ಮಂಗಳೂರು: ಭಾರತೀಯ ಸಂಸ್ಕೃತಿ, ಪರಂಪರೆಯ ರಾಯಭಾರಿಗಳನ್ನು ರೂಪಿಸುವ ಕಲ್ಲಡ್ಕದ ಈ ಗುರುಕುಲದಲ್ಲಿ ಇದು ಅನನ್ಯ ಕಾರ್ಯಕ್ರಮ. ದೇಶದ ಭವಿಷ್ಯದ ಮೇಧಾವಿಗಳನ್ನು ರೂಪಿಸುವ ದಕ್ಷಿಣಕನ್ನಡ ಜಿಲ್ಲೆ ಕಲ್ಲಡ್ಕ ಶ್ರೀರಾಮ ಶಿಕ್ಷಣ ಸಂಸ್ಥೆಗೆ ಇದೀಗ ಭೀಮಬಲ. ಆರೆಸ್ಸೆಸ್ ಹಿರಿಯ ನಾಯಕ ಡಾ.ಪ್ರಭಾಕರ ಭಟ್ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಾರಾಂತ್ಯ ದಿನವಾದ ಶನಿವಾರ ಅನನ್ಯ ಕಾರ್ಯಕ್ರಮ ಗಮನಸೆಳೆಯಿತು. ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸವಲತ್ತು ಕಲ್ಪಿಸುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವ ಮೇಳೈಸಿತು. ವೈಧಿಕ ಸಂಪ್ರದಾಯ ನಿತ್ಯವೂ ಪ್ರತಿಬಿಂಭಿಸುತ್ತಿರುವ ಈ ಶ್ರೀರಾಮ ಹೈಸ್ಕೂಲ್ ಪರಿಪೂರ್ಣ ಡಿಜಿಟಲೀಕರಣಕ್ಕೆ ಮುನ್ನುಡಿ ಬರೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಸಹಿತ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಈ ಸಮಾರಂಭದಲ್ಲಿ IFFCO ಮತ್ತು ಸದಾಸ್ಮಿತ ಫೌಂಡೇಶನ್ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿಧ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು. ಸುಮಾರು…
Category: ವೈವಿದ್ಯ
ವೈಕುಂಠ ಏಕಾದಶಿ.. ಎಲ್ಲೆಲ್ಲೂ ಗೋವಿಂದನ ಸ್ಮರಣೆ
ವೈಕುಂಠ ಏಕಾದಶಿ. ಬದುಕಿನ ಸಕಲ ಕಷ್ಟಗಳನ್ನೂ ತೊಲಗಿಸಿ ಬಾಳು ಬಂಗಾರವಾಗಿಸು ಎಂದು ದೇವರಲ್ಲಿ ಪ್ರಾರ್ಥಿಸುವ ಕ್ಷಣ. ವೈಕುಂಠದ ಬಾಗಿಲು ತೆರೆದಿದೆ ಎಂಬ ನಂಬಿಕೆಯೂ ಆಸ್ಥಿಕರದ್ದು. ಹಾಗಾಗಿಯೇ ನಾಡಿನ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಮಹೋತ್ಸವಗಳೇ ನೆರವೇರುತ್ತಿದೆ. ಬೆಂಗಳೂರಿನ ಇಸ್ಕಾನ್ ದೇಗುಲ, ವೈಯ್ಯಾಲಿಕಾಲ್ ಬಳಿಯ ತಿರುಮಲ ದೇವಾಲಯ ಸಹಿತ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಉತ್ಸವಗಳು ಭಕ್ತರ ಗಮನಸೆಳೆದಿದೆ. ವೈಕುಂಠ ಕಥಾಸಾರ ಹೀಗಿದೆ. ಪದ್ಮ ಪುರಾಣದಲ್ಲಿ ಹೇಳಲಾದ ಕಥೆಯಇಲ್ಲಿ ಗಮನಾರ್ಹ. ಮುರನೆಂಬ ರಾಕ್ಷಸನು ದೇವತೆಗಳಿಗೆ ತುಂಬಾ ಉಪಟಳ ಕೋಡುತ್ತಿದ್ದನಂತೆ. ಆಗ ವಿಷ್ಣುನೇ ಆ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾನಂತೆ.. ವಿಷ್ಣುವಿನ ಅಂಶದಿಂದ ಪ್ರಕಟಗೊಂಡ ‘ಹೈನಮತಿ’ ಎಂಬ ಸ್ತ್ರೀ ದೇವತೆ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಗ ವಿಷ್ಣುವು ಸಂಪ್ರಿತಗೊಂಡು ಏನಾದರೂ ವರವನ್ನು ಕೇಳು ಎಂದು ಆ ದೇವತೆಗೆ ಹೇಳುತ್ತಾನೆ. ಆಗ ಅವಳು ‘ಯಾರು ಈ ವೈಕುಂಠ ಏಕಾದಶಿ ದಿನದಂದು ವ್ರತವನ್ನು…
ಮೂರು ಕೋತಿ, ನೂರಾರು ಜನ’; ವಿಶಿಷ್ಟ ಜಾಗೃತಿ ಅಭಿಯಾನ
ಬೆಂಗಳೂರು: ಸಿಲಿಕಾನ್ ಸಿಟಿ ಇಡೀ ವಿಶ್ವದ ಗಮನಕೇಂದ್ರೀಕರಿಸಿರುವುದಂತೂ ಸತ್ಯ. ಭಾರತದಲ್ಲಿ ಐಟಿ-ಬಿಟಿ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಇದೇ ಉದ್ಯಾನ ನಗರಿಯಿಂದ. ಆದರೆ ಪ್ರಸಕ್ತ ಪರಿಸ್ಥಿತಿ ನೋಡಿದರೆ ಅಧ್ವಾನದ ನಗರಿಯಾಗಿ ಪರಿವರ್ತಿತವಾಗಿದೆ. ಇದಕ್ಕೆ ಕಾರಣವೇನು? ಪರಿಸ್ಥಿತಿ ಹೀಗಾಗಲು ಜನಪ್ರತಿನಿಧಿಗಳು ಎಡವಿದ್ದೆಲ್ಲಿ ಎಂಬುದನ್ನು ಸಾರ್ವಜನಿಕರ ಗಮನೆಳೆಯಲು ಮೂರು ಗಾಂಧಿ ಕೋತಿಗಳು ಬೆಂಗಳೂರಿನ ಬೀದಿಗಳಲ್ಲಿ ಆಗಾಗ್ಗೆ ಗಮನಸೆಳೆಯುತ್ತಿವೆ. ಏನಿದು ಗಾಂಧಿ ಕೋತಿ? ರಾಜಧಾನಿ ಬೆಂಗಳೂರು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಒಂದು. ಆದರೆ ಅಭಿವೃಧ್ದಿ ಕಾಮಗಾರಿಯ ಹೆಸರಲ್ಲಿ ಇಡೀ ವ್ಯವಸ್ಥೆಯು ಜನರ ಸಹನೆಯನ್ನು ಪ್ರಶ್ನಿಸುವಂತಿದೆ. ಜನರ ನಿದ್ದೆಗೆಡಿಸುವ ಈ ಪರಿಸ್ಥಿತಿಯನ್ನು ಅಣಕಿಸುವ ರೀತಿಯಲ್ಲಿತ್ತು ಗಾಂಧಿ ಕೋತಿಗಳ ಪ್ರದರ್ಶನ ವೈಖರಿ. ‘ಕೆಟ್ಟದ್ದನ್ನು ನೋಡಲಾರೆ, ಕೆಟ್ಟದ್ದನ್ನು ಹೇಳಲಾರೆ, ಕೆಟ್ಟದ್ದನ್ನು ಕೇಳಲಾರೆ’ ಎಂದು ಮೂರು ಕೋತಿಗಳ ಫಲಕದೊಂದಿಗೆ ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಅಣಕು ಪ್ರದರ್ಶನ ಮೂಲಕ ಸಾರ್ವಜನಿರಲ್ಲಿ ಪರಿಸರ ಹಾಗೂ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸುವ…
