ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ; ಕೇಜ್ರಿವಾಲ್ ಮಣಿಸಿದ ಪರ್ವೇಶ್ ವರ್ಮಾಗೆ ಡಿಸಿಎಂ ಸ್ಥಾನ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ರೇಖಾ ಗುಪ್ತಾ ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಲಿಮಾರ್ ಬಾಗ್ ವಿಧಾನಸಭಾ ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಇದೇ ವೇಳೆ, ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಯಗಳಿದ್ದ ಪರ್ವೇಶ್ ವರ್ಮಾ ಅವರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ದೆಹಲಿಯ ನೂತನ ಸಿಎಂ, ಡಿಸಿಎಂ ಹಾಗೂ ಸಂಪುಟ ಸಚಿವರು ಗುರುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಕಾರವಾರ ನೌಕಾ ನೆಲೆಯ ಸೂಕ್ಷ್ಮ ಮಾಹಿತಿ ಪಾಕಿಸ್ತಾನಕ್ಕೆ ಸೋರಿಕೆ; ಮೂವರ ಬಂಧನ

ನವದೆಹಲಿ: ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿ ರವಾನಿಸುತ್ತಿದ್ದ ಆರೋಪದಲ್ಲಿ ರಾಷ್ಟ್ರೀಯ ತನಿಕಾ ತಂಡ NIA ಮೂವರನ್ನು ಬಂಧಿಸಿದೆ. ಭಾರತದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿ ಪಾಕಿಸ್ತಾನ ಮೂಲದ ಗುಪ್ತಚರ ಅಧಿಕಾರಿಗಳಿಗೆ ನೀಡಿದ ಆರೋಪದಲ್ಲಿ ವೇತನ್ ಲಕ್ಷ್ಮಣ್ ತಂಡೇಲ್, ಅಕ್ಷಯ್ ರವಿ ನಾಯಕ್ ಹಾಗೂ ಅಭಿಲಾಷ್ ಎಂಬವರನ್ನು ಬಂಧಿಸಲಾಗಿದೆ ಎಂದು NIA ಮೂಲಗಳು ತಿಳಿಸಿವೆ. ಕಾರವಾರ ನೌಕಾ ನೆಲೆ ಮತ್ತು ಕೊಚ್ಚಿ ನೌಕಾ ನೆಲೆಯಲ್ಲಿರುವ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಈ ಆರೋಪಿಗಳು ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಹಾಗೂ ಕೊಚ್ಚಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು NIA ಅಧಿಕಾರಿಗಳು ತಿಳಿಸಿದ್ದಾರೆ.

26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಪದಗ್ರಹಣ

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಬುಧವಾರ ಅಧಿಕಾರ ವಹಿಸಿಕೊಂಡರು. ಸೋಮವಾರದಂದು ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸ್ಥಾನಕ್ಕೆ ಕೇಂದ್ರ ಸರ್ಕಾರದ ಉನ್ನತ ಸಮಿತಿ ನೇಮಕ ಮಾಡಿತ್ತು. ಈ ನೇಮಕಾತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ ನಂತರ ಬುಧವಾರ ಬೆಳಿಗ್ಗೆ ಜ್ಞಾನೇಸ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರವಹಿಸಿಕೊಂಡರು. Gyanesh Kumar's message after taking charge as Chief Election Commissioner.#ChiefElectionCommissioner | #CEC | #GyaneshKumar @ECISVEEP pic.twitter.com/xEfhDbnAgi — All India Radio News (@airnewsalerts) February 19, 2025

ಕೇಂದ್ರ ಮುಖ್ಯ ಚುನಾವಣಾ ಅಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಂದಿನ ಮುಖ್ಯ ಆಯುಕ್ತರನ್ನಾಗಿ ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಈವರೆಗೂ ಅವರು ಚುನಾವಣಾ ಆಯುಕ್ತರಾಗಿದ್ದರು. ನೂತನ ಮುಖ್ಯ ಆಯುಕ್ತರನ್ನು ಸಮಿತಿ ಆಯ್ಕೆ‌ಮಾಡಿರುವ ಬಗ್ಗೆ ಕಾನೂನು ಸಚಿವಾಲಯ ಮಾಹಿತಿ ನೀಡಿದೆ. ಜ್ಞಾನೇಶ್ ಕುಮಾರ್ ಅಧಿಕಾರಾವಧಿಯು ಜನವರಿ 26, 2029 ರವರೆಗೆ ಇರಲಿದೆ.

