ಕಾವೇರಿ ಕಿಚ್ಚು; ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ನಟ ಪ್ರೇಮ್

ಬೆಂಗಳೂರು: ಕಾವೇರಿ ವಿಚಾರದಲ್ಲಿ ರೈತರು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಾ ರಕ್ತ ಕೊಟ್ಟೆವು ನೀರು ಬಿಡೆವು ಎಂದು ಘೋಷಣೆ ಮೊಳಗಿಸುತ್ತಿದ್ದರೆ, ಇನ್ನೊಂದೆಡೆ ‘ನೆನಪಿರಲಿ’ ಸಿನಿಮಾ ಖ್ಯಾತಿಯ ನಟ ಪ್ರೇಮ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಕರ್ನಾಟಕಕ್ಕೆ ದಯವಿಟ್ಟು ನ್ಯಾಯ ಕೊಡಿ ಎಂದು ರಕ್ತದಲ್ಲಿ ಬರೆದ ಪತ್ರದಲ್ಲಿ ಹಸ್ತದ ಅಚ್ಚನ್ನು ನಮೂದಿಸಿದ್ದಾರೆ. ಈ ಪತ್ರವನ್ನು ನಟ ಪ್ರೇಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಕಾವೇರಿ ನಮ್ಮದು, ಇಡೀ ಕರ್ನಾಟಕದ ಆಸ್ತಿ’ ಎಂದ ರಶ್ಮಿಕಾ

ಬೆಂಗಳೂರು: ಕಾವೇರಿ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳ ಹೋರಾಟವನ್ನು ಬೆಂಬಲಿಸಿರುವ ಬಹುಬಾಷಾ ತಾರೆ ರಶ್ಮಿಕಾ ಮಂದಣ್ಣ, ಕಾವೇರಿ ನಮ್ಮದು, ಕಾವೇರಿ ಇಡೀ ಕರ್ನಾಟಕದ ಆಸ್ತಿ ಎಂದು ಹೇಳಿದ್ದಾರೆ. ಶುಕ್ರವಾರದ ಕರ್ನಾಟಕ ಬಂದ್ ಬೆಂಬಲಿಸಿ ಟ್ವೀಟ್ ಮಾಡಿರುವ ನಟಿ ರಶ್ಮಿಕಾ ಮಂದಣ್ಣ, ಕಾವೇರಿ ಎಂದೂ ನಮ್ಮದು. ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು ಎಂದಿದ್ದಾರೆ‌. https://twitter.com/iamrashmikha/status/1706603637911515456?t=HGYdOT5Hf5XVhXQp540e6g&s=19

ಕಾವೇರಿ ಸಮರ: ಕರ್ನಾಟಕ ಬಂದ್‌’ಗೆ ಸ್ಯಾಂಡಲ್‌ವುಡ್ ಬೆಂಬಲ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡಿವೆ. ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆನೀಡಿವೆ. ಶುಕ್ರವಾರದ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇದೇ ವೇಳೆ, ಸ್ಯಾಂಡಲ್‌ವುಡ್ ಕೂಡಾ ಬೆಂಬಲ ವ್ಯಕ್ತಪಡಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿಂದು ಫಿಲಂ ಛೇಂಬರ್ ಪ್ರಮುಖರು ಸಭೆ ನಡೆಸಿ ಕರ್ನಾಟಕ ಬಂಧ್‌ನಲ್ಲಿ ಭಾಗಿಯಾಗುವ ಬಗ್ಗೆ ಚರ್ಚಿಸಿದರು. ಕನ್ನಡ ಚಿತ್ರೋದ್ಯಮದ ಅನೇಕ ಗಣ್ಯರು ಸಭೆಯಲ್ಲಿ ಭಾಗವಹಿಸಿ ಬಂದ್‌ಗೆ ಬೆಂಬಲ ಸೂಚಿಸಿದರು. ಈ ಕುರಿತಂತೆ ಮಾಹಿತಿ ಹಂಚಿಕೊಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ. ಸುರೇಶ್ ಹಾಗೂ ಮಾಜಿ ಅಧ್ಯಕ್ಷ ಸಾ‌ರ.ಗೋವಿಂದ್, ಕರ್ನಾಟಕ ಬಂದ್ ದಿನದಂದು ಚಿತ್ರೋದ್ಯಮ ಬಂದ್ ಮಾಡಿ ಹೋರಾಟದಲ್ಲಿ ನಟ ನಟಿಯರು ಹಾಗೂ ತಂತ್ರಜ್ಞರು ಭಾಗಿಯಾಗಲಿದ್ದಾರೆ…

ಬಾಲಿವುಡ್‌ ನಟ ಅಖಿಲ್ ಮಿಶ್ರಾ ವಿಧಿವಶ

ಮುಂಬಯಿ: ಬಾಲಿವುಡ್‌ ನಟ ಅಖಿಲ್ ಮಿಶ್ರಾ ವಿಧಿವಶರಾಗಿದ್ದಾರೆ. ಜಾರಿ ಬಿದ್ದು ಗಾಯಗೊಂಡಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. 58 ವರ್ಷ ಹರೆಯದ ಅಖಿಲ್ ಮಿಶ್ರಾ ಅವರು, ಆಮಿರ್‌ ಖಾನ್‌ ಅಭಿನಯದ ʼಥ್ರೀ ಈಡಿಯಟ್ಸ್ʼ ಸಹಿತ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ತನ್ನ ಅಡುಗೆಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದರು ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.