ಎಲ್.ಜಿ.ಹಾವನೂರು ವರದಿ ಅನುಷ್ಠಾನದಿಂದ ಸಾಮಾಜಿಕ ಬದಲಾವಣೆ: ಜಯಪ್ರಕಾಶ್ ಹೆಗ್ಡೆ

ಹಾವೇರಿ: ಎಲ್.ಜಿ. ಹಾವನೂರು ವರದಿಯನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಬೈಬಲ್ ಎಂದು ಬಣ್ಣಿಸಿದ್ದರು. ಸರ್ವೊಚ್ಛ ನ್ಯಾಯಲಯವು ವರದಿಯನ್ನು ಹಿಂದುಳಿದ ವರ್ಗಗಳ ನಿಖರವಾದ ಅಂಶಗಳ ಅಧ್ಯಯನ ಎಂದಿತು. ಈ ವರದಿ ಬಿ.ಪಿ.ಮಂಡಲ್ ಆಯೋಗಕ್ಕೂ ಮಾನದಂಡವಾಗಿ ಕಾರ್ಯನಿರ್ವಹಿಸಿದೆ. ವರಿದಿಯ ಸಂಪೂರ್ಣ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ಉಂಟಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಎಲ್.ಜಿ.ಹಾವನೂರು ವರದಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕನ್ನಡಪರ ಮತ್ತು ಪಗ್ರತಿಪರ ವರದಿಗಳ ಅನುಷ್ಠಾನದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಜಿ.ಹಾವನೂರು ನೇತೃತ್ವದ ಆಯೋಗ ರಾಜ್ಯದ 180 ನಗರ ಹಾಗೂ 190 ಗ್ರಾಮೀಣ ಭಾಗದ ಬ್ಲಾಕ್‌ಗಳಲ್ಲಿ ಸಂಚರಿಸಿ 63 ಸಾವಿರ ಕುಟುಂಬಗಳ 3 ಲಕ್ಷ ಹಿಂದುಳಿದ ವರ್ಗಗಳ ಜನರ ಸಮಿಕ್ಷೆಯನ್ನು ನಡೆಸಿತು. 1972ರ ಎಸ್.ಎಸ್.ಎಲ್.ಸಿ ಪರೀಕ್ಷೆ ಮಾನದಂಡ ಆಧರಿಸಿ ಹಿಂದುಳಿದ…

‘ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ’

ಹಾವೇರಿ : ಕಣ್ಣಿಗೆ ಕಾಣದ, ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ. ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಸೇರಿದಂತೆ ಹಲವು ಶರಣರು ಇಂತಹ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರು ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಹೇಳಿದರು. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಎರಡನೇ ದಿನದ ಗೋಷ್ಠಿಯಲ್ಲಿ ವಚನ ಪರಂಪರೆ ವಿಷಯದಡಿ, ವಚನಗಳಲ್ಲಿ ಅನುಭಾವದ ಕುರಿತು ಅವರು ಮಾತನಾಡಿದರು. ಅನುಭವ ಹಾಗೂ ಅನುಭಾವ ಎರೆಡೂ ಬೇರೆ ಬೇರೆ. ಜೀವನದ ಪ್ರತಿನಿತ್ಯದ ಜಂಜಾಟಗಳಲ್ಲಿ ನಮಗೆ ಲಭಿಸುವುದು ಅನುಭವ. ಅನುಭಾವ ಆಧ್ಯಾತ್ಮ ಚಿಂತನೆ. ದೇವರ ಸಾಕಾರ ಆಗುವವರೆಗೂ ನಮ್ಮನ್ನು ನಾವು ಅನ್ವೇಷಿಸಿಕೊಳ್ಳಬೇಕು. ಕೂಡಸಂಗಮದೇವನಿಗಾಗಿ ಬಸವಣ್ಣ, ಚನ್ನಮಲ್ಲಿಕಾರ್ಜುನನಿಗಾಗಿ ಅಕ್ಕಮಹಾದೇವಿ, ಗುಹೇಶ್ವರನಿಗಾಗಿ ಅಲ್ಲಮ ಪ್ರಭು ಅನ್ವೇಷಿಸಿ ತಮ್ಮ ಬದುಕನ್ನು ಸಾಗಿಸಿದರು. ಇಂತಹ ಅನ್ವೇಷಣೆಯಲ್ಲಿ ತೊಡಗಿದ ಇವರಿಗೆ ಬದುಕಿನ ಅನಿಶ್ಚಿತತೆ…