ಬಿಲ್ಲವಾಸ್ ಕತಾರ್’ನ ನೂತನ ಅಧ್ಯಕ್ಷರಾಗಿ ಅಪರ್ಣ ಶರತ್; ಸಂದೀಪ್ ಸಾಲಿಯಾನ್’ಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ

ಕತಾರ್: ಸಾಗರೋತ್ತರ ರಾಷ್ಟ್ರ ಕತಾರ್’ನ ಬಿಲ್ಲವ ಸಮುದಾಯದ ಪಾಳಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಬಿಲ್ಲವಾಸ್ ಕತಾರ್’ನ ಈವರೆಗೂ ಅಧ್ಯಕ್ಷರಾಗಿದ್ದ ಸಂದೀಪ್ ಸಾಲಿಯಾನ್’ಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಗಿದೆ. ಇದೇ ವೇಳೆ, ನೂತನ ಅಧ್ಯಕ್ಷರಾಗಿ ಅಪರ್ಣ ಶರತ್ ನೇಮಕವಾಗಿದ್ದಾರೆ. ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ಕತಾರ್’ನ ಎಂ.ಆರ್.ಎ, ಸಲ್ವ ರೋಡ್, ಔತಣಕೂಟ ಹಾಲ್’ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಸಂದೀಪ್ ಸಾಲಿಯಾನ್ ಅವರನ್ನು ಅಭಿನಂಧಿಸಿದ ಅಪೂರ್ವ ಸನ್ನಿವೇಶ ಗಮನಸೆಳೆಯಿತು. ಸಮುದಾಯದ ಮುಖಂಡರ ಹಾಗೂ ವಿವಿಧ ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ನೆರವೇರಿದ ಸಮಾರಂಭದಲ್ಲಿ ಸಂದೀಪ್ ಸಾಲಿಯಾನ್ ವಿನಯಪೂರ್ವಕವಾಗಿ ಬೀಳ್ಕೊಡಲಾಯಿತು. ಉದ್ಯೋಗ ನಿಮಿತ್ತ ನೆರೆಯ ಕೊಲ್ಲಿ ರಾಷ್ಟ್ರಕ್ಕೆ ವರ್ಗಾವಣೆಗೊಂಡ ಅನಿವಾರ್ಯತೆ ಹಿನ್ನೆಲೆಯಲ್ಲಿ ಬಿಲ್ಲವಾಸ್ ಕತಾರ್’ನ ಜವಾಬ್ಧಾರಿಯಿಂದ ಬಿಡುಗೊಂಡಿರುವುದಾಗಿ ಹೇಳಿದ ಸಂದೀಪ್ ಸಾಲಿಯಾನ್, ಈ ವರೆಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಂದೀಪ್ ಸಾಲಿಯಾನ್ ನಿರ್ಗಮದ ಹಿನ್ನೆಲೆಯಲ್ಲಿ ತೆರವಾಗಿರುವ ಬಿಲ್ಲವಾಸ್ ಕತಾರ್’ನ…

ಆಂಧ್ರ ಪ್ರದೇಶದಲ್ಲಿ GBS ಸೋಂಕಿನ ತಲ್ಲಣ; ಇಬ್ಬರು ಬಲಿ

ಅಮರಾವತಿ: ದೇಶಾದ್ಯಂತ ಆತಂಕದ ಏಲ್ ಎಬ್ಬಿಸಿರುವ GBS (Guillain Barre Syndrome) ಸೋಂಕಿಗೆ ಆಂಧ್ರ ಪ್ರದೇಶದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಘಟನೆಯ ನಂತರ ಮಾರಣಾಂತಿಕ ಸೋಂಕಿನ ಬಗ್ಗೆ ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ. ‘ಸೋಂಕು ದೃಢಪಟ್ಟ 45 ವರ್ಷದ ಮಹಿಳೆ ಕಮಲಮ್ಮ ಎಂಬವರು ಭಾನುವಾರ ಗುಂಟೂರಿನ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 10 ವರ್ಷದ ಬಾಲಕ ಸುಮಾರು 10 ದಿನಗಳ ಹಿಂದೆ ಶ್ರೀಕಾಕುಳಂನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಆಂಧ್ರ ಪ್ರದೇಶ ಆರೋಗ್ಯ ಸಚಿವ ಸತ್ಯ ಕುಮಾರ್ ಯಾದವ್ ಮಾಹಿತಿ ನೀಡಿದ್ದಾರೆ. ಈ ನಡುವೆ ಆಂಧ್ರ ಪ್ರದೇಶದಲ್ಲಿ ಸುಮಾರು 17 GBS ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಸಚಿವರು ತಿಳಿಸಿದ್ದಾರೆ.

