ಆಗಸ್ಟ್​ 15 ರಂದು ಪುಷ್ಪ 2: ದಿ ರೂಲ್’ ಆರಂಭ; ಅಂದೇ ‘ಸಿಂಗಮ್ ಅಗೈನ್’​

ಅಲ್ಲು ಅರ್ಜುನ್ ಅಭಿನಯದ ತೆಲುಗು ಭಾಷೆಯ ಆಕ್ಷನ್-ಡ್ರಾಮಾ ಜಾನರ್​, 2021 ರಲ್ಲಿ ಬಿಡುಗಡೆಯಾದ ‘ಪುಷ್ಪ: ದಿ ರೈಸ್’ ಚಿತ್ರದ ಮುಂದುವರಿದ ಭಾಗವಾದ ‘ಪುಷ್ಪ 2: ದಿ ರೂಲ್’ ಸಿನಿಮಾ ಆಗಸ್ಟ್​ 15, 2024 ರಂದು ಜಾಗತಿಕವಾಗಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಚಿತ್ರತಂಡ ಪೋಸ್ಟರ್​ ಜತೆಗೆ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ. ಬಾಲಿವುಡ್​ ನಟ ಅಜಯ್​ ದೇವಗನ್​ ಅಭಿನಯದ ‘ಸಿಂಗಮ್ ಅಗೈನ್’​ ಚಿತ್ರವೂ ಅದೇ ದಿನ ಬಿಡುಗಡೆಗೊಳ್ಳಲಿದೆಯಂತೆ. ಇದಕ್ಕಾಗಿ ಚಿತ್ರತಂಡ ಭರ್ಜರಿ ತಯಾರಿಯಲ್ಲಿ ತೊಡಗಿದೆ.

ಬಹು ನಿರೀಕ್ಷಿತ ಕೊಂಕಣಿ ಚಲನಚಿತ್ರ ‘ಅಸ್ಮಿತಾಯ್’ ಸೆಪ್ಟೆಂಬರ್ 15 ರಂದು ತೆರೆಗೆ

ಕೊಂಕಣಿಯ ಕಲೆ, ಸಾಹಿತ್ಯ, ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿದ, ಗಿನ್ನೆಸ್ ದಾಖಲೆ ಬರೆದ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಸಿನೆಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಸ್ಮಿತಾಯ್ ಚಲನಚಿತ್ರವನ್ನು ನಿರ್ಮಿಸಿದ್ದು ಈ ಸಿನೆಮಾವು ಸೆಪ್ಟೆಂಬರ್ 15 ರಂದು ತೆರೆ ಕಾಣಲಿದೆ. ಕೊಂಕಣಿ ಜನರ ಅಸ್ಮಿತೆಯ ಹುಡುಕಾಟದ ಎಳೆಯೊಂದಿಗೆ ಸಾಗುವ ಕತೆಯು ಗೋವಾದಿಂದ ವಲಸೆ, ಕೊಂಕಣಿಯ ಶ್ರೀಮಂತ ಜನಪದ ಪರಂಪರೆಯ ದೃಶ್ಯ ವೈಭವವನ್ನು ನವಿರಾದ ಪ್ರೇಮಕತೆಯೊಂದಿಗೆ ತೋರಿಸುತ್ತದೆ. ಎರಿಕ್ ಒಝೇರಿಯೊ ಬರೆದ ಮೂಲಕತೆಗೆ ಜೊಯೆಲ್ ಪಿರೇರಾ ಚಿತ್ರಕತೆ ಮತ್ತು ಸಂಭಾಷಣೆ ರಚಿಸಿದ್ದು ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ ನಿರ್ದೇಶನ ನೀಡಿದ್ದಾರೆ. ಬಾಲರಾಜ ಗೌಡ ಸುಂದರವಾಗಿ ಸೆರೆ ಹಿಡಿದ ಕರಾವಳಿ, ಮಲೆನಾಡು ಮತ್ತು ಗೋವಾದ ದೃಶ್ಯಗಳನ್ನು ಮೇವಿನ್ ಜೊಯೆಲ್ ಪಿಂಟೊ ಉತ್ತಮವಾಗಿ ಸಂಕಲನ ಮಾಡಿದ್ದಾರೆ. ಆರು ಹಾಡುಗಳಿಗೆ ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ…

ಹಳೇ ಕಂಡೆಕ್ಟರ್ ಇದೀಗ ಸೂಪರ್ ಸ್ಟಾರ್.. ಬಿಎಂಟಿಸಿ ನೌಕರರ ಮಧ್ಯೆ ‘ರಜನಿಕಾಂತ್’ ಪ್ರತ್ಯಕ್ಷ

ಒಂದೊಮ್ಮೆ ಕಂಡೆಕ್ಟರ್.. ಇದೀಗ ಸೂಪರ್ ಸ್ಟಾರ್.‌. ‘ಜೈಲರ್’ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ಸಕತ್ ಖುಷಿಯಲ್ಲಿರುವ ರಜನೀಕಾಂತ್ ಅವರು ಬೆಂಗಳೂರಿನಲ್ಲಿ ಮಂಗಳವಾರ ಬಿಎಂಟಿಸಿ ಕಚೇರಿಗೆ ಭೇಟಿ ನೀಡಿ ಕುತೂಹಲದ ಕೇಂದ್ರಬಿಂದುವಾದರು.‌ ಜೈಲರ್ ಸಕ್ಸಸ್ ಖುಷಿಯಲ್ಲಿರುವ ರಜನಿಕಾಂತ್ ಬೆಂಗಳೂರಲ್ಲಿ ರೌಂಡ್ಸ್ ಹಾಕಿದ್ದು, ಅದರ ನಡುವೆ, ಜಯನಗರದಲ್ಲಿರುವ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದರು. ಜಯನಗರದಲ್ಲಿರುವ ಬಿಎಂಟಿಸಿ ಡಿಪೋ 4ಕ್ಕೆ ತಮ್ಮ ಗೆಳೆಯ ರಾಜ್ ಬಹದ್ದೂರ್ ಜೊತೆ ಭೇಟಿ ನೀಡಿದ ರಜನಿಕಾಂತ್ ಕೆಲ ಕಾಲ ನೌಕರರ ಜೊತೆ ಸಮಯ ಕಳೆದರು. ಬಿಎಂಟಿಸಿ ನೌಕರರು ರಜನಿಕಾಂತ್ ಜೊತೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು. ಈ ಹಿಂದೆ ಬಿಎಂಟಿಸಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್ ಬಳಿಕ ಸಿನಿಮಾ ರಂಗ ಪ್ರವೇಶಿಸಿ ಇದೀಗ ಸೂಪರ್ ಸ್ಟಾರ್ ಆಗಿದ್ದಾರೆ. ಇಂದು ಅವರು ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ ವೇಳೆ ತಮ್ಮ ಹಳೇಯ ವೃತ್ತಿ ಬದುಕಿನ ಬಗ್ಗೆ ಮೆಲುಕುಹಾಕಿದರು.

ಒಂದಾಗ್ತಾರಾ ದರ್ಶನ್-ಸುದೀಪ್; ಸಂಭ್ರಮದ ‘ವೀಡಿಯೊ’ ಕುತೊಹಲ

ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ಮಾತೆ ಒಂದಾಗುತ್ತಿದ್ದಾರೆಯೇ? ಇಂತಹಾ ಖುಷಿ ಸುದ್ದಿಯೊಂದು ಕನ್ನಡ ಸಿನಿಲೋಕದಲ್ಲಿ ಹರಿದಾಡುತ್ತಿದೆ. ಇದೇ ಸಂದರ್ಭದಲ್ಲಿ ಈ ಇಬ್ಬರೂ ನಟರು ಒಂದೇ ವೇದಿಕೆಯಲ್ಲಿ ಭಾಗವಹಿಸಿ ಕುತೂಹಲದ ಕೇಂದ್ರ ಬಿಂದುವಾಗಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದ ಮುನಿಸಿಕೊಂಡು ಆರು ವರ್ಷಗಳಿಂದ ದೂರ ಉಳಿದಿರುವ ದರ್ಶನ್ ಹಾಗೂ ಸುದೀಪ್ ಕಳೆದ ರಾತ್ರಿ ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರ ಹುಟ್ಟುಹಬ್ಬ ಕಾರ್ಯಕ್ರಮ ಸಂಭ್ರಮದಲ್ಲಿ ಭಾಗಿಯಾದರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸುಮಲತಾ ಮಧ್ಯಸ್ಥಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಇಬ್ಬರ ಮಧ್ಯೆ ರಾಜಿ ಸಂಧಾನ ನಡೆದಿತ್ತಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ವೀಡಿಯೊ ಕೂಡಾ ಕುತೂಹಲ ಹೆಚ್ಚಿಸಿದೆ. This is real but it feels like something straight out of…

ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿ ಪ್ರಕಟ; ‘ಚಾರ್ಲಿ 777’ ಅತ್ಯುತ್ತಮ ಪ್ರಾದೇಶಿಕ ಸಿನಿಮಾ

ನವದೆಹಲಿ: ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡ ಸಿನಿಮಾ ‘ಚಾರ್ಲಿ 777’ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಪಡೆದುಕೊಂಡಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ 69ನೇ ರಾಷ್ಟ್ರೀಯ ಚಲಚಚಿತ್ರ ಪ್ರಶಸ್ತಿ ಗುರುವಾರ ಪ್ರಕಟವಾಗಿದ್ದು, ಪುಷ್ಪ ಚಿತ್ರದಲ್ಲಿನ ನಟನೆಗಾಗಿ ಟಾಲಿವುಡ್ ನಟ ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಆರ್. ಮಾಧವನ್ ಅಭಿನಯದ ರಾಕೆಟ್ರಿ ದಿ ನಂಬಿ ಎಫೆಕ್ಟ್ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಒಲಿದಿದೆ. ಗಂಗೂಬಾಯಿ ಸಿನಿಮಾದಲ್ಲಿನ ನಟನೆಗಾಗಿ ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಮಿಮಿ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಕೃತಿ ಸನಾನ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಹಾಗೂ ಕಿರಣ್ ರಾಜ್ ನಿರ್ದೇಶನದ ‘ಚಾರ್ಲಿ 777’ ಕನ್ನಡ ಚಿತ್ರ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಪಡೆದುಕೊಂಡಿದೆ.…

ಬಾಕ್ಸ್ ಆಫೀಸ್‌ನ 12 ನೇ ದಿನದಲ್ಲಿ ₹400 ಕೋಟಿ ಕ್ಲಬ್‌ ಸೇರಿದ “ಗದರ್ 2”

ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “ಗದರ್ 2” ಬಾಕ್ಸ್ ಆಫೀಸ್‌ನಲ್ಲಿ 12 ನೇ ದಿನದಲ್ಲಿ ₹400 ಕೋಟಿ ಕ್ಲಬ್‌ಗೆ ಸೇರುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. ಈ ಚಿತ್ರವು ಈ  ದಿನದಂದು ₹11.50 ಕೋಟಿ ಸಂಗ್ರಹಿಸಿದೆ, ಬಿಡುಗಡೆಯಾದಾಗಿನಿಂದ ತನ್ನ ಪ್ರಭಾವಶಾಲಿ ಪ್ರದರ್ಶನವನ್ನು ಕಾಯ್ದುಕೊಂಡಿದೆ. ಅನಿಲ್ ಶರ್ಮಾ ನಿರ್ದೇಶಿಸಿದ “ಗದರ್: ಏಕ್ ಪ್ರೇಮ್ ಕಥಾ” (2001) ನ ಮುಂದಿನ ಭಾಗವು ತನ್ನ ಎರಡನೇ ಮಂಗಳವಾರ ಗಳಿಕೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

“OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ “OMG 2” ಸಿನಿಮಾ ಖ್ಯಾತಿಯ ಶಿಖರವನ್ನೇರಿದೆ. ಸ್ವಾತಂತ್ರ್ಯ ದಿನದಂದು ಭರ್ಜರಿ ಪ್ರದರ್ಶನದೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿದೆ. ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರೀಯ ರಾಜಾ ದಿನವಾದ ಮಂಗಳವಾರ “OMG 2” ಚಿತ್ರವು ತನ್ನ ಅತ್ಯಧಿಕ ಏಕದಿನ ಸಂಗ್ರಹವನ್ನು ಸಾಧಿಸಿದೆ. ಈ ಮೂಲಕ ಈ ವಾರ 100 ಕೋಟಿ ರೂಪಾಯಿ ಮಾರ್ಕ್ ಅನ್ನು ಮೀರುವ ನಿರೀಕ್ಷೆ ಹುಟ್ಟಿದೆ. ಮಂಗಳವಾರದಂದು “OMG 2” ಚಿತ್ರವು 18.5 ಕೋಟಿ ರೂಪಾಯಿ ಗಳಿಸಿದ್ದು ಮೊದಲ ಐದು ದಿನಗಳಲ್ಲಿ ಬರೋಬ್ಬರಿ 73.67 ಕೋಟಿ ರೂಪಾಯಿ ಆದಾಯ ಗಳಿಸಿದೆ. https://www.youtube.com/watch?v=Y6ZKXqM7HNQ