಂ: ಕೇರಳದ ಜನಪ್ರಿಯ ನಟ ವಿನೋದ್ ಥಾಮಸ್ ಶವವಾಗಿ ಪತ್ತೆಯಾಗಿದ್ದಾರೆ. ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ ನಿಲ್ಲಿಸದ್ದ ಕಾರಿನೊಳಗೆ 45 ವರ್ಷದ ವಿನೋದ್ ಥಾಮಸ್ ಶವ ಶನಿವಾರ ಪತ್ತೆಯಾಗಿದೆ ಹೋಟೆಲ್‌ ಆವರಣದಲ್ಲಿ ಹಲವು ದಿನಗಳಿಂದ ನಿಂತಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬ ಇರುವುದಾಗಿ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ನಟ ವಿನೋದ್ ಥಾಮಸ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ‘ನಾಥೋಲಿ ಒರು ಚೆರಿಯ ಮೀನಲ್ಲಾ’, ‘ಅಯ್ಯಪ್ಪನುಮ್ ಕೊಶ್ಯುಮ್’, , ‘ಒರು ಮುರೈ ವಂತ್ ಪಾಠಯಾ’, ‘ಹ್ಯಾಪಿ ವೆಡ್ಡಿಂಗ್’ ಮತ್ತು ‘ಜೂನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿನೋದ್ ಥಾಮಸ್ ನಟಿಸಿದ್ದಾರೆ. ನಟ ವಿನೋದ್ ಥಾಮಸ್ ನಿಧಾನಕ್ಕೆ ಸಿನಿಮಾ ಕ್ಷೇತ್ರದ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.

ತಿಗಳಪೇಟೆಯಲ್ಲಿನ ನೈಜ ಘಟನೆಯೇ ‘ಕೈವ’: ಕನ್ನಡ ಸಿನಿ ಲೋಕದಲ್ಲಿ ಮತ್ತೊಂದು ಅಚ್ಚರಿ

1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ ತೆರೆಗೆ ಬರಲಿದೆ. ‘ಕೈವ’ ಹೆಸರಿನ ಈ ಚಿತ್ರದಲ್ಲಿ ಧನ್ವೀರ್ ನಟಿಸುತ್ತಿದ್ದಾರೆ. ‘ಕೈವ’ ಎಂಬುದು ಒಬ್ಬ ವ್ಯಕ್ತಿಯ ಹೆಸರು. ಬೆಂಗಳೂರು ಕರಗದಲ್ಲಿ ಸೃಷ್ಟಿಯಾದ ಪ್ರೇಮಪ್ರಸಂಗವೊಂದು ಕೋತೂಹಲಘಟ್ಟಕ್ಕೆ ತಲುಪಿ ನಿರ್ಣಾಯಕ ತಿರುವನ್ನು ಪಡೆಯುವ ನಡುವೆ ಅನೇಕಾನೇಕ ಅಚ್ಚರಿಯ ಪ್ರಸಂಗಗಳು ಘಟಿಸುತ್ತವೆ. ಈ ಸಿನಿಮಾದ ಬಹುತೇಕ ಸನ್ನಿವೇಶಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಗಂಗಾರಾಮ್ ಕಟ್ಡಡದ ದುರಂತಕ್ಕೂಈ ಚಿತ್ರದ ಕಥೆಗೂ ಸಂಬಂಧವಿದೆ ಎಂಬುದೂ ಮತ್ತೊಂದು ಅಚ್ಚರಿ. ಚಿತ್ರದ ನಾಯಕನಾಗಿ ಧನ್ವೀರ್, ನಾಯಕಿಯಾಗಿ ಮೇಘ ಶೆಟ್ಟಿ ಅಭಿನಯಿಸಿದ್ದು, ದಿನಕರ್ ತೂಗುದೀಪ್ ಕೂಡಾ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐವರು ನಿರ್ದೇಶಕರು ನಟನೆ ಕೂಡಾ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಡಿಸೆಂಬರ್ ನಲ್ಲಿ ‘ಕೈವ’ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ. ಈ ಸಿನಿಮಾದ ಟೀಸರನ್ನು ದೀಪಾವಳಿ ಸಂದರ್ಭದಲ್ಲಿ ಬಿಡುಗಡೆ…