ನುಡಿದಂತೆ ನಡೆದ ಮೋದಿ: ಯಮುನಾ ನದಿಯನ್ನು ಸ್ವಚ್ಛ ಕಾರ್ಯಕ್ಕೆ ಮುನ್ನುಡಿ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನೀಡಿದ ಯಮುನೆ ಶುದ್ಧಿ ಭರವಸೆಯನ್ನು ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕ್ರಿಯೆ ಆರಂಭಿಸಿದ್ದಾರೆ. ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಇದೀಗ ನುಡಿದಂತೆ ನಡೆಯುವ ಸಂಕಲ್ಪ ಮಾಡಿರುವ ಮೋದಿ, ರಾಜಧಾನಿಯಲ್ಲಿ ಹೊಸ ಸರ್ಕಾರ ರಚನೆಯಾಗುವ ಮೊದಲೇ ಈ ಯೋಜನೆಯ ಕೆಲಸ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಮೋದಿ ಅವರ ಸಲಹೆಯಂತೆ, ರಾಷ್ಟ್ರ ರಾಜಧಾನಿ ನಗರದಲ್ಲಿ ಭಾನುವಾರ ಯಮುನಾ ನದಿಯ ಶುಚಿಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಕಸದ ಸ್ಕಿಮ್ಮರ್‌ಗಳು, ಕಳೆ ಕೊಯ್ಲು ಯಂತ್ರಗಳು ಮತ್ತು ಡ್ರೆಡ್ಜಿಂಗ್ ಯುಟಿಲಿಟಿ ಕ್ರಾಫ್ಟ್‌ಗಳಂತಹ ಆಧುನಿಕ ಯಂತ್ರಗಳನ್ನು ಬಳಸಲಾಯಿತು. ಇದಕ್ಕೂ ಮೊದಲು, ದೆಹಲಿ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ವಿ.ಕೆ. ಸಕ್ಸೇನಾ ಅವರು ಶನಿವಾರ ಮುಖ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನೀರಾವರಿ ಮತ್ತು ಪ್ರವಾಹ ನಿಯಂತ್ರಣ)…

ದೆಹಲಿ ಸುತ್ತಮುತ್ತ ಭೂಕಂಪನ ಹಿನ್ನೆಲೆ; ಎಚ್ಚರವಹಿಸಲು ಜನತೆಗೆ ಪ್ರಧಾನಿ ಸಲಹೆ

ನವದೆಹಲಿ: ದೆಹಲಿ-ಎನ್‌ಸಿಆರ್ ಸುತ್ತಮುತ್ತ ಲಘು ಭೂಕಂಪನವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಧಾನಿ ಸುತ್ತಮುತ್ತಲ ನಿವಾಸಿಗಳು ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಪ್ರಧಾನಿ, ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕಂಪನಗಳು ಅನುಭವವಾಗಿವೆ. ಎಲ್ಲರೂ ಶಾಂತವಾಗಿರಲು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸಲು, ಸಂಭವನೀಯ ನಂತರದ ಕಂಪನಗಳ ಬಗ್ಗೆ ಎಚ್ಚರದಿಂದಿರಲು ಒತ್ತಾಯಿಸುತ್ತಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. <blockquote class=”twitter-tweet”><p lang=”en” dir=”ltr”>Tremors were felt in Delhi and nearby areas. Urging everyone to stay calm and follow safety precautions, staying alert for possible aftershocks. Authorities are keeping a close watch on the situation.</p>&mdash; Narendra Modi (@narendramodi) <a href=”https://twitter.com/narendramodi/status/1891299628118585688?ref_src=twsrc%5Etfw”>February 17,…

ದೆಹಲಿ ಸುತ್ತಮುತ್ತ ಲಘು ಭೂಕಂಪನ; ಜನರಲ್ಲಿ ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿ ಸುತ್ತಮುತ್ತ ಇಂದು ಬೆಳಿಗ್ಗೆ ಭೂಕಂಪನದ ಅನುಭವವಾಗಿದೆ. ದೆಹಲಿ-ಎನ್​ಸಿಆರ್​ನಲ್ಲಿ ಲಘು ಕಂಪನವಾಗಿದ್ದು, ಕಂಪನದ ಪ್ರಮಾಣವು 4.0 ತೀವ್ರತೆಯಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ನಸುಕಿನ ಜಾವ ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಸೋಮವಾರ ಬೆಳಗ್ಗೆ 5.36 ಸುಮಾರಿಗೆ ಭೂಮಿ ಕಂಪಿಸಿದ್ದು ನಿದ್ದೆಯಲ್ಲಿದ್ದವರೂ ಎಚ್ಚರಗೊಂಡು ಏಕಾಏಕಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಭಾರೀ ನಿರೀಕ್ಷೆ ಹುಟ್ಟಿಸಿದ ‘ದಿ ಡೆವಿಲ್’ ಟೀಸರ್

ನಟ ದರ್ಶನ್ ಜನ್ಮದಿನದ ಸಂಭ್ರಮದ ನಡುವೆಯೇ ಅವರ ಹೊಸ ಸಿನಿಮಾ ‘ದಿ ಡೆವಿಲ್’ ಟೀಸರ್​ ರಿಲೀಸ್ ಆಗಿದೆ. ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಟೀಸರ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ‘ಕಾಟೇರ’ ಸಿನಿಮಾದ ಬಿಗ್ ಸಕ್ಸಸ್ ನಂತರ ದರ್ಶನ್ ಶುರು ಮಾಡಿದ ಸಿನಿಮಾ ‘ದಿ ಡೆವಿಲ್’ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆದರೆ, ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಆರೋಪಿ ಆಗಿ ಜೈಲು ಸೇರಿದ್ದರು. ಹಾಗಾಗಿ ಹಲವು ತಿಂಗಳ ಕಾಲ ‘ದಿ ಡೆವಿಲ್’ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.