ರಾಜ್ಯದ ವಿಶ್ವ ವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ವಿಷಯ ಸೇರ್ಪಡೆಯಾಗಲಿ -ಕೆ.ಸತ್ಯನಾರಾಯಣ

ಹಾವೇರಿ: ಉತ್ತರ ಭಾರತದ ವಿವಿ. ಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಅಧ್ಯಯನಕ್ಕೆ ಅಳವಡಿಸಿರುವ ವಿಷಯದಂತೆ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ಅಳವಡಿಕೆಯಾಗಬೇಕು ಎಂದು ಕೇಂದ್ರ ಸರ್ಕಾರದ ವರಮಾನ ತೆರಿಗೆ ಇಲಾಖೆ ನಿವೃತ್ತ ಪ್ರಧಾನ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಅವರು ಹೇಳಿದರು. ಶನಿವಾರ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಜರುಗಿದ “ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ” ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತರ ಭಾರತದ ವಿವಿ ಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ವಿಷಯಗಳನ್ನು ಅಭ್ಯಯಿಸುವುದರಿಂದ ಅಲ್ಲಿನ ಅಭ್ಯರ್ಥಿಗಳು ಹೆಚ್ಚಾಗಿ ಯು.ಪಿ.ಎಸ್ಸಿ. ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಅದರಂತೆ ರಾಜ್ಯದಲ್ಲೂ ಸ್ಪರ್ಧಾತ್ಮಕ ವಿಯಷಗಳ ಸೇರ್ಪಡೆಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು. ಕನ್ನಡ ಐಚ್ಛಿಕ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡರೆ ನಾವುಗಳು ಇತರ ಪ್ರಾದೇಶಿಕ ಭಾಷೆಗಳ ಅಭ್ಯರ್ಥಿಗಳಿಗೆ ಸ್ಪರ್ಧಿಗಳಾಗುತ್ತೇವೆ. ಕನ್ನಡ…

ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವನ್ನು ಜಾರಿಗೆ ಮುಂದಾಗಿ: ಸರ್ಕಾರಕ್ಕೆ ಅಶೋಕ್ ಹಾರನಹಳ್ಳಿ ಸಲಹೆ

ಹಾವೇರಿ: ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿಯೇ ಸರ್ಕಾರ ಸಮಗ್ರ ಕನ್ನಡ ಭಾಷ ಅಭಿವೃದ್ಧಿ ವಿಧೇಯಕವನ್ನು ಸದನದಲ್ಲಿ ಮಂಡಿಸಿ ಕಾನೂನು ರೂಪಿಸಬೇಕಿತ್ತು. ಆದರೆ ಸದನದಲ್ಲಿ ಈ ವಿಧೇಯಕ ಮಂಡನೆಯಾಗಿಲ್ಲ. ಸರ್ಕಾರ ತಡ ಮಾಡದೇ ಸುಗ್ರಿವಾಜ್ಞೆ ಮೂಲಕ ವಿಧೇಯಕದ ಜಾರಿಗೆ ಮುಂದಾಗಬೇಕು ಎಂದು ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಎರೆಡನೇ ದಿನದ “ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ” ಗೋಷ್ಠಿಯಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕದ ಕಾನೂನು ಚಿಂತನೆ ವಿಷಯದ ಕುರಿತು ಅವರು ಮಾತನಾಡಿದರು. ರಾಜ್ಯ ಸರ್ಕಾರ 1963ರಲ್ಲಿ ರಾಜ್ಯ ಭಾಷಾ ಅಧಿನಿಯಮ ಜಾರಿಗೆ ತಂದಿದೆ. ಗೋಕಾಕ್, ಸರೋಜಿನಿ ಮಹಿಷಿ, ನರಸಿಂಹಯ್ಯ, ರಾಜಾ ರಾಮಣ್ಣ, ವಿ.ಎಸ್.ಆಚಾರ್ಯ ಸೇರಿದಂತೆ ಅನೇಕ ಮಹನಿಯರು ಕನ್ನಡ ಭಾಷೆಯ ಪರ ವರದಿಗಳನ್ನು ನೀಡಿದ್ದಾರೆ. ಇವುಗಳು ಯಾವು ಕೂಡ ಪೂರ್ಣ…

ಜೈನಕಾಶಿಯಲ್ಲಿ ‘ಜಾಂಬೂರಿ’ ಅಂತರಾಷ್ಟ್ರೀಯ ಸಾಂಸ್ಕೃತಿಕ ವೈಭವ

ಮಂಗಳೂರು:- ಸ್ಕೌಟ್ಸ್ ಮತ್ತು ಗೈಡ್ಸ್‌ ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ, ಸಾಂಸ್ಕೃತಿಕ ಜ್ಞಾನ ಮತ್ತು ಕೌಶಲ್ಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ದಕ್ಷಿಣಕನ್ನಡ ಜಿಲ್ಲೆ ಮೂಡಬಿದಿರಿಯಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಕಾರ್ಯಕ್ರಮಕ್ಕೆ  ರಾಜ್ಯಪಾಲರು ಬುಧವಾರ ಚಾಲನೆ ನೀಡಿದರು.  ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ಸಾವಿರಾರು ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್‌ಗಳು, ವಿದ್ಯಾರ್ಥಿಗಳು ಮತ್ತು ಘಟಕದ ನಾಯಕರು ಮತ್ತು ವಿದೇಶಗಳ ವಿದ್ಯಾರ್ಥಿಗಳು ಹಾಗೂ ನಾಗರೀಕರೂ ಕೂಡ ಭಾಗವಹಿಸಿದ್ದಾರೆ, ಡಿಸೆಂಬರ್ 21 ರಿಂದ 7 ದಿನಗಳವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶ ಮತ್ತು ರಾಜ್ಯದ ಶ್ರೀಮಂತ, ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನೇಕ ಕಲಾವಿದರು ಪ್ರದರ್ಶಿಸಲಿದ್ದಾರೆ.  ಜವಾಬ್ದಾರಿಯುತ ನಾಗರಿಕರಾಗಿ ದೇಶದ ಸೇವೆ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕೊಡುಗೆ ನೀಡಬಹುದು.…

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಇಲ್ಲ

ಬೆಂಗಳೂರು: ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ ಮಾಡುವಾಗ ಹಾಗೂ ದತ್ತಾಂಶಗಳ ಸಂಗ್ರಹಣೆಯಲ್ಲಿ ಪಾರದರ್ಶಕತೆಯೇ ಇಲ್ಲ. ಫಾನಾ ಸಂಘಟನೆಯು ಈ ಬಗ್ಗೆ ಗಮನಹರಿಸಬೇಕು. ಹಾಗೆಯೇ ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಕಿವಿಮಾತು ಹೇಳಿದರು. ಫಾನಾದಿಂದ ಆಯೋಜಿಸಿದ್ದ 3 ನೇ ರಾಷ್ಟ್ರೀಯ ಆರೋಗ್ಯ ಸಮ್ಮೇಳನದಲ್ಲಿ ಸಚಿವರು ಮಾತನಾಡಿದರು. ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡಲು ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ಫಾನಾ ಸಹಯೋಗದಲ್ಲಿ ಕೆಲಸ ಮಾಡಬೇಕು. ಜನರಿಗೆ ಸದಾ ಲಭ್ಯವಾಗುವಂತೆ ಹಾಗೂ ಚಿಕಿತ್ಸೆ ಕಡಿಮೆ ದರದಲ್ಲಿ ದೊರೆಯುವಂತೆ ವ್ಯವಸ್ಥೆ ಇರಬೇಕು. ನಾನು ಯಾರನ್ನೂ ನಿರ್ದಿಷ್ಟವಾಗಿ ದೂರುತ್ತಿಲ್ಲ. ಆದರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆಯೇ ಇಲ್ಲ. ಸರ್ಕಾರದ ರಾಷ್ಟ್ರೀಯ, ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಸರಿಯಾದ ದತ್ತಾಂಶ ಬೇಕಾಗುತ್ತದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ಮಾಹಿತಿ, ದತ್ತಾಂಶಗಳನ್ನು ಸರಿಯಾಗಿ ಸರ್ಕಾರದೊಂದಿಗೆ…

