207.15 ಕೋಟಿ ರೂಪಾಯಿ ಆದಾಯ ಗಳಿಸಿದ “ಜೈಲರ್”

ರಜನಿಕಾಂತ್ ಅಭಿನಯದ “ಜೈಲರ್” ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಹೊಸ ದಾಖಲೆಗಳನ್ನು ಸ್ಥಾಪಿಸಿದೆ. ಸ್ವಾತಂತ್ರ್ಯ ದಿನದಂದು “ಜೈಲರ್” 33 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರವು ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ಸಾಧಿಸಿದ ₹ 200 ಕೋಟಿ ಮೈಲಿಗಲ್ಲನ್ನು ದಾಟಿದೆ. ಶುಕ್ರವಾರ ₹ 25.75 ಕೋಟಿ, ಶನಿವಾರ ₹ 34.3 ಕೋಟಿ, ಭಾನುವಾರ ₹42.2 ಕೋಟಿ ರೂಪಾಯಿ ಗಳಿಸಿದ್ದ “ಜೈಲರ್”, ಸ್ವಾತಂತ್ರ್ಯ ದಿನದಂದು ಭರ್ಜರಿ ಚೇತರಿಕೆ ಕಂಡು ₹33 ಕೋಟಿ ಕಲೆಕ್ಷನ್ ಮಾಡಿದೆ. ಪ್ರದರ್ಶನ ಕಂಡ ಆರಂಭದ ಆರು ದಿನಗಳ ಅವಧಿಯಲ್ಲಿ ಭಾರತದ ಎಲ್ಲಾ ಭಾಷೆಗಳಿಗೆ ಚಿತ್ರ 207.15 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ.  

ಜಾತಿ ನಿಂದನೆ ಆರೋಪ; ಉಪೇಂದ್ರ ವಿರುದ್ಧದ FIR​ಗೆ ಹೈಕೋರ್ಟ್ ತಡೆ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಡೆದ ಯಡವಟ್ಟು ನಟ ಉಪೇಂದ್ರ ಅವರನ್ನು ಹೈಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದು ಕಹಿ ಸತ್ಯ. ಈ ಪ್ರಕರಣದಲ್ಲಿ ಉಪೇಂದ್ರ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆ ಹಾಗೂ ಹಲಸೂರು ಗೆಟ್ ಪೊಲೀಸ್ ಠಾಣೆಗಳಲ್ಲಿ ಜಾತಿ ನಿಂದನೆಯ ಕೇಸ್ ದಾಖಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡುತ್ತಿದ್ದಂತೆಯೇ ಹೈಕೋರ್ಟ್ ಮೊರೆ ಹೋದ ಉಪೇಂದ್ರ ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್​ಗೆ ತಡೆಯಾಜ್ಞೆ ತಂದಿದ್ದಾರೆ. ತಮ್ಮ ವಿರುದ್ಧದ ಎಫ್​ಐಆರ್​ಗೆ ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್​ ಮೊರೆ ಹೋಗಿದ್ದರು. ಉಪೇಂದ್ರ ಪರ ವಾದಿಸಿದ ಹಿರಿಯ ವಕೀಲ ಉದಯ್ ಹೊಳ್ಳ, ತಮ್ಮ ಕಕ್ಷಿದಾರರು ‘ಗಾದೆ ಮಾತು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆಯೇ ಹೊರತು ಯಾರ ವಿರುದ್ದವೂ ದುರುದ್ದೇಶದಿಂದ ಯಾವುದೇ ಪದ ಬಳಸಿಲ್ಲ. ಹಾಗಾಗಿ ಪರಿಶಿಷ್ಟ ಜಾತಿ,…

ವಿವಾದದ ಸುಳಿಯಲ್ಲ ಉಪೇಂದ್ರ; ಪೊಲೀಸರಿಂದ ನಟನಿಗೆ ನೋಟಿಸ್

ಬೆಂಗಳೂರು: ಚಿತ್ರನಟ ಉಪೇಂದ್ರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಆರೋಪ ಕೇಳಿಬಂದಿದ್ದು, ಇದೀಗ ಪ್ರಕರಣಗಳು ದಾಖಲಾಗಿವೆ. ಉಪೇಂದ್ರ ಅವರು ಫೇಸ್ಬುಕ್ ಲೈವ್ ನಲ್ಲಿ ಆಕ್ಷೇಪಾರ್ಹ ರೀತಿ ಮಾತನಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಹೋರಾಟಕ್ಕಿಳಿದಿವೆ. ಇದೇ ಸಂದರ್ಭದಲ್ಲಿ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಆಗಸ್ಟ್ 13ರಂದು ಉಪೇಂದ್ರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ ತಮ್ಮ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಬೆಳವಣಿಗೆ ಬಗ್ಗೆ ನಟ ಉಪೇಂದ್ರ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಕ್ಷಮೆ ಯಾಚಿಸಿದ್ದಾರೆ. ಆದರೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪ್ರಕರಣಗಳೂ ದಾಖಲಾಗಿವೆ.

ರಶ್ಮಿಕಾ ಮಂದಣ್ಣ ಅವರಿಗೆ ಈಗ ಆಫರ್ ಗಳ ‘ಪ್ರವಾಹ’

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಆಫರ್ ಮೇಲೆ ಆಫರ್ ಸಿಗುತ್ತಿದೆ. ಇದೀಗ ಅವರಿಗೆ ವಿಕ್ರಮ್ ಅದ್ಧೂರಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಕೇರಳದಲ್ಲಿನ ಭೀಕರ ಪ್ರವಾಹದ ‘2008’ ಸಿನಿಮಾವನ್ನು ನಿರ್ದೇಶಕ ಜೂಡ್ ಆಂಥೋನಿ ಜೋಸೆಫ್ ಅವರು ಮಾಡುತ್ತಿದ್ದು. ವಿಕ್ರಮ್ ಅವರ ಲೈಕಾ ಪ್ರೊಡಕ್ಷನ್ಸ್’ನಲ್ಲಿ ಹೊಸ ಸಿನಿಮಾ ನಿರ್ಮಾಣವಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಾಯಕಿ ನಟಿಯಾಗಿ ನಟಿಸಲಿದ್ದಾರೆ. For the number of times I’ve performed the last year.. it’d be unfair for me not to post for dance day.. ❤️❤️happy dance day everyone.. let’s all keep dancing. 💃🏻😚 pic.twitter.com/wcELGhwEIn — Rashmika Mandanna (@iamRashmika) April 29, 2023

ನಟ ವಿಜಯ ರಾಘವೇಂದ್ರ ಪತ್ನಿ ‘ಸ್ಪಂದನಾ’ ವಿಧಿವಶ

ಬೆಂಗಳೂರು: ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ವಿಧಿವಶರಾಗಿದ್ದಾರೆ. ವಿಜಯಾ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್‌ಗೆ ತೆರಳಿದ್ದ ಸಂದರ್ಭದಲ್ಲಿ ಇಂದು ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸ್ಪಂದನಾ ಅವರು, ನಟಿಯಾಗಿ, ಸಿನಿಮಾ ನಿರ್ಮಾಣ ಮಾಡಿ ಗಮನಸೆಳೆದಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರಿ ಸ್ಪಂದನಾ ಅವರು 16 ವರ್ಷಗಳ ಹಿಙದೆ ವಿಜಯ ರಾಘವೇಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ರವಿಚಂದ್ರನ್ ಜೊತೆ ಅಪೂರ್ವ ಸಿನಿಮಾದಲ್ಲಿ ಸ್ಪಂದನಾ ನಟಿಸಿ ಗಮನಸೆಳೆದಿದ್ದರು. ಇದೀಗ ಅವರು, ಬಹು ನಿರೀಕ್ಷೆಯ ‘ಕಿಸ್ಮತ್’ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದರು. ಈ ಸಿನಿಮಾದ ಪ್ರಮೋಷನ್ ಕಾರ್ಯಕ್ರಮ ಕೂಡಾ ಆಯೋಜಿತವಾಗಿತ್ತು. ಆದರೆ ಅವರು ಏಕಾಏಕಿ ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದಾರೆ.