ನಟ ಪ್ರಜ್ವಲ್ ದೇವರಾಜ್ ಅಭಿನಯದ39ನೇ ಚಿತ್ರಕ್ಕೆ ಮುಹೂರ್ತ ನಡೆದಿದೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸುತ್ತಿರುವ ‘ಚೀತಾ’ ಸಿನಿಮಾ ಸೆಟ್ಟೇರಿರುವ ಬಗ್ಗೆ ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನ HMT ಫ್ಯಾಕ್ಟರಿ ಆವರಣದಲ್ಲಿ ನಡೆದ “ಚೀತಾ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಕಲಾವಿದರು, ತಂತ್ರಜ್ಞರು ಹಾಜರಿದ್ದರು. ರಾಜಲಕ್ಷ್ಮೀ ಎಂಟರ್‌ಟೈನ್ಮೆಂಟ್’ ಬ್ಯಾನರಿನಲ್ಲಿ ಪ್ರತಿಭಾ ನರೇಶ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಶ್ರುತಿ ಹರಿಹರನ್, ಶಿವರಾಜ್ ಕೆ. ಆರ್. ಪೇಟೆ, ಗುರುರಾಜ್ ಜಗ್ಗೇಶ್, ಸಹಿತ ಅನೇಕ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆವ ‘ಚೀತಾ’ ನಾಯಕಿ ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಬಹಿರಂಗವಾಗಿಲ್ಲ.
Category: ಸಿನಿಮಾ
‘ಉಸಿರೇ ಉಸಿರೇ’ ಚಿತ್ರ: ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್
ನಟ ಪ್ರವೀಣ್ ತೇಜ್, ಪೂಜಾ ವಸಂತ್ ನಟನೆಯ ‘ಜಿಗರ್’ ಚಿತ್ರದ ಟೀಸರ್
‘ಬ್ಯಾಡ್ ಮ್ಯಾನರ್ಸ್’ ಡೈಲಾಗ್ ಪ್ರೋಮೋಗೆ ನೆಟ್ಟಿಗರಿಂದ ಸಕತ್ ಲೈಕ್ಸ್
ಅಭಿಷೇಕ್ ಅಂಬರೀಶ್ ಅಭಿನಯದ ಚಿತ್ರ ‘ಬ್ಯಾಡ್ ಮ್ಯಾನರ್ಸ್’ ಬಿಡುಗಡೆಗೆ ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆ ಹುಟ್ಟಿಸಿದೆ. ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ನವೆಂಬರ್ 24 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಚಿತ್ರತಂಡ ಇದೀಗ ಡೈಲಾಗ್ ಪ್ರೋಮೋ ಬಿಡುಗಡೆ ಮಾಡಿದೆ. ಈ ಪ್ರೊಮೋ ಬಗ್ಗೆ ನೆಟ್ಟಿಗರಿಂದ ಸಕತ್ ಲೈಕ್ಸ್ ಸಿಕ್ಕಿದೆ. If it's #Suri's direction and #Maasti's penned dialogues, get ready for some fiery lines! Here's an intense dialogue promo from the upvoming film, #BadManners * @AbishekAmbareesh#ಬ್ಯಾಡ್ಮ್ಯಾನರ್ಸ is set to hit the screens on #NOV24. 🔥🎬📅 #BadManners in 25 days @RachitaRamDQ… pic.twitter.com/OR6n6Oeh8p — A Sharadhaa (@sharadasrinidhi) October 31, 2023
‘ಚಿ.ತು. ಯುವಕರ ಸಂಘ’ ಹೊಸ ಹಾಸ್ಯ ಪ್ರಯತ್ನ
ಹಾಲಿವುಡ್ ಖ್ಯಾತ ನಟ ಥ್ಯೂ ಪೆರ್ರಿ ನಿಗೂಢ ಸಾವು
ಲಾಸ್ ಏಂಜಲೀಸ್ : ಹಾಲಿವುಡ್ ಖ್ಯಾತ ನಟ ಥ್ಯೂ ಪೆರ್ರಿ ವಿಧಿವಶರಾಗಿದ್ದಾರೆ. ಕಾಮಿಡಿ ಶೋ ಒಂದರಲ್ಲಿ ತನ್ನ ಚಾಂಡ್ಲರ್ ಬಿಂಗ್ ಪಾತ್ರದಿಂದ ಖ್ಯಾತರಾಗಿದ್ದ ಮ್ಯಾಥ್ಯೂ ಪೆರ್ರಿ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಲಾಸ್ ಏಂಜಲೀಸ್ನಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೃದಯಾಘಾತಕ್ಕೊಳಗಾಯಿರುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.
‘ನೆಲ್ಸನ್’ : ವಿನೋದ್ ಪ್ರಭಾಕರ್ ಕಮಾಲ್
‘ವಿಷ್ಣುಪ್ರಿಯ’ : ಶ್ರೇಯಸ್ ಮಂಜು- ಪ್ರಿಯಾ ವಾರಿಯರ್ ಕಾಂಬಿನೇಷನ್
‘ಅರ್ಜುನ್ ಚಕ್ರವರ್ತಿ: ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್’ ಚಿತ್ರದ ಫಸ್ಟ್ ಲುಕ್ ಅನಾವರಣ
1980 ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಬಡ್ಡಿ ಆಟಗಾರನ ನೈಜ ಕಥೆಯನ್ನು ಆಧರಿಸಿದ ಬಹು ನಿರೀಕ್ಷಿತ ಚಲನಚಿತ್ರದ ಒಂದು ನೋಟವನ್ನು ಒದಗಿಸುವ ‘ಅರ್ಜುನ್ ಚಕ್ರವರ್ತಿ: ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್’ ಚಿತ್ರದ ಮೊದಲ ನೋಟವನ್ನು ಅನಾವರಣಗೊಳಿಸಲಾಗಿದೆ. ಸಮರ್ಪಿತ ಕ್ರೀಡಾಪಟುವಿನ ಜೀವನದಲ್ಲಿ ಪ್ರಯೋಗಗಳು ಮತ್ತು ವಿಜಯಗಳನ್ನು ಪ್ರದರ್ಶಿಸುವಾಗ ಕಚ್ಚಾ ಮತ್ತು ಹಳ್ಳಿಗಾಡಿನ ಚಿತ್ರಣವನ್ನು ಚಿತ್ರಿಸಲು ಚಿತ್ರ ತಂಡ ಒಳ ಹೊಂದಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ “ಭಾರತೀಯ ಕಬಡ್ಡಿಯಲ್ಲಿ ಅರ್ಜುನ್ ಚಕ್ರವರ್ತಿಯ ಪ್ರಭಾವವು 1980 ರ ದಶಕದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ಅವರ ಪ್ರಭಾವಕ್ಕೆ ಸಮಾನಾಂತರವಾಗಿದೆ” ಎಂದು ಓದುವ ಬಲವಾದ ಪಠ್ಯವನ್ನು ಒಳಗೊಂಡಿದೆ. ಈ ಹೇಳಿಕೆಯು ಅರ್ಜುನ್‌ನ ಸ್ಪೂರ್ತಿದಾಯಕ ಕಥೆಯ ಬಗ್ಗೆ ನಿರೀಕ್ಷೆಗಳನ್ನು ಮತ್ತು ಜಿಜ್ಞಾಸೆಯನ್ನು ಹುಟ್ಟುಹಾಕುತ್ತದೆ, ಅದು ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ತೆರೆದುಕೋನಂತಿದೆ. ಶ್ರೀನಿ ಗುಬ್ಬಾಳ ನಿರ್ಮಿಸಿದ ಮತ್ತು ವಿಕ್ರಾಂತ್ ರುದ್ರ ಬರೆದು ನಿರ್ದೇಶಿಸಿದ ಈ…
ಸಿನಿ ಲೋಕದ ಗಣ್ಯರನ್ನೂ ಪರಚಿದ ‘ಹುಲಿ ಉಗುರು’ ಪ್ರಕರಣ
ಬೆಂಗಳೂರು: ಹುಲಿ ಉಗುರು ಹೊಂದಿರುವ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ದಿ ಸೆಲೆಬ್ರೆಟಿಗಳಲ್ಲಿ ನಡುಕ ಉಂಟಾಗಿದೆ. ಇದೇ ವೇಳೆ, ನಟರಾದ ದರ್ಶನ, ಜಗ್ಗೇಶ್, ನಿಖಿಲ್, ರಾಕ್ ಲೈನ್ ವೆಂಕಟೇಶ್ ಅವರೂ ಹುಳು ಉಗುರಿನ ರೀತಿಯ ಪೆಂಡೆಂಟ್ ಧರಿಸಿದ ಫೋಟೋಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಲವು ಗಣ್ಯರಿಗೆ ಅರಣ್ಯಾಧಿಕಾರಿಗಳು ನೋಟೀಸ್ ಜಾರಿಗೊಳಿಸಿದ್ದಾರೆ. ಅಷ್ಟೇ ಅಲ್ಲ, ನಟ ದರ್ಶನ ಅವರ ನಿವಾಸಕ್ಕೆ ಲಗ್ಗೆ ಹಾಕಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಅವರ ಮನೆಗಳಿಗೂ ತೆರಳಿ ಪರಿಶೀಲನೆ ನಡೆಸಿರುವ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.