ಭಾರತ ಈಗ ಮಧುಮೇಹಿಗಳ ಕೇಂದ್ರವಾಗಿರುವುದು ಬಹಳ ಬೇಸರದ ಸಂಗತಿ

ಬೆಂಗಳೂರು: ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚು ಸುಧಾರಣೆ ತರಲು ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿದೆ. ಇದಕ್ಕಾಗಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಇದರ ಜೊತೆಗೆ ಅಸಾಂಕ್ರಾಮಿಕ ರೋಗಗಳ ಕುರಿತ ಅಂಕಿ ಅಂಶ ಸಂಗ್ರಹಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು. KRSSDI ನಿಂದ ಆಯೋಜಿಸಿದ್ದ ಮಧುಮೇಹ ಕುರಿತ ರಾಜ್ಯ ಸಮ್ಮೇಳನದಲ್ಲಿ ಸಚಿವರು ಮಾತನಾಡಿದರು. ಆಧುನಿಕ ತಂತ್ರಜ್ಞಾನಗಳ ಬಳಕೆಯ ಮೂಲಕ ಆಸ್ಪತ್ರೆ ಆರೈಕೆಯಿಂದ ಮನೆ ಆರೈಕೆಗೆ ಆರೋಗ್ಯ ವ್ಯವಸ್ಥೆಯನ್ನು ಬದಲಿಸಬೇಕಿದೆ. ವೈದ್ಯ ಕೇಂದ್ರಿತದಿಂದ ರೋಗಿ ಕೇಂದ್ರಿತ ವ್ಯವಸ್ಥೆಗೆ ಬದಲಾಗಬೇಕಿದೆ. ಆರೋಗ್ಯ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲು ಜಾಗೃತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಅವಶ್ಯವಾಗಿವೆ. ಮಾಹಿತಿ, ಶಿಕ್ಷಣ, ಸಂವಹನವಿದ್ದರೆ ಜನರಿಗೆ ಹೆಚ್ಚು ಉಪಯೋಗವಾಗುತ್ತದೆ. ಆರೋಗ್ಯದಲ್ಲಿ ಕರ್ನಾಟಕ ಪ್ರಗತಿ ಸಾಧಿಸಿದರೂ, ಮಾತೃ ಮರಣ, ಶಿಶು ಮರಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಅರಿವು ಕಾರ್ಯಕ್ರಮ ಅಗತ್ಯ ಎಂದರು. Participated…

‘ನಮ್ಮ ಕ್ಲಿನಿಕ್’ ಎಂಬ ಆರೋಗ್ಯ ಸಂಜೀವಿನಿ

ಬೆಂಗಳೂರು: ನಗರವಾಸಿ ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವ ನಮ್ಮ ಕ್ಲಿನಿಕ್‌ಗಳು  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸಲಿವೆ. ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದ್ದು,ಆರಂಭದಲ್ಲಿ 114 ಕ್ಲಿನಿಕ್‌ಗಳು ಲೋಕಾರ್ಪಣೆ. ಜನವರಿ ಅಂತ್ಯಕ್ಕೆ ಎಲ್ಲವೂ ಕಾರ್ಯನಿರ್ವಹಿಸಲಿವೆ. 10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್‌‌ಗಳು ಸ್ಥಾಪನೆಯಾಗಲಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್‌ಗಳನ್ನು ಸರ್ಕಾರ ತೆರೆಯುತ್ತಿದೆ ಬರೋಬ್ಬರಿ 12 ರೀತಿಯ ಆರೋಗ್ಯ ಸೇವೆ.. ‘ನಮ್ಮ ಕ್ಲಿನಿಕ್‌’ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಲಿದೆ. ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್‌ ಸ್ಟಾಫ್‌, ಲ್ಯಾಬ್‌ ಟೆಕ್ನಿಷಿಯನ್‌, ಡಿ ದರ್ಜೆ ನೌಕರರು ಇಲ್ಲಿ ಇರಲಿದ್ದಾರೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ…

ಮೋಡಗಳ ನಡುವೆ ‘ಕಾರಿಂಜೆ ಕ್ಷೇತ್ರ’ ಹೇಗಿದೆ ಗೊತ್ತಾ?

ಮಂಗಳೂರು: ಕರಾವಳಿಯಲ್ಲಿರುವ ಆಸ್ತಿಕರ ಪಾಲಿಗೆ ದಕ್ಷಿಣ ಕಾಶಿ ಎಂದೇ ಗುರುತಾಗಿರುವ ಕಾರಿಂಜೇಶ್ವರ ಕ್ಷೇತ್ರ ಪ್ರಕೃತಿಯ ಸುಂದರ ಉಡುಗೊರೆಯಲ್ಲದೆ ಬೇರೇನೂ ಅಲ್ಲ. ಮುಗಿಲೆತ್ತರದ ಈ ಏಕಶಿಲಾ ಬೆಟ್ಟದ ಮೇಲೆ ಪರಮೇಶ್ವರ ಸಾನ್ನಿಧ್ಯವಹಿಸಿದ್ದು ಈ ಪುಣ್ಯಕ್ಷೇತ್ರ ಭಕ್ತರ ಪಾಲಿನ ಸ್ವರ್ಗ. ಬೆಟ್ಟಹತ್ತಿ ದೇಗುಲಕ್ಕೆ ತೆರಳುವುದೇ ಸಾಹಸ. ಗರ್ಭಗುಡಿಯೊಳಗಿನ ಕಾರಿಂಜೇಶ್ವರನನ್ನು ಕಂಡಾಗ ಅದೇನೋ ಪುನೀತ ಭಾವ. ಈ ಅನುಭವ ಇತರೆಡೆಗಳಿಗಿಂತ ವಿಭಿನ್ನ ಎಂಬುದು ಹಲವರ ಅಭಿಪ್ರಾಯ. ಶ್ರೀ ಕಾರಿಂಜೇಶ್ವರ ಕ್ಷೇತ್ರವು ‘ಬೆಟ್ಟ ಒಂದು: ಹಲವು ಜಗತ್ತು’ ಎಂಬಂತಿದೆ. ರಾಮಾಯಣ ಮಹಾಭಾರತ ಕಾಲದ ಹಲವು ಪುರಾಣ ಪ್ರಸಂಗಗಳಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ ಎಂಬುದು ಹಲವರ ನಂಬಿಕೆ. ಬೇಸಿಗೆಯ ಬಿರುಬಿಸಿಲ ಕಾಲದಲ್ಲೂ ‘ಉಂಗುಷ್ಠ ತೀರ್ಥ’ದ ಪುಟ್ಟ ಗುಂಡಿಯಲ್ಲಿ ಜೀವಜಲ ಸಿಗುವ ಮಹಿಮೆಯೂ ಭಕ್ತರ ಕುತೂಹಲದ ಕೇಂದ್ರಬಿಂದು. ಅದರಲ್ಲೂ ಮಳೆಗಾಲ ಕಳೆದಾಕ್ಷಣದ ಚುಮುಚುಮು ಚಳಿಯ ಕಾಲದಲ್ಲಿ, ಬೆಳ್ಳಂಬೆಳಿಗ್ಗೆ ಬೆಟ್ಟದೆತ್ತರದಲ್ಲಿ ಸಾಗುವ ಮೋಡಗಳ ಸಾಲನ್ನು ನೋಡುವುದೇ ಚೆಂದ.…

ಲಯನ್ಸ್ ಕ್ಲಬ್ ಸಂಚಾರಿ ರಕ್ತ ಸಂಗ್ರಹಣೆ ಬಸ್ಸು; ಮುಖ್ಯಮಂತ್ರಿ ಚಾಲನೆ

ಬೆಂಗಳೂರು; ರಕ್ತದಾನ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸಲು ಸರ್ಕಾರದೊಂದಿಗೆ ಸಂಘ, ಸಂಸ್ಥೆಗಳು ಕೂಡ ಕೈ ಜೋಡಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು. ಲಯನ್ಸ್ ಕ್ಲಬ್ ವತಿಯಿಂದ ಮೂರು ಸಂಚಾರಿ ರಕ್ತ ಸಂಗ್ರಹಣೆ ಹಾಗೂ ಸಾಗಾಣಿಕೆ ಬಸ್ಸುಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಸಚಿವರು, ರಕ್ತದಾನ ಮಹಾದಾನವೆಂದು ಪರಿಗಣಿಸಲ್ಪಟ್ಟಿದೆ. ಕೋವಿಡ್ ಬಂದ ಬಳಿಕ ಕಳೆದೊಂದು ವರ್ಷದಿಂದ ರಕ್ತಸಂಗ್ರಹ ಪ್ರಮಾಣ ಬಹಳ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಸಂಘ, ಸಂಸ್ಥೆಗಳು ಮುಂದೆ ಬಂದು ಸರ್ಕಾರದೊಂದಿಗೆ ಕೈ ಜೋಡಿಸಿ ರಕ್ತಸಂಗ್ರಹದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದರು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ನಮ್ಮ ದೇಶದಲ್ಲಿ ಪ್ರತಿ ವರ್ಷ 4 ಕೋಟಿ ಯುನಿಟ್ ನಷ್ಟು ರಕ್ತದ ಬೇಡಿಕೆ ಇದೆ. ಶೇ.1 ರಷ್ಟು ಜನರು ರಕ್ತ ನೀಡಿದರೂ ಈ ಅವಶ್ಯಕತೆಯನ್ನು ನೀಗಿಸಬಹುದು. ಇದಕ್ಕಾಗಿ ಜನರಲ್ಲಿ ಹೆಚ್ಚು…