ರಾಯಿ ಬದನಡಿಯಲ್ಲಿ ಷಷ್ಠಿ ಉತ್ಸವ.. ಭಕ್ತಿ ಕೈಂಕರ್ಯದ ನೇಮೋತ್ಸವ
ಮಂಗಳೂರು: ಷಷ್ಠಿ ಹಿನ್ನೆಲೆಯಲ್ಲಿ ಕರಾವಳಿಯ ದೇವಾಲಯಗಳಲ್ಲಿ ವಿಶೇಷ ಮಹೋತ್ಸವ ನೆರವೇರಿತು. ಬಂಟ್ವಾಳ ಸಮೀಪದ ರಾಯಿಯ ಪ್ರಸಿದ್ಧ ಕ್ಷೇತ್ರ ಬದನಡಿಯಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು. ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ತಂತ್ರಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸಿತು. ದೇವರಿಗೆ ಸ್ಕಂದ ಯಾಗ, ಸಾಮೂಹಿಕ ಆಶ್ಲೇಷ ಬಲಿ, ಪಲ್ಲಕಿ ಉತ್ಸವ ಸಹಿತ ದೇವರ ಬಲಿ ಉತ್ಸವ, ಮಹಾಪೂಜೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಪ್ರಧಾನ ಅರ್ಚಕ ಕೆ.ಸುಂದರ ರಾವ್, ಆಡಳಿತಾಧಿಕಾರಿ ನವೀನ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ ಕುಮಾರ್ ಜೈನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಪ್ರಮುಖರಾದ ಜಗದೀಶ ಕೊಯಿಲ, ರಶ್ಮಿತ್ ಶೆಟ್ಟಿ ಕೈತ್ರೋಡಿ, ರವೀಂದ್ರ ಪೂಜಾರಿ, ನಾಗೇಶ ರಾವ್, ಮೋಹನ್ ಕೆ.ಶ್ರೀಯಾನ್ ಕೈತ್ರೋಡಿ, ದಿನೇಶ ಸುವರ್ಣ…
ಅನನ್ಯ ಷಷ್ಠಿ ವೈಭವಕ್ಕೆ ಸಾಕ್ಷಿಯಾದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ
ಮಂಗಳೂರು: ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ನಾಡಿನ ದೇವಾಲಯಗಳಲ್ಲಿ ಷಷ್ಠಿ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನೆರವೇರಿತು. ದಕ್ಷಿಣ ಭಾರತದ ಪುಣ್ಯ ಕ್ಷೇತ್ರ ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ರಥೋತ್ಸವ ಸಂದರ್ಭದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಅನನ್ಯ ವೈಭವವನ್ನು ಕಣ್ತುಂಬಿಕೊಂಡರು. https://www.facebook.com/laxman.ak.1/videos/1305254323184951
2022ರ ಐಸಿಸಿ ಕ್ರಿಕೆಟ್ ಮಹಿಳಾ ವಿಶ್ವಕಪ್ ವೇಳಾಪಟ್ಟಿ
ದುಬೈ: 2022 ಮಾರ್ಚ್ 4 ರಿಂದ ನ್ಯೂಜಿಲೆಂಡ್‌ನಲ್ಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಈ ಟೂರ್ನಿಯ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.ಈ ವೇಳಾಪಟ್ಟಿ ಹೀಗಿದೆ. ಬೇ ಓವಲ್, ಟೌರಂಗಾ 04 ಮಾರ್ಚ್ 2022 – ನ್ಯೂಜಿಲೆಂಡ್ v/s ಕ್ವಾಲಿಫೈಯರ್ 06 ಮಾರ್ಚ್ 2022 – ಕ್ವಾಲಿಫೈಯರ್ v/s ಟೀಂ ಇಂಡಿಯಾ 08 ಮಾರ್ಚ್ 2022 – ಆಸ್ಟ್ರೇಲಿಯಾ v/s ಕ್ವಾಲಿಫೈಯರ್ 11 ಮಾರ್ಚ್ 2022 – ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ 14 ಮಾರ್ಚ್ 2022 – ದಕ್ಷಿಣ ಆಫ್ರಿಕಾ v/s ಇಂಗ್ಲೆಂಡ್ 16 ಮಾರ್ಚ್ 2022 – ಇಂಗ್ಲೆಂಡ್ v/s ಟೀಂ ಇಂಡಿಯಾ 18 ಮಾರ್ಚ್ 2022 – ಕ್ವಾಲಿಫೈಯರ್ v/s ಕ್ವಾಲಿಫೈಯರ್ ಯೂನಿವರ್ಸಿಟಿ ಓವಲ್, ಡುನೆಡಿನ್ 05 ಮಾರ್ಚ್ 2022 – ಕ್ವಾಲಿಫೈಯರ್ v/s ದಕ್ಷಿಣ ಆಫ್ರಿಕಾ 07 ಮಾರ್ಚ್…
‘ಭೂ ಸಿರಿ’ ಹಾಗೂ ತಕ್ಷಣ ಮಣ್ಣು ಪರೀಕ್ಷಿಸುವ ‘ಭೂಮಿತ್ರ’ ಉಪಕರಣದ ವೈಶಿಷ್ಟ್ಯ
ಹಸಿ ಮತ್ತು ಒಣ ತ್ಯಾಜ್ಯವನ್ನು ತಕ್ಷಣ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಭೂ ಸಿರಿ ಹಾಗೂ ತಕ್ಷಣ ಮಣ್ಣು ಪರೀಕ್ಷಿಸುವ ಭೂಮಿತ್ರ ಉಪಕರಣವನ್ನು ಸಿಎಂ ಯಡಿಯೂರಪ್ಪ ಲೋಕಾರ್ಪಣೆ ಮಾಡಿದ್ದಾರೆ. ಈ ಉಪಕರಣಗಳ ವೈಶಿಷ್ಟ್ಯ ಹೀಗಿದೆ. ಸಾವಯವ ಬೇಸಾಯ ಪದ್ದತಿಯು ಸಂಪ್ರದಾಯ, ನಾವೀನ್ಯತೆ ಮತ್ತು ವಿಜ್ಞಾನವನ್ನು ಒಳಗೊಂಡು ಪರಿಸರದಲ್ಲಿರುವ ಜೀವಿಗಳೊಂದಿಗೆ ಉತ್ತಮ ಸಂಬಂಧವನ್ನು ಏರ್ಪಡಿಸುತ್ತದೆ. ಜಪಾನಿನ ಸಹಜ ಕೃಷಿಯ ಹರಿಕಾರ ಮಸನೊಬು ಫುಕುವೋಕಾ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಹಜ ಕೃಷಿಯನ್ನು ಗಾಂಧಿ ಕೃಷಿ ಎಂದು ಕರೆದಿದ್ದರು. ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಬಳಸಿಕೊಂಡು ಬೇಸಾಯ ಮಾಡುವುದು ಸಾವಯವ ಕೃಷಿಯ ಮೂಲ ಆಶಯವಾಗಿದೆ. ರಾಸಾಯನಿಕಗಳ ಬಳಕೆ, ಅವೈಜ್ಞಾನಿಕ ಸಾಗುವಳಿ ಪದ್ಧತಿಗಳಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ಕೃಷಿ ಭೂಮಿ ಬರಡಾಗುತ್ತಿದೆ. ಮಣ್ಣಿನ ಫಲವತ್ತೆಯನ್ನು ಉಳಿಸಲು ಸಾವಯವ ಕೃಷಿ ಅತ್ಯಂತ ಸಹಕಾರಿಯಾಗಿದೆ. ಕೇಂದ್ರ ಸರ್ಕಾರದ ಆಯವ್ಯಯದಲ್ಲಿಯೂ ಸಾವಯವ ಕೃಷಿಯನ್ನು ದೊಡ್ಡಮಟ್ಟದಲ್ಲಿ ಉತ್ತೇಜಿಸಲಾಗುತ್ತಿದೆ. ರಾಜ್ಯ…
‘ಪೂವರಿ’ ಸಂಸ್ಥಾಪಕ ಸಂಪಾದಕ ವಿಜಯಕುಮಾರ್ ಹೆಬ್ಬಾರಬೈಲ್’ಗೆ ತುಳುವರ ಸೆಲ್ಯೂಟ್
ಮಂಗಳೂರು: ಏಕೈಕ ತುಳು ಮಾಸ ಪತ್ರಿಕೆ ‘ಪೂವರಿ’ಯ ಸಂಸ್ಥಾಪಕ ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರ ಸನ್ಮಾನ ಸಮಾರಂಭ ಮಂಗಳೂರಿನಲ್ಲಿ ನಡೆಯಿತು. ‘ಪೂವರಿ’ಗೆ ತುಳುವರ ಸೆಲ್ಯೂಟ್ ತುಳುನಾಡಿನ ಜನರ ಅಭಿರುಚಿಯತ್ತ ಬೆಳಕು ಚೆಲ್ಲುವ, ತುಳು ನಾಡು-ನುಡಿಯ ವೈಭವ ಬಗ್ಗೆ ಬೆಳಕು ಚೆಲ್ಲುವ ಸಂಘಟನಾತ್ಮಕ ಶಕ್ತಿಗೆ ವೇದಿಕೆಯಾಗಿ ‘ಪೂವರಿ’ ತುಳು ಪತ್ರಿಕೆಯನ್ನು ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಪ್ರಾರಂಭಿಸಿದ್ದರು. ಇವರ ತುಳು ನಾಡು-ನುಡಿಯ ಕೈಂಕರ್ಯವನ್ನು ಗೌರವಿಸಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರ ಸಾಹಿತ್ಯ ಕೃಷಿ ಬಗ್ಗೆ ಗುಣಗಾನ ಮಾಡಿದರು. ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರು ಸಾಹಿತ್ಯ, ಕಲಾ ಸಂಸ್ಕೃತಿಯ ಪ್ರಸಾರಕ. ಅಕ್ಷರ ಮಂತ್ರದ ಮೂಲಕ ತುಳು ಭಾಷಿಗರನ್ನು ಸಂಘಟಿಸುವ ಮಹಾ ಮಾಂತ್ರಿಕ ಎಂದು ಅತಿಥಿಗಳು ಕೊಂಡಾಡಿದರು. ತುಳು ಭಾಷಿಗರ ಪ್ರಾಬಲ್ಯವಿರುವ ದಕ್ಷಿಣಕನ್ನಡ,…
‘ನಿನ್ನ ಪ್ರೀತಿ ಬೇಕಿದೆ’ ಯುವಜನರಲ್ಲಿ ಸಂಚಲನ ಮೂಡಿಸಿದ ಆಲ್ಬಂ ಸಾಂಗ್
ಪ್ರಸ್ತುತ ಸ್ಯಾಂಡಲ್‌ವುಡ್, ಬಾಲಿವುಡ್‌ಗಳಲ್ಲಿ ಡ್ರಗ್ ಮಾಫಿಯಾದ ಕರ್ಕಶ ಧ್ವನಿ ಮಾರ್ಧನಿಸುತ್ತಿದೆ. ಇದೇ ಹೊತ್ತಿಗೆ ವ್ಯಸನಮಕ್ತ ಸಮಾಜ ನಿರ್ಮಾಣದ ಅನಿವಾರ್ಯತೆ ಬಗ್ಗೆಯೂ ಸಾಲು ಸಾಲು ಸಲಹೆಗಳು ಕೇಳಿಬರುತ್ತಿವೆ. ಇದೇ ಸಂದರ್ಭದಲ್ಲಿ ಕರಾವಳಿಯ ಹುಡುಗರು ಡ್ರಗ್ ಹಾವಳಿ ಮತ್ತು ವ್ಯಸನ ಸಮಾಜಿಕ ಸ್ವಾಸ್ಥ್ಯಕ್ಕೆ ಯಾವ ರೀತಿ ಸವಾಲಾಗಿದೆ ಎಂಬುದನ್ನು ಹಾಡಿನ ಮೂಲಕ ಸಾರಿದ್ದಾರೆ. ‘ನಿನ್ನ ಪ್ರೀತಿ ಬೇಕಿದೆ’ ಎಂಬ ಆಲ್ಬಂ ಸಾಂಗ್ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆದ ಕೆಲವೇ ತಾಸುಗಳಲ್ಲಿ ಸಾವಿರಾರು ಮಂದಿಯ ಚಿತ್ತ ಸೆಳೆದಿದೆ. ಬಹಳಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿರುವುದು ವಿಶೇಷ. ‘ಟೀಮ್ ಶ್ಲಾಘನಾ’ ಹೆಸರಲ್ಲಿ ಅಶೋಕ್ ಆಂಚನ್, ಪ್ರಣೀತ್ ಸುವರ್ಣ ಮೊದಲಾದವರು ಈ ಹಾಡಿನ ಹಿಂದಿನ ಯುವ ಪ್ರತಿಭೆಗಳು. ‘ಕನಸು ಮಾರಾಟಕ್ಕಿದೆ’ ಚಿತ್ರದ ನಿರ್ದೇಶಕ ಸ್ಮಿತೇಶ್ ಎಸ್ ಬಾರ್ಯ ಅವರು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಈ ಬಾರಿಯ ದೀಪಾವಳಿ ಹೊಸ ಮನ್ವಂತರಕ್ಕೆ ಮುನ್ನುಡಿ
ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಕೊರೋನಾ ಕರಾಳತೆಯ ಸನ್ನಿವೇಶದಲ್ಲಿ ನಾಡು ಸಿಲುಕಿದ್ದರೂ ಈ ಬಾರಿಯ ದೀಪಾವಳಿಯ ಸಡಗರಕ್ಕೇನೂ ಅಡ್ಡಿಯಾಗಿಲ್ಲ. ಪಟಾಕಿ ಇಲ್ಲದೇ ದೀಪಗಳ ಬೆಳಕಿಗಷ್ಟೇ ಸೀಮಿತಗೊಳಿಸಲು ಪ್ರಜ್ಞಾವಂತ ಜನತೆ ನಿರ್ಧರಿಸುವ ಮೂಲಕ ಈ ದೀಪಾವಳಿ ಸಂದರ್ಭದಲ್ಲಿ ಹೊಸ ಮನ್ವಂತರಕ್ಕೂ ಮುನ್ನುಡಿ ಬರೆಯಲಾಗಿದೆ. ಈ ಬಾರಿಯ ದೀಪಾವಳಿ ಪ್ರಧಾನಿ ನರೇಂದ್ರ ಮೋದಿ ಪಾಲಿಗೂ ವಿಶೇಷ. ದೇಶ ಕಾಯುವ ಯೋಧರೊಂದಿಗೆ ಬೆಳಕಿನ ಹಬ್ಬ ಆಚರಿಸಿ ಸಿಹಿ ಸನ್ನಿವೇಶದಲ್ಲಿ ಅವರು ಪಾಲ್ಗೊಂಡು ಜಾಗತಿಕ ಗಮನಸೆಳೆದರು. ಇದೇ ವೇಳೆ ಟ್ವೀಟ್ ಮಾಡಿ ದೇಶದ ಜನತೆಗೆ ದೀಪಾವಳಿಯ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ದೀಪಾವಳಿ ಸಂದರ್ಭದಲ್ಲಿ ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ಕರೆ ಕೊಟ್ಟಿದ್ದಾರೆ. This Diwali, let us also light a Diya